ಪಠ್ಯ ಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಎಡವಟ್ಟು; ಗೊಂಬೆ ಕಲಿಸುವ ನೀತಿ ಪಾಠದ ಕವಿ ಹೆಸರು ತಿರುಚಿದ ಸಮಿತಿ, ಚಿ.ಉದಯ ಶಂಕರ್ ಬದಲಿಗೆ R.N.ಜಯಗೋಪಾಲ್ ಹೆಸರು

| Updated By: ಆಯೇಷಾ ಬಾನು

Updated on: Jun 05, 2022 | 8:48 PM

ಕನ್ನಡ ಭಾಷೆಯ 7ನೇ ತರಗತಿಯ ಶಾಲಾ ಪಠ್ಯದಲ್ಲಿ ಎಡವಟ್ಟು ನಡೆದಿದೆ. ಗೊಂಬೆ ಕಲಿಸುವ ನೀತಿ ಪಾಠದ ಕವಿ ಹೆಸರನ್ನು ರೋಹಿತ್ ಚಕ್ರತೀರ್ಥ ಸಮಿತಿ ತಿರುಚಿದೆ ಎನ್ನಲಾಗುತ್ತಿದೆ. ಚಿ.ಉದಯ ಶಂಕರ್ ಬರೆದ ಹಾಡನ್ನ R.N.ಜಯಗೋಪಾಲ್ ಬರೆದಿದ್ದಾರೆ ಎಂದು ಹೆಸರು ಹಾಕಲಾಗಿದೆ.

ಪಠ್ಯ ಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಎಡವಟ್ಟು; ಗೊಂಬೆ ಕಲಿಸುವ ನೀತಿ ಪಾಠದ ಕವಿ ಹೆಸರು ತಿರುಚಿದ ಸಮಿತಿ, ಚಿ.ಉದಯ ಶಂಕರ್ ಬದಲಿಗೆ R.N.ಜಯಗೋಪಾಲ್ ಹೆಸರು
ರೋಹಿತ್ ಚಕ್ರತೀರ್ಥ
Follow us on

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಪಠ್ಯ ವಿಚಾರವಾಗಿ ಬಡಿದಾಟ ತೀವ್ರಗೊಳ್ಳುತ್ತಲೇ ಇದೆ. ಹೆಡ್ಗೆವಾರ್ ಅಧ್ಯಾಯ ಸೇರ್ಪಡೆಯ ಬೆಂಕಿ ಧಗಧಗಿಸುತ್ತಿರೋವಾಗ್ಲೇ, ಅಂಬೇಡ್ಕರ್ ವಿಚಾರವಾಗಿ ವಿವಾದ ಭುಗಿಲೆದ್ದಿದೆ. ಅಂಬೇಡ್ಕರ್ಗಿದ್ದ ಸಂವಿಧಾನ ಶಿಲ್ಪಿ ಬಿರುದನ್ನ ಪಠ್ಯದಿಂದ ರೋಹಿತ್ ಚಕ್ರತೀರ್ಥ ಸಮಿತಿ ಕೈಬಿಟ್ಟಿತ್ತು. ಬಸವಣ್ಣ, ಕುವೆಂಪು ಬಗ್ಗೆಯೂ ಕಡೆಗಣಿಸಲಾಗಿದೆ ಎಂಬ ವಿರೋಧ ವ್ಯಕ್ತವಾಗಿದೆ. ಇದೆಲ್ಲದರ ನಡುವೆ ಸದ್ಯ ಈಗ ಶಾಲಾ ಪಠ್ಯ ಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಎಡವಟ್ಟು ಬಯಲಾಗಿದೆ.

ಪಠ್ಯ ಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಎಡವಟ್ಟು

ಕನ್ನಡ ಭಾಷೆಯ 7ನೇ ತರಗತಿಯ ಶಾಲಾ ಪಠ್ಯದಲ್ಲಿ ಎಡವಟ್ಟು ನಡೆದಿದೆ. ಗೊಂಬೆ ಕಲಿಸುವ ನೀತಿ ಪಾಠದ ಕವಿ ಹೆಸರನ್ನು ರೋಹಿತ್ ಚಕ್ರತೀರ್ಥ ಸಮಿತಿ ತಿರುಚಿದೆ ಎನ್ನಲಾಗುತ್ತಿದೆ. ಚಿ.ಉದಯ ಶಂಕರ್ ಬರೆದ ಹಾಡನ್ನ R.N.ಜಯಗೋಪಾಲ್ ಬರೆದಿದ್ದಾರೆ ಎಂದು ಹೆಸರು ಹಾಕಲಾಗಿದೆ. ಡಾ.ರಾಜ್‌ ಅಭಿನಯದ ಕಸ್ತೂರಿ ನಿವಾಸ ಚಿತ್ರದ ಗೊಂಬೆ ಹಾಡನ್ನು ಚಿ.ಉದಯ ಶಂಕರ್ ಬರೆದಿದ್ದು ಅದನ್ನು R.N.ಜಯಗೋಪಾಲ್ ಬರೆದಿದ್ದಾರೆ ಎಂದು ಕವಿ ಪರಿಚಯದಲ್ಲಿ ಹಾಕಲಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯ ಎಡವಟ್ಟು ನಗೆಪಾಟಲಿಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ಹೊಸಪೇಟೆಯಲ್ಲಿ ಪುನೀತ್ ಅಭಿಮಾನಿಗಳಿಂದ 7.4 ಅಡಿ ಎತ್ತರದ ಪುತ್ಥಳಿ ಅನಾವರಣ; ನೆಲಮುಟ್ಟಿ ನಮಸ್ಕರಿಸಿದ ರಾಘವೇಂದ್ರ ರಾಜಕುಮಾರ್

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:16 pm, Sun, 5 June 22