ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ನಗರದಲ್ಲಿ ಪದೇಪದೆ ಮುಖ್ಯ ರಸ್ತೆಗಳು ಕುಸಿಯುತ್ತಿವೆ. ಮಂಜುನಾಥ್ ನಗರದಿಂದ ಬಸವೇಶ್ವರನಗರಕ್ಕೆ ಹೋಗುವ ಮುಖ್ಯ ರಸ್ತೆ ಕುಸಿದು ಬಿದ್ದಿದ್ದು ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಈಗ ರಸ್ತೆ ಕುಸಿದ ಕಾರಣ ದೊಡ್ಡ ಕಲ್ಲು ಹಾಕಿ ಸ್ಥಳೀಯರು ಗುಂಡಿ ಮುಚ್ಚಿದ್ದಾರೆ.
ಮೊನ್ನೆ ಸಂಜೆ ಮಂಜುನಾಥ್ ನಗರದ ಇಂಡಿಯಾನ್ ಗ್ಯಾಸ್ ಸಮೀಪ ರಸ್ತೆ ಕುಸಿದು ಗುಂಡಿ ಬಿದ್ದಿದೆ. ಜಲಮಮಂಡಳಿ ಫೈಪ್ ಒಡೆದು ಗುಂಡಿಯೊಳಗೆ ನಿರಂತರವಾಗಿ ನೀರು ಸೋರಿಕೆಯಾಗಿದೆ. ಗುಂಡಿ ಬಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಅಪಾಯದ ಅರಿವೇ ಇಲ್ಲದೆ ಈ ರಸ್ತೆಯಲ್ಲಿ ವಾಹನ ಸಂಚಾರ ನಡೆಯುತ್ತಿದೆ. ರಸ್ತೆಯ ಗುಂಡಿಯೊಳಗಡೆ 7 ಅಡಿ ಉದ್ದ ಕುಸಿದಿದೆ. ದೊಡ್ದ ವಾಹನ ಬಂದ್ರೆ ರಸ್ತೆ ಕುಸಿಯುವ ಸಾಧ್ಯತೆ ಇದೆ.ಸುಮಾರು 4 ಅಡಿಯಷ್ಟು ಗುಂಡಿ ಬಿದ್ದಿದೆ. ಮೊನ್ನೆ ಸಂಜೆ ರಸ್ತೆ ಕುಸಿದು ಗುಂಡಿ ಬಿದ್ದರೂ ಇನ್ನೂ ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ. ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: Mysore Tiger: ರಾಣೇಬೆನ್ನೂರು ನಗರದ ಮೈಸೂರು ಹುಲಿ ಖ್ಯಾತಿಯ ಹೋರಿ ಸಾವು, ಅಭಿಮಾನಿಗಳು ಕಣ್ಣೀರು
ಇನ್ನು ಬಸವೇಶ್ವರನಗರದ ಶಾಲೆಯ ಮುಂದೆಯೇ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿದೆ. ಇದುವರೆಗೂ ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಿಲ್ಲ. ಕಳೆದ ಎರಡು ತಿಂಗಳಿನಿಂದ ಶಾಲೆ ಎದುರು ಗುಂಡಿ ಬಿದ್ದಿದೆ. ಈ ಕುರಿತು ದೂರು ನೀಡಿದ್ರೂ ರಸ್ತೆ ಗುಂಡಿ ಮುಚ್ಚದ ಹಿನ್ನೆಲೆ ಸ್ಥಳೀಯರಿಂದಲೇ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯ ನಡೆದಿದೆ.
ಬೆಂಗಳೂರಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದೆ. ಯಾರ ಭಯವಿಲ್ಲದೇ ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ. ಶೋಕಿಗಾಗಿ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿದ್ದಾರೆ. ನಗರದ ಮುಖ್ಯ ರಸ್ತೆಗಳಲ್ಲಿ ರೀಲ್ಸ್ ಶೋಕಿ ಇರುವ ಕೆಲ ಪುಂಡರು ವ್ಹೀಲಿಂಗ್ ಮಾಡಿ ವಿಡಿಯೋ ಮಾಡಿದ್ದಾರೆ. ಅಲ್ಲದೆ ವ್ಹೀಲಿಂಗ್ ಜೊತೆ ಅಸಭ್ಯ ಸಹ್ನೆ ಮಾಡಿ ವಿಡಿಯೋ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ಕಿರಿ ಕಿರಿಯಾಗುತ್ತಿದ್ದು ಸಂಚಾರಿ ನಿಯಮ ಇವರಿಗೆ ಅನ್ವಯವಾಗಲ್ವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಕಿಕ್ ಮಾಡಿ
Published On - 1:12 pm, Mon, 30 January 23