ಅಕಾಲಿಕ ಮಳೆಯಿಂದ ಸೈನಿಕ ಹುಳುವಿನ ಕಾಟ: ಕೀಟ ಭಾದೆಯಿಂದ ಕಂಗಾಲಾದ ರೈತ
ಎಲ್ಲಿ ನೋಡಿದರಲ್ಲಿ ಭೂಮಿಯಿಂದ ಮೆಲೇಳುತ್ತಿರುವ ಕೀಟಗಳು, ಹಸಿ ಹುಲ್ಲು, ನಾಟಿ ಮಾಡಿದ ಭತ್ತದ ಬೀಜಗಳು,ಮೊಳಕೆಯೊಡೆದ ಭತ್ತದ ಸಸಿ ಹೀಗೆ ಹಸಿರು ಕಾಣುವ ಎಲ್ಲವನ್ನೂ ತಿಂದು ಮುಕ್ಕುತ್ತಿರು ಕೀಟ.
ಕಾರವಾರ: ಅಬ್ಬರದ ಅಕಾಲಿಕ ಮಳೆ ಬಿಡುವು ಕೊಟ್ಟಿದೆ. ಇನ್ನೇನು ಮುಂಗಾರು ಪ್ರಾರಂಭಕ್ಕೆ ಬಿತ್ತನೆ ಕೆಲಸ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೀಟ ಭಾದೆ ಕಾಣಿಸಿಕೊಂಡಿದೆ. ಇದೀಗ ಈ ವಿಚಿತ್ರ ಕೀಟಗಳು ರೈತನ ಜಮೀನಿಗೆ ನುಗ್ಗಿ ಹೈರಾಣಾಗಿಸುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ರೈತರ ಭೂಮಿಗೆ ವಿಚಿತ್ರ ಕೀಟ ಲಗ್ಗೆಯಿಟ್ಟಿವೆ. ಮುಂಗಾರು ಮಳೆಗೆ ಬಿತ್ತಿದ ಭತ್ತದ ಬೀಜಗಳು ಕೀಟಕ್ಕೆ ಆಹುತಿಯಾಗಿದೆ. ಹೊನ್ನಾವರದ ಕಡ್ನೀರು, ಶಿರೂರು, ಹೊದ್ಕೆ, ತೊರಗೋಡು, ಬಾಸಳ್ಳಿ ಗ್ರಾಮದ ಕೃಷಿ ಭೂಮಿಗೆ ಲಗ್ಗೆ ಇಟ್ಟಿವೆ.
ಎಲ್ಲಿ ನೋಡಿದರಲ್ಲಿ ಭೂಮಿಯಿಂದ ಮೆಲೇಳುತ್ತಿರುವ ಕೀಟಗಳು, ಹಸಿ ಹುಲ್ಲು, ನಾಟಿ ಮಾಡಿದ ಭತ್ತದ ಬೀಜಗಳು,ಮೊಳಕೆಯೊಡೆದ ಭತ್ತದ ಸಸಿ ಹೀಗೆ ಹಸಿರು ಕಾಣುವ ಎಲ್ಲವನ್ನೂ ತಿಂದು ಮುಕ್ಕುತ್ತಿರು ಕೀಟ. ಹೌದು ಅಕಾಲಿಕ ಮಳೆಯಿಂದ ತೋಟಗಾರಿಕಾ ಬೆಳೆಯಲ್ಲಿ ನಷ್ಟ ಹೊಂದಿದ್ದ ರೈತ ಇನ್ನೇನು ಮುಂಗಾರು ಪ್ರಾರಂಭವಾಗುತ್ತಿದೆ. ಭತ್ತದ ನಾಟಿ ಮಾಡಬೇಕು ಎಂದು ಎಲ್ಲಾ ಸಿದ್ದತೆ ಮಾಡಿಕೊಂಡಿರುವಾಗ ಈ ಕೀಟಗಳು ಬಿಸಿಲ ತಾಪಕ್ಕೆ ಭೂಮಿಯಿಂದ ಮೇಲೆದ್ದು ಬರುತ್ತಿವೆ. ಸಿಕ್ಕ ಸಿಕ್ಕದ್ದನ್ನು ತಿಂದು ಮುಕ್ಕಿಸುತಿದ್ದು ರೈತ ಜಮೀನಿಗೆ ಕಾಲಿಡಲು ಭಯಪಡುವಂತೆ ಮಾಡಿದೆ. ಸ್ಥಳೀಯ ಭಾಷೆಯಲ್ಲಿ ಸೈನಿಕ ಹುಳು ಎಂದು ಕರೆಯುವ ಈ ಕೀಟಗಳು ಇನ್ನೂ ಲಾರ್ವ ಹಂತದಲ್ಲಿದ್ದು, ಈಗಲೇ ಸಾಕಷ್ಟು ಹಾನಿ ಮಾಡಿದ್ದು ರೈತನಿಗೆ ಭಯ ಹುಟ್ಟಿಸಿದೆ.
ಸದ್ಯ ಈ ಹುಳುಗಳು ಯಾವ ಕುಲಕ್ಕೆ ಸೇರಿವೆ ಎಂಬುದು ಕೀಟಶಾಸ್ತ್ರಜ್ಞರಿಂದ ತಿಳಿದುಬರಬೇಕಿದೆ. ಇನ್ನು ಈ ಹುಳುಗಳು ಲಾರ್ವ ಹಂತದಲ್ಲಿದ್ದು, ಎತೇಚ್ಚ ರೈತರ ಭೂಮಿಯಲ್ಲಿ ಕಂಡುಬರುತ್ತಿರುವುದರಿಂದ ಕೂಡಲೇ ಯಾವ ಭೂಮಿಯಲ್ಲಿ ಹಬ್ಬಿದೆಯೋ ಆ ಭೂಮಿಯಲ್ಲಿ ವಿಷ ಪ್ರಾಶನ ಇಡುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ತಿಳಿಸಿದ್ದಾರೆ. ಕೋಟಿಗಟ್ಟಲೇ ಈ ಹುಳುಗಳು ಉತ್ಪತ್ತಿಯಾಗಿದ್ದರಿಂದ ದೊಡ್ಡ ಮಳೆ ಬರುವ ವರೆಗೂ ಭತ್ತದ ಬೀಜವನ್ನು ಅಗೆ ಹಾಕದಂತೆ (ಬೀಜ ಬಿತ್ತನೆ) ರೈತರಿಗೆ ಸೂಚನೆ ನೀಡಲಾಗಿದೆ. ಅಕಾಲಿಕ ಮಳೆಯಿಂದ ಆದ ಹಾನಿಯನ್ನ ಸಹಿಸಿಕೊಂಡು ಮತ್ತೆ ಬಿತ್ತನೆ ಮಾಡಬೇಕು ಎನ್ನುವಾಗಲೇ ರೈತನಿಗೆ ಈ ಹುಳುಗಳ ಕಾಟ ಆತ್ಮಸ್ಥರ್ಯವನ್ನು ಕುಂದಿಸಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ರಾಜ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.