ಪಿಇ‌ಎಸ್ ಕಾಲೇಜು ಕ್ಯಾಂಟಿನ್ ಬಳಿ ಮದ್ಯದ ಅಮಲಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರ ಸಾವು

| Updated By: ಸಾಧು ಶ್ರೀನಾಥ್​

Updated on: Jan 07, 2022 | 10:41 AM

ಗುರುವಾರ (ಜನವರಿ 6) ರಾತ್ರಿ 10 ಗಂಟೆ ಸುಮಾರಿಗೆ ನಾಲ್ವರು ಸ್ನೇಹಿತರು ನಾಗರಭಾವಿಯ ರೆಸ್ಟೊರೆಂಟ್ ನಲ್ಲಿ ಪಾರ್ಟಿ ಮಾಡಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಪಿಇ‌ಎಸ್ ಕಾಲೇಜು ಕ್ಯಾಂಟಿನ್ ಬಳಿ ಮದ್ಯದ ಅಮಲಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರ ಸಾವು
ಪಿಇ‌ಎಸ್ ಕಾಲೇಜು ಕ್ಯಾಂಟಿನ್ ಬಳಿ ಮದ್ಯದ ಅಮಲಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರ ಸಾವು
Follow us on

ಬೆಂಗಳೂರು: ಮದ್ಯದ ಅಮಲಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ, ಇಬ್ಬರು ಕೊನಯುಸಿರೆಳೆದಿದ್ದಾರೆ. ಬೆಂಗಳೂರಿನ ಪಿಇ‌ಎಸ್ ಕಾಲೇಜಿನ ಇಂದಿರಾ ಕ್ಯಾಂಟಿನ್ ಬಳಿ ಇರುವ ರಿಂಗ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್​​ನಲ್ಲಿದ್ದ ಲಕ್ಷ್ಮೀಶ(32) ಮತ್ತು ರಾಘವೇಂದ್ರ(26) ಸಾವನ್ನಪ್ಪಿದವರು. ಗುರುವಾರ (ಜನವರಿ 6) ರಾತ್ರಿ 10 ಗಂಟೆ ಸುಮಾರಿಗೆ ನಾಲ್ವರು ಸ್ನೇಹಿತರು ನಾಗರಭಾವಿಯ ರೆಸ್ಟೊರೆಂಟ್ ನಲ್ಲಿ ಪಾರ್ಟಿ ಮಾಡಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ನಾಲ್ವರೂ ಸ್ನೇಹಿತರು ನಾಗರಭಾವಿಯ ರೆಸ್ಟೊರೆಂಟ್ ನಲ್ಲಿ ಪಾರ್ಟಿ ಮಾಡಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ರಕ್ಷಿತ್ ಮತ್ತು ಗೌತಮ್ ಒಂದು ಬೈಕ್ ನಲ್ಲಿದ್ರು. ಲಕ್ಷ್ಮೀಶ ಮತ್ತು ರಾಘವೇಂದ್ರ ಮತ್ತೊಂದು ಬೈಕ್ ನಲ್ಲಿ ಬರ್ತಿದ್ರು. ಅವರಿಬ್ಬರೂ ಮದ್ಯಪಾನ ಮಾಡಿ ಹೆಲ್ಮೆಟ್ ಧರಿಸದೇ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಕೆಎ 02 ಕೆಜೆ 2613 ಸುಜುಕಿ ಜಿಕ್ಸರ್ ಬೈಕ್ ನಲ್ಲಿ ಬರ್ತಿದ್ದ ಲಕ್ಷ್ಮೀಶ ತನ್ನ ಬೈಕ್ ಅನ್ನು ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದಿದ್ದಾನೆ. ರಿಂಗ್ ರಸ್ತೆ ಸೆಂಟರ್ ಮಿಡೀಯನ್ ಗೆ ಡಿಕ್ಕಿ ಹೊಡೆದಿದ್ದಾನೆ. ತಲೆಗೆ ಪೆಟ್ಟಾಗಿ ರಕ್ತದ ಮಡುವಲ್ಲಿ ಇಬ್ಬರೂ ಬಿದ್ದಿದ್ದರು. ಸ್ಥಳೀಯರ ಸಹಾಯದಿಂದ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕರಿಬ್ಬರೂ ಸಾವನ್ನಪ್ಪಿದ್ದಾರೆ.

ನಾಗರಬಾವಿ ಬಳಿ ರಿಂಗ್ ರಸ್ತೆಯಲ್ಲಿ ಅಪಘಾತ; ಬೈಕ್ ಸವಾರ ಸಾವು:
ಬೆಂಗಳೂರಿನ ರಿಂಗ್ ರಸ್ತೆಯಲ್ಲಿ ನಾಗರಭಾವಿ‌ ಸರ್ಕಲ್ ನ ಅಂಡರ್ ಪಾಸ್ ಹತ್ತಿರ ಬೈಕ್ ಅಪಘಾತ ನಡೆದಿದ್ದು, ಸವಾರ ಭಾಸ್ಕರ್(38) ಸಾವನ್ನಪ್ಪಿದ್ದಾರೆ. ನಾಗರಭಾವಿ ರಿಂಗ್ ರಸ್ತೆ ಮೀಡಿಯನ್ ಗೆ ಡ್ಯೂಕ್ ಬೈಕ್ ಡಿಕ್ಕಿಯಾಗಿ ಭಾಸ್ಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎ 05 ಜೆಕೆ 5151 ನಂಬರ್ ಕೆಟಿಎಂ ಡ್ಯೂಕ್ ಅಪಘಾತಕ್ಕೀಡಾದ ಬೈಕ್. ಅತಿವೇಗ ಮತ್ತು ಅಜಾಗರೂಕ ಚಾಲನೆ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ರಿಯಲ್ಲಿ ಘಟನೆ ನಡೆದಿದೆ.

ಕೆಲಸಕ್ಕಿದ್ದ ಅಂಗಡಿಯಲ್ಲೇ 30 ಲಕ್ಷ ರೂ. ದೋಚಿ ಪರಾರಿ:
ಬೆಂಗಳೂರಿನ ಕೆ.ಆರ್​.ಮಾರ್ಕೆಟ್​ ಬಳಿ ಎಲೆಕ್ಟ್ರಿಕಲ್ ಮಳಿಗೆಯೊಂದರಲ್ಲಿ ಎಂಟು ತಿಂಗಳಿಂದ ಕೆಲಸಕ್ಕಿದ್ದ ಯುವಕನೊಬ್ಬ 30 ಲಕ್ಷ ರೂ. ದೋಚಿ ಪರಾರಿಯಾಗಿದ್ದಾನೆ. ರಾಜಸ್ಥಾನ‌ ಮೂಲದ ವ್ಯಕ್ತಿ ಕ್ಯಾಶ್ ಕೌಂಟರ್​ನಲ್ಲಿದ್ದ 30 ಲಕ್ಷ ಹಣ ಕದ್ದು ಎಸ್ಕೇಪ್ ಆಗಿದ್ದಾನೆ. ಕಳೆದ ತಿಂಗಳು 21ರಂದು ಪ್ರಕರಣ ನಡೆದಿದೆ. ಅಂಗಡಿ ಮಾಲೀಕ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಕೆಆರ್ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಪುನೀತ್​ಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಗೌರವ; ಮೊದಲ ದಿನವೇ ಅಪ್ಪು ಬಗ್ಗೆ ಮಾತು

Published On - 8:38 am, Fri, 7 January 22