ಕೊರೊನಾ ಆತಂಕದಲ್ಲಿ ಒಂದು ಡೆಡ್ ಬಾಡಿಗೆ ಇಡೀ ಶಂಕರನಗರ ಗಡಗಡ..
ಬೆಂಗಳೂರಿನ ಶಂಕರನಗರ ಏರಿಯಾದಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾಗಿದ್ದು, 3 ದಿನಗಳ ಹಿಂದೆ ಇಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಆತಂಕದಲ್ಲಿರುವ ಸ್ಥಳೀಯ ನಿವಾಸಿಗಳು ಸಾವಿನ ಮನೆಯ ಮುಂದೆ ಗಲಾಟೆ ಮಾಡಿದ್ದಾರೆ. ಕೊರೋನಾ ಟೈಂನಲ್ಲಿ ಡೆಡ್ ಬಾಡಿ ಮುಂದೆ ನಡೀತು ಜನ್ರ ಗಲಾಟೆ.. ಏನಾಯಿತೆಂದ್ರೆ, ಮೃತ ಮಹಿಳೆಯ ಕುಟುಂಬ ಸದಸ್ಯರು ಮುಂಬೈನಲ್ಲಿರುವ ಮಕ್ಕಳು ಬರಬೇಕೆಂದು ಮೂರು ದಿನದಿಂದ ಮನೆಯಲ್ಲೇ ಮೃತದೇಹ ಇರಿಸಿಕೊಂಡಿದ್ದರು. ಮೃತ ಮಹಿಳೆಯ ಮಕ್ಕಳು ಮುಂಬೈನಿಂದ ಆಗಮಿಸಿದ ಹಿನ್ನೆಲೆಯಲ್ಲಿ […]
ಬೆಂಗಳೂರಿನ ಶಂಕರನಗರ ಏರಿಯಾದಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾಗಿದ್ದು, 3 ದಿನಗಳ ಹಿಂದೆ ಇಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಆತಂಕದಲ್ಲಿರುವ ಸ್ಥಳೀಯ ನಿವಾಸಿಗಳು ಸಾವಿನ ಮನೆಯ ಮುಂದೆ ಗಲಾಟೆ ಮಾಡಿದ್ದಾರೆ.
ಕೊರೋನಾ ಟೈಂನಲ್ಲಿ ಡೆಡ್ ಬಾಡಿ ಮುಂದೆ ನಡೀತು ಜನ್ರ ಗಲಾಟೆ.. ಏನಾಯಿತೆಂದ್ರೆ, ಮೃತ ಮಹಿಳೆಯ ಕುಟುಂಬ ಸದಸ್ಯರು ಮುಂಬೈನಲ್ಲಿರುವ ಮಕ್ಕಳು ಬರಬೇಕೆಂದು ಮೂರು ದಿನದಿಂದ ಮನೆಯಲ್ಲೇ ಮೃತದೇಹ ಇರಿಸಿಕೊಂಡಿದ್ದರು. ಮೃತ ಮಹಿಳೆಯ ಮಕ್ಕಳು ಮುಂಬೈನಿಂದ ಆಗಮಿಸಿದ ಹಿನ್ನೆಲೆಯಲ್ಲಿ ಮುಂಬೈನಿಂದ ಬಂದವರಿಂದ ಕೊರೊನಾ ಹರಡುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬಾಂಬೆಯಿಂದ ಬಂದವರಿಂದ ಇಲ್ಲಿ ನಮಗೆಲ್ಲ ಕೊರೋನಾ ಹಬ್ಬಿದ್ರೇ ಯಾರು ಹೊಣೆ ಅಂತಾ ಸಾವಿನ ಮನೆ ಮುಂದೆ ಅಕ್ಕಪಕ್ಕದ ಮನೆಯವರಿಂದ ಗಲಾಟೆ ನಡೆದಿದೆ. ಕೊನೆಗೆ ಕುಟುಂಬಸ್ಥರು ಆ್ಯಂಬುಲೆನ್ಸ್ನಲ್ಲಿ ಅಲ್ಲಿಂದ ಶವ ಕೊಂಡೊಯ್ದಿದ್ದಾರೆ. ಆಗ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ.
Published On - 4:41 pm, Fri, 12 June 20