ಬೆಂಗಳೂರು, ಜೂ.07: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸಂಜೆಯಾಗುತ್ತಿದ್ದಂತೆ ಭರ್ಜರಿ ಮಳೆ ಆಗುತ್ತಿದ್ದು, ಇಂದು ಕೂಡ ಸಾಯಂಕಾಲ ಆಗುತ್ತಿದ್ದಂತೆ ಅರ್ಧ ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಭಾರಿ ಮಳೆಗೆ ಸುಬ್ಬಯ್ಯ ಸರ್ಕಲ್(Subbaiah circle) ಬಳಿ ರಸ್ತೆ ಕುಸಿದಿದೆ. ಈ ಹಿನ್ನಲೆ ಹಲಸೂರು ಗೇಟ್ ಟ್ರಾಫಿಕ್ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ರಸ್ತೆ ಕುಸಿದರೂ ಬಿಬಿಎಂಪಿ (BBMP) ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ.
ಇವತ್ತು ಸುರಿದ ಮಳೆಗೆ ಮಳೆಯಿಂದ ರಿಚಮಂಡ್ ಸರ್ಕಲ್ನಿಂದ ಕಾರ್ಪೊರೇಷನ್ ಕಡೆಗೆ ತೆರಳುವ ಮಾರ್ಗದಲ್ಲಿ ರಸ್ತೆ ಕಳೆದ 2 ಗಂಟೆ ಹಿಂದೆ ಕುಸಿತವಾಗಿದ್ದು, ರಸ್ತೆ ಕೆಳಗಡೆ ಅಂಡರ್‌ಗ್ರೌಂಡ್ ಡ್ರೈನೇಜ್ ಇರುವ ಕಾರಣ ಮಳೆಯಾದರೆ ಇನ್ನೂ ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಇದರಿಂದ ಕೆಲಸ ಮುಗಿಸಿ ಮನೆಗೆ ತೆರಳುವವರಿಗೆ ಟ್ರಾಫಿಕ್ ಬಿಸಿ ತಟ್ಟಿದ್ದು, ರಸ್ತೆಯಲ್ಲಿಯೇ ಪರದಾಡುವಂತಾಗಿದೆ.
ಇದನ್ನೂ ಓದಿ:ಒಂದೇ ಮಳೆಗೆ ಕೆರೆಯಂತಾದ ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣ, ಶಾಸಕ ಶಾಂತನಗೌಡರೇ ಈ ಕಡೆ ಬರಬೇಡಿ!
ಇಂದಿನಿಂದ 10 ನೇ ತಾರೀಖಿನವರೆಗೂ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ನೀಡಿದ್ದು, ರಾಜ್ಯದಲ್ಲಿ ಒಂದು ವಾರ ಭರ್ಜರಿ ಮಳೆಯಾಗಲಿದೆ ಹಾಗೂ ಜೂನ್ 6 ರಿಂದ 8 ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಾಗೂ ಜೂನ್ 8 ರಿಂದ 12 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಜೊತೆಗೆ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತಹ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಚ್ಚರವಾಗಿರಲು ಹವಾಮಾನ ಇಲಾಖೆ ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Fri, 7 June 24