Fact Check ‘ಇವತ್ತಲ್ಲ ನಾಳೆ ಅಲ್ಲಿಯೂ ಅಗೆಯಲಾಗುತ್ತದೆ’ ಎಂದು ಮೋದಿ ಭಾಷಣದಲ್ಲಿ ಹೇಳಿದ್ದು ಜ್ಞಾನವಾಪಿ ಬಗ್ಗೆ ಅಲ್ಲ, ಇನ್ಯಾವುದರ ಬಗ್ಗೆ?
.'ಪಿಎಂ ಮೋದಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು' ಶೀರ್ಷಿಕೆಯ ವಿಡಿಯೊದ 11.50ನೇ ನಿಮಿಷದಲ್ಲಿರುವ ಭಾಗವೇ ಈಗ ವೈರಲ್ ಆಗಿರುವುದು.
ಜ್ಞಾನವಾಪಿ ಮಸೀದಿ (Gyanvapi Mosque) ಭೂ ವಿವಾದ ಪ್ರಕರಣದ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನರನ್ನುದ್ದೇಶಿಸಿ ಮಾತನಾಡಿರುವ 29 ಸೆಕೆಂಡುಗಳ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ಮೋದಿಯವರು ಯಹಾ ಭೀ ಖೂದಾ, ವಹಾಂ ಭೀ ಖೂದಾ, ಜಹಾಂ ಆಜ್ ನಹೀಂ ಖೂದಾ, ವಹಾಂ ಕಲ್ ಖೂದಾ (ಇಲ್ಲಿ ಅಗೆದಿದ್ದಾರೆ, ಅಲ್ಲಿ ಅಗೆದಿದ್ದಾರೆ ಮತ್ತು ಎಲ್ಲಿ ಅಗೆಯುವುದಿಲ್ಲವೋ ಅದನ್ನು ನಾಳೆ ಅಗೆಯಲಾಗುತ್ತದೆ) ಎಂದು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ “ಧಾರ್ಮಿಕ ಸ್ಥಳಗಳನ್ನು ಅಗೆಯುವ” ಬಗ್ಗೆ ಮಾತನಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಲವಾರು ಬಳಕೆದಾರರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ 2017ರ ಈ ವಿಡಿಯೊ ವಾರಣಾಸಿಯಲ್ಲಿ(Varanasi) ಚುನಾವಣಾ ರ್ಯಾಲಿಯಲ್ಲಿದ್ದು. ಅಲ್ಲಿ ಮೋದಿ ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡು ಯುಪಿಯ ರಸ್ತೆಗಳ ಸ್ಥಿತಿಯನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಅಂದರೆ ಈ ಭಾಷಣ ರಾಜ್ಯದಲ್ಲಿ ಚುನಾವಣೆಗೂ ಮುನ್ನ ನಡೆದಿದೆ. ಈ ವಿಡಿಯೊವನ್ನು ಸುದರ್ಶನ್ ನ್ಯೂಸ್ ನ ಪ್ರಧಾನ ಸಂಪಾದಕ ಸುರೇಶ್ ಚಾವಂಕೆ ಸೇರಿದಂತೆ ಹಲವಾರು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್ ಈ ಬಗ್ಗೆ ದಿ ಕ್ವಿಂಟ್ ಫ್ಯಾಕ್ಟ್ ಚೆಕ್ (Fact Check) ಮಾಡಿದ್ದು ವಿಡಿಯೊ ಪರಿಶೀಲನಾ ಸಾಧನವಾದ InVID ಅನ್ನು ಬಳಸಿಕೊಂಡು ವಿಡಿಯೊವನ್ನು ಒಂದಕ್ಕಿಂತ ಹೆಚ್ಚು ಕೀಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಆಗ 5 ಮಾರ್ಚ್ 2017 ರಂದು ನರೇಂದ್ರ ಮೋದಿಯವರ ಅಧಿಕೃತ ಯುಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊ ಸಿಕ್ಕಿದೆ.’ಪಿಎಂ ಮೋದಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು’ ಶೀರ್ಷಿಕೆಯ ವಿಡಿಯೊದ 11.50ನೇ ನಿಮಿಷದಲ್ಲಿರುವ ಭಾಗವೇ ಈಗ ವೈರಲ್ ಆಗಿರುವುದು.
ರಸ್ತೆಗಳ ಪರಿಸ್ಥಿತಿಯನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಇಲ್ಲಿ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ಸಂಸದರು ನನ್ನನ್ನು ಭೇಟಿ ಮಾಡಿ ಉತ್ತರ ಪ್ರದೇಶದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಹೇಳಿ ಎಂದು ನಾನಂದೆ.’ನಮ್ಮ ಉತ್ತರ ಪ್ರದೇಶವನ್ನು ಇಲ್ಲಿ ಅಗೆದು ಹಾಕಲಾಗಿದೆ, ಅಲ್ಲಿ ಅಗೆದು ಹಾಕಲಾಗಿದೆ. ಮತ್ತು ಅದು ಎಲ್ಲಿ ಅಗೆದಿಲ್ಲ, ನಾಳೆ ಅಗೆಯಲಾಗುತ್ತದೆ. ಈಗ ಈ ಪರಿಸ್ಥಿತಿಯನ್ನುಂಟು ಮಾಡಿದ್ದು ಯಾರು? ನೇತಾಡುವ ವಿದ್ಯುತ್ ತಂತಿಗಳ ಸಮಸ್ಯೆಯನ್ನು ಪರಿಹರಿಸಲು ಕೇಂದ್ರವು ಉತ್ತರ ಪ್ರದೇಶಕ್ಕೆ ಕೇಬಲ್‌ಗಳನ್ನು ನೀಡಿದೆ. ಕೆಲಸ ಮುಗಿದ ನಂತರವೂ ರಾಜ್ಯವು ರಸ್ತೆಗಳನ್ನು ಅಗೆದು ಬಿಟ್ಟಿದೆ ಎಂದು ಮೋದಿ ಟೀಕೆ ಮಾಡುತ್ತಾರೆ. 5 ಮಾರ್ಚ್ 2017 ರಿಂದ ಮೋದಿಯವರ ಭಾಷಣದ ಸುದೀರ್ಘ ಆವೃತ್ತಿಯನ್ನು ಬಿಜೆಪಿಯ ಅಧಿಕೃತ ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದೀಗ ಫ್ಯಾಕ್ಟ್ ಚೆಕ್ನಿಂದ ಗೊತ್ತಾಗಿರುವ ವಿಷಯ ಏನೆಂದರೆ ಜ್ಞಾನವಾಪಿ ಮಸೀದಿಯನ್ನು ಅಗೆಯುವುದನ್ನು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿಲ್ಲ. ವಾರಣಾಸಿಯಲ್ಲಿನ ರ್ಯಾಲಿಯಲ್ಲಿ 2017ರಲ್ಲಿ ಅಗೆದ ರಸ್ತೆಗಳ ಕುರಿತು ಅವರು ಮಾತನಾಡಿದ್ದಾರೆ.
ಹೆಚ್ಚಿನ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ