ಬೆಂಗಳೂರು: ಬೆಂಗಳೂರಿನ ವಿವೇಕನಗದಲ್ಲಿ ಯುವ ರೌಡಿಶೀಟರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೌಡಿಶೀಟರ್ ನವೀನ್ ಅಲಿಯಾಸ್ ವಿಲಿಯಂ(32) ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದ್ಯ ವ್ಯಸನಿಯಾಗಿದ್ದ ನವೀನ್, ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನವೀನ್, ನೇಣಿಗೆ ಶರಣಾಗಿದ್ದಾನೆ. ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನಿಗೆ ಪೊಲೀಸರಿಂದ ಹಲ್ಲೆ ಪ್ರಕರಣ: ಕುರುಗೋಡು ಪಿಎಸ್ಐ- ಹೆಡ್ ಕಾನ್ಸಟೇಬಲ್ ಅಮಾನತು
ಬಳ್ಳಾರಿ: ಎಮ್ಮೆ ಕಳ್ಳತನದ ಆರೋಪದಲ್ಲಿ ಯುವಕನಿಗೆ ಪೊಲೀಸರಿಂದ ಹಲ್ಲೆ ಪ್ರಕರಣದಲ್ಲಿ ಕುರುಗೋಡು ಠಾಣೆಯ ಪಿಎಸ್ಐ ಹಾಗೂ ಹೆಡ್ ಕಾನ್ಸಟೇಬಲ್ ಅಮಾನತುಗೊಂಡಿದ್ದಾರೆ. ಪಿಎಸ್ಐ ಮೌನೇಶ ರಾಠೋಡ್ ಹಾಗೂ ಮುಖ್ಯ ಪೇದೆ ಸುರೇಶ ಅಮಾನತುಗೊಂಡವರು. ಎಫ್ಐಆರ್ ದಾಖಲಿಸದೇ ಆರೋಪಿಯ ಬಂಧನ ಹಾಗೂ ಬಂಧನ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆ. ಇವರಿಬ್ಬರನ್ನೂ ಅಮಾನತು ಮಾಡಿ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಸೈದುಲು ಅಡಾವತ್ ಆದೇಶ ಹೊರಡಿಸಿದ್ದಾರೆ.
ದನ ಕಳ್ಳತನ ಅರೋಪದ ಮೇರೆಗೆ ವದ್ದಟ್ಟಿ ಗ್ರಾಮದ ಭರತ ಹಾಗೂ ಮಂಜು ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿ ಪೊಲೀಸರು ದಲಿತ ಯುವಕ ಭರತಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸರ ಥಳಿತಕ್ಕೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಭರತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಂಪ್ಲಿ ಕ್ಷೇತ್ರದ ಕುರಗೋಡ ಠಾಣೆಯ ಪೊಲೀಸರ ದೌರ್ಜನ್ಯ ಖಂಡಿಸಿ ವದ್ದಟ್ಟಿ ಗ್ರಾಮಸ್ಥರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದ ರು.
ಇದನ್ನೂ ಓದಿ: BBMP: ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
Published On - 5:30 pm, Sat, 26 March 22