ಸೋಲುವ ನಿರೀಕ್ಷೆ ಇರಲಿಲ್ಲ ಆದರೆ ಉತ್ತಮ ಹೋರಾಟ ನಡೆಸಿದ್ದೇವೆ: ಸಂಯುಕ್ತಾ ಪಾಟೀಲ್
ತಮ್ಮ ಲೆಕ್ಕಾಚಾರ ತಪ್ಪಿದ್ದೆಲ್ಲಿ ಅಂತ ಪಕ್ಷದ ಹಿರಿಯ ನಾಯಕರ ಜೊತೆ ಕೂತು ಆತ್ಮಾವಲೋಕನ ಮಾಡಿಕೊಳ್ಳಲಿದ್ದೇನೆ, ಆದರೆ ಕ್ಷೇತ್ರದಲ್ಲಿ ಕೆಲಸ ಮುಂದುವರಿಸುತ್ತೇವೆ, ಮುಂದಿನ ಸಲ ಇನ್ನಷ್ಟು ಪ್ರಬಲ ಹೋರಾಟ ಮಾಡಿ ಜಯಭೇರಿ ಬಾರಿಸುತ್ತೇವೆ ಎಂದು ಅವರು ಹೇಳಿದರು.
ಬೆಂಗಳೂರು: ಇಂದು ಕೆಪಿಸಿಸಿ ಕಚೇರಿಯ ಬಳಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಬಾಗಲಕೋಟೆಯ ಪರಾಜಿತ ಅಭ್ಯರ್ಥಿ ಸಂಯುಕ್ತಾ ಪಾಟೀಲ್ (Samyukta Patil) ನಿನ್ನೆ ಬಾಗಲಕೋಟೆಯಲ್ಲಿ ಹೇಳಿದ್ದನ್ನು ಪುನರಾವರ್ತಿಸಿದರು. ಸೋಲಿನ ನಿರೀಕ್ಷೆ ಖಂಡಿತ ಇರಲಿಲ್ಲ, ಆದರೆ ಕೇವಲ ಒಂದು ತಿಂಗಳ ಅವಧಿಯ ಪ್ರಚಾರದ ನಂತರ ಉತ್ತಮ ಫೈಟ್ (good fight) ನೀಡಿದ್ದೇವೆ, 6 ಲಕ್ಷಕ್ಕಿಂತ ಹೆಚ್ಚು ಮತದಾರರು ನನಗೆ ವೋಟು ನೀಡಿದ್ದಾರೆ ಅಂದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಸುಮಾರಿ ಒಂದು ಲಕ್ಷ ವೋಟು (one lakh votes) ಜಾಸ್ತಿ ಪಡೆದಿದ್ದೇನೆ, ಅದರ ಬಗ್ಗೆ ಹೆಮ್ಮೆ ಇದೆ ಎಂದು ಸಂಯುಕ್ತಾ ಪಾಟೀಲ್ ಹೇಳಿದರು. ಈ ಹೋರಾಟದ ಶ್ರೇಯಸ್ಸು ಪಕ್ಷದ ಕಾರ್ಯಕರ್ತರಿಗೆ ಸಲ್ಲಬೇಕು,ಅವರಿಗೆ ಮತ್ತು ತನಗೆ ಭಾರೀ ಸಂಖ್ಯೆಯಲ್ಲಿ ಮತ ನೀಡಿದ ಮತದಾರರಿಗೆ ಸಲ್ಲಬೇಕು, ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಸಂಯುಕ್ತಾ ಹೇಳಿದರು. ತಮ್ಮ ಲೆಕ್ಕಾಚಾರ ತಪ್ಪಿದ್ದೆಲ್ಲಿ ಅಂತ ಪಕ್ಷದ ಹಿರಿಯ ನಾಯಕರ ಜೊತೆ ಕೂತು ಆತ್ಮಾವಲೋಕನ ಮಾಡಿಕೊಳ್ಳಲಿದ್ದೇನೆ, ಆದರೆ ಕ್ಷೇತ್ರದಲ್ಲಿ ಕೆಲಸ ಮುಂದುವರಿಸುತ್ತೇವೆ, ಮುಂದಿನ ಸಲ ಇನ್ನಷ್ಟು ಪ್ರಬಲ ಹೋರಾಟ ಮಾಡಿ ಜಯಭೇರಿ ಬಾರಿಸುತ್ತೇವೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಯುಕ್ತಾ ಪಾಟೀಲ್ ಪರ ಪ್ರಚಾರಕ್ಕೆ ಹೋಗುತ್ತಿಲ್ಲ, ಪತಿ ಹೇಳಿದ್ದು ಸಹ ಸುಳ್ಳು: ವೀಣಾ ಕಾಶಪ್ಪನವರ್