ಬೆಂಗಳೂರು, ಆ.06: ಮೆಟ್ರೋದಲ್ಲಿ ಹೋಗುವುದು ಸೇಫ್. ಆದ್ರೆ, ಕೆಲ ತಾಂತ್ರಿಕ ಕಾರಣದಿಂದ ಮೆಟ್ರೋ ಆಗಾಗೇ ಕೈ ಕೊಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದರ ಜೊತೆಗೆ ಈಗ ಮೆಟ್ರೋ(Metro) ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಮೆಟ್ರೋ ಸಂಚಾರಕ್ಕೆ ಕುತ್ತು ಬರುತ್ತಿದ್ದು, ಸಡನ್ ಆಗಿ ಹೀಗೆ ಆಗುತ್ತಿರುವುದರಿಂದ ಮೆಟ್ರೋ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದನ್ನು ತಡೆಗಟ್ಟಲು ಬಿಎಂಆರ್ಸಿಎಲ್ ಪ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್‌ಗಳ (ಪಿಎಸ್ಡಿ) ಮೊರೆ ಹೋಗಿದೆ. ಇದು ಮೆಟ್ರೊ ರೈಲಿನ ಪ್ರವೇಶ ದ್ವಾರದಲ್ಲಷ್ಟೇ ತೆರೆದುಕೊಳ್ಳಲಿವೆ.
ಶಾಶ್ವತ ಕಡಿವಾಣ ಹಾಕಲೇಬೇಕು ಎಂದು ಪಣ ತೊಟ್ಟಿರುವ ನಮ್ಮ ಮೆಟ್ರೋ, ಈ ಹಿಂದೆ ಈ ರೀತಿಯ ಆತ್ಮಹತ್ಯೆ ಪ್ರಕರಣಗಳು ಆದಾಗ ಮ್ಯಾನ್ ಪವರ್ ಹೆಚ್ಚು ಮಾಡಿದ್ದರು. ಜೊತೆಗೆ ಜನದಟ್ಟಣೆ ಇರುವ ಸ್ಟೇಷನ್ಗಳಲ್ಲಿ ಬ್ಯಾರಿಕೇಡ್ ಆಳವಡಿಸಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳೋರನ್ನ ತಡೆಯಲು ಆಗೋಲ್ಲ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಉದಾಹರಣೆಗಳೇ ಇಲ್ಲ. ಹೀಗಾಗಿ ಹೊಸ ಮಾರ್ಗಗಳಾದ ಗೊಟ್ಟಿಗೆರೆ ಯಿಂದ ನಾಗವಾರ (ಪಿಂಕ್ ಲೈನ್) ಸಿಲ್ಕ್ ಬೋರ್ಡ್ ಯಿಂದ ಅಂತರರಾಷ್ಟ್ರೀಯ ಏರ್ಪೋರ್ಟ್ (ಬ್ಲೂ ಲೈನ್) ನಲ್ಲಿ ಪಿಎಸ್ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ.
ಇದನ್ನೂ ಓದಿ:ಬೆಂಗಳೂರು ನಮ್ಮ ಮೆಟ್ರೋ: ಹೊಸ ಮೆಟ್ರೋ ರೈಲುಗಳಿಗಾಗಿ ಸಿದ್ಧವಾಗುತ್ತಿವೆ ಐದು ಡಿಪೋಗಳು
ಇನ್ನು ಹಳೆಯ ಮಾರ್ಗಕ್ಕೆ ಸೇಫ್ಟಿ ಡೋರ್ಸ್ ಹಾಕೋದಕ್ಕೆ ಚಿಂತನೆ ನಡೆದಿದೆ. ಈಗ ಇರುವ ಮೆಟ್ರೋ ಸ್ಟೇಷನ್ ಅನ್ನು ಪಿಎಸ್ಡಿ ಟೆಕ್ನಾಲಜಿ ಜೊತೆಗೆ ಹೊಂದಿಕೆ ಮಾಡಬೇಕು. ಇದು ತಾಂತ್ರಿಕ ಸವಾಲು, ಜೊತೆಗೆ ಒಂದು ನಿಲ್ದಾಣದಲ್ಲಿ ಪಿಎಸ್ ಡಿ ಆಳವಡಿಕೆ ಮಾಡಲು ಕನಿಷ್ಠ 10 ಕೋಟಿ ಬೇಕಾಗುತ್ತದೆ. ಜನರ ಸೇಫ್ಟಿ ದೃಷ್ಟಿಯಿಂದ ನಮ್ಮ ಮೆಟ್ರೋ ಈ ಎರಡು ಸವಾಲನ್ನ ಸ್ವೀಕರಿಸಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಈ ಕಾಮಗಾರಿ ಮಾಡಬೇಕಾಗಿದೆ.
ಇದನೆಲ್ಲ ಉನ್ನತ ಮಟ್ಟದಲ್ಲಿ ಸಭೆ ಮಾಡಲಾಗುತ್ತಿದೆ. ಪಿಎಸ್ಡಿ ಡೋರ್ ಅಳವಡಿಸಲು ಮುಂದಾಗಿರುವ ಮೆಟ್ರೋ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ನಮ್ಮ ಮೆಟ್ರೋ ಸಿಲಿಕಾನ್ ಸಿಟಿ ಜನರ ಬೆಸ್ಟ್ ಟ್ರಾನ್ಸ್ ಪೋರ್ಟ್, ಹೀಗೆ ಆತ್ಮಹತ್ಯೆ ಮಾಡಿಕೊಳ್ಳೋ ಜಾಗವಂತೂ ಖಂಡಿತವಲ್ಲ. ಆದಷ್ಟು ಬೇಗ ಎಲ್ಲ ಕಡೆ ಇನ್ನಷ್ಟು ಸೇಫ್ಟಿ ಕೈಗೊಂಡರೆ ಇತಂಹ ಘಟನೆಗಳಿಗೆ ಬ್ರೇಕ್ ಬೀಳೋದು ಗ್ಯಾರೆಂಟಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ