ಹುಬ್ಬಳ್ಳಿಯಲ್ಲಿ ಲಾರಿ, ಖಾಸಗಿ ಬಸ್ ಅಪಘಾತ; ಸಂತಾಪ ಸೂಚಿಸಿದ ಹೆಚ್​ಡಿಕೆ

| Updated By: ವಿವೇಕ ಬಿರಾದಾರ

Updated on: May 24, 2022 | 9:09 AM

ಹುಬ್ಬಳ್ಳಿ ಹೊರ ವಲಯ ತಾರಿಹಾಳ ಬೈಪಾಸ್​ನಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಲಾರಿ, ಖಾಸಗಿ ಬಸ್ ಅಪಘಾತ; ಸಂತಾಪ ಸೂಚಿಸಿದ ಹೆಚ್​ಡಿಕೆ
ಹೆಚ್ ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ಹುಬ್ಬಳ್ಳಿ (Hubli-Dharwad) ಹೊರ ವಲಯ ತಾರಿಹಾಳ ಬೈಪಾಸ್​ನಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.  ನ್ಯಾಷನಲ್ ಟ್ರಾವೆಲ್ಸ್ ಬಸ್​ಗೆ ಲಾರಿ ಡಿಕ್ಕಿಯಾಗಿ 8 ಜನರು ಸಾವನ್ನಪ್ಪಿದ್ದರು. ಅಪಘಾತದಲ್ಲಿ 8 ಜನ ಮೃತಪಟ್ಟಿರುವುದು ತೀವ್ರ ದಿಗ್ಭ್ರಮೆ ಉಂಟುಮಾಡಿದೆ. ದುರಂತದಲ್ಲಿ ಅಸುನೀಗಿದ ನತದೃಷ್ಟರೆಲ್ಲರಿಗೂ ಚಿರಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ದಯಪಾಲಿಸಲಿ. ದುರಂತದಲ್ಲಿ 26 ಮಂದಿ ಗಾಯಗೊಂಡಿದ್ದು, ಗಾಯಾಳುಗಳೆಲ್ಲರು ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿಯನ್ನು ‘ಸಾವಿನ ಹೆದ್ದಾರಿ’ ಎಂದು ಜನರು ಹೇಳುತ್ತಿದ್ದಾರೆ. ಪದೇಪದೆ  ಈ ಹೆದ್ದಾರಿಯಲ್ಲಿ ರಸ್ತೆ ಅಪಘಾತವಾಗುತ್ತಿದೆ. ಅಧಿಕಾರಿಗಳ ಸೂಕ್ತ ಗಮನಹರಿಸಿ ಮತ್ತೆ ಅಪಘಾತ ಸಂಭವಿಸದಂತೆ ತಡಿಬೇಕು.

ಇದನ್ನು ಓದಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ
ಅಕಾಲಿಕ ಮಳೆಯಿಂದ ಸೈನಿಕ ಹುಳುವಿನ ಕಾಟ: ಕೀಟ ಭಾದೆಯಿಂದ ಕಂಗಾಲಾದ ರೈತ
Love Guru: ಋತುವಿಲಾಸಿನಿ : ‘ಏನ್​ ಧೈರ್ಯನೇಮಾ ನಿಂದು, ಲವ್​ಗುರು ಆಗೋಗ್ಬಿಟ್ಯಲ್ಲ!
GT vs RR: ಐಪಿಎಲ್​​ನಲ್ಲಿಂದು ಗುಜರಾತ್-ರಾಜಸ್ಥಾನ್ ನಡುವೆ ಮೊದಲ ಕ್ವಾಲಿಫೈಯರ್: ಗೆದ್ದ ತಂಡ ಫೈನಲ್​ಗೆ ಲಗ್ಗೆ
Kabzaa Movie: ‘ಕಬ್ಜ’ ತಡವಾಗುತ್ತಿರುವುದು ಏಕೆ? ಟೀಸರ್ ರಿಲೀಸ್ ಯಾವಾಗ? ಇಲ್ಲಿದೆ ಉತ್ತರ

ಹುಬ್ಬಳ್ಳಿಯಲ್ಲಿ ಲಾರಿ, ಖಾಸಗಿ ಬಸ್ ಮುಖಾಮುಖಿ: ಮೃತರ ಸಂಖ್ಯೆ 8ಕ್ಕೆ

ಹುಬ್ಬಳ್ಳಿಯ (Hubli-Dharwad) ತಾರಿಹಾಳ ಬೈಪಾಸ್​ನಲ್ಲಿಲಾರಿ, ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಗಾಯಗೊಂಡಿರುವ 25 ಮಂದಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಸುಮಾರು 12 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ಕೊಲ್ಹಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್​ ಬಸ್,​ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಸೇರಿದಂತೆ ಮೂವರು ಮೃತಪಟ್ಟರು. ಖಾಸಗಿ ಬಸ್​ನಲ್ಲಿದ್ದ ನಾಲ್ವರು ಮೃತಪಟ್ಟರು. ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಲಾಬೂರಾವ್ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಇದನ್ನು ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ನ್ಯಾಷನಲ್ ಟ್ರಾವೆಲ್ಸ್​ ಬಸ್ ಚಾಲಕರಾದ ಅತಾವುಲ್ಲಾ, ನಾಗರಾಜು, ಪ್ರಯಾಣಿಕರಾದ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಬಾಬುಸಾಬ್ (55), ಮೈಸೂರಿನ ಮೊಹಮ್ಮದ್ ದಯಾನ್ (17) ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ 25 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಅಪಘಾತದಿಂದ ನಜ್ಜುಗುಜ್ಜಾಗಿರುವ ಎರಡೂ ವಾಹನಗಳನ್ನು ಪೊಲೀಸರು ತೆರವುಗೊಳಿಸಿ, ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:09 am, Tue, 24 May 22