ಬೆಂಗಳೂರು: ಶಂಕರನಗರದಲ್ಲಿ ಸಾವೊಂದು ಆತಂಕ ಸೃಷ್ಟಿಸಿದೆ. ಸಾವಿನ ಮನೆ ಮುಂದೆ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿರುವ ಘಟನೆ ನಡೆದಿದೆ. ಶಂಕರನಗರ ಸೀಲ್ಡೌನ್ ಆಗಿರುವ ಏರಿಯಾ. ಇಲ್ಲಿ ಕಳೆದ 3 ದಿನಗಳ ಹಿಂದೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆದರೆ ಆ ಮನೆಯವರು ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾಡದೆ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಮುಂಬೈನಲ್ಲಿರುವ ಮಕ್ಕಳು ಬರಬೇಕೆಂದು ಮನೆಯಲ್ಲೇ ಮೃತದೇಹ ಇರಿಸಿಕೊಂಡಿದ್ರು.
ಮೃತ ಮಹಿಳೆಯ ಮಕ್ಕಳು ಮುಂಬೈನಿಂದ ಆಗಮಿಸಿದ ಹಿನ್ನೆಲೆಯಲ್ಲಿ ಅವರಿಂದ ಕೊರೊನಾ ಹರಡುವ ಭೀತಿ ಜನರಲ್ಲಿ ಹೆಚ್ಚಾಗಿದೆ. ಸಾವಿನ ಮನೆ ಮುಂದೆಯೇ ಅಕ್ಕಪಕ್ಕದ ಮನೆಯವರು ಗಲಾಟೆ ಶುರು ಮಾಡಿದ್ದಾರೆ. ಕೊನೆಗೆ ಕುಟುಂಬಸ್ಥರು ಌಂಬುಲೆನ್ಸ್ನಲ್ಲಿ ಶವ ಕೊಂಡೊಯ್ದಿದ್ದಾರೆ.
Published On - 1:26 pm, Fri, 12 June 20