ಬೆಂಗಳೂರು: ರಾತ್ರಿ ಗಸ್ತಿನಲ್ಲಿದ್ದ (ಬೀಟ್) ಪ್ರೊಬೆಷನರಿ ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ಮೇಲೆ ರೌಡಿ ಆಸಾಮಿಗಳು ಹಲ್ಲೆಗೆ ಯತ್ನಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಕಾರಿನಲ್ಲಿ ಎಣ್ಣೆ ಹಾಕ್ತಿದ್ದ ರೌಡಿ ಆಸಾಮಿಗಳನ್ನು ಕಂಡು ಸಬ್ಇನ್ಸ್ಪೆಕ್ಟರ್ ಪ್ರಶ್ನಿಸಿದಾಗ ಹಲ್ಲೆ ಘಟನೆ ನಡೆದಿದೆ.
ರೌಡಿ ಗ್ಯಾಂಗ್ ನಿನ್ನೆ ರಾತ್ರಿ ಕಾರಿನಲ್ಲಿ ಎಣ್ಣೆ ಹಾಕುತ್ತಿದ್ದರು. ಅದನ್ನು ಕಂಡು ಮಫ್ತಿಯಲ್ಲಿದ್ದ ಪಿಎಸ್ಐ ಅವರನ್ನು ವಿಚಾರಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ರೌಡಿಗಳು ಮಫ್ತಿಯಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಳಿಕ ಅವರು ಪೊಲೀಸ್ ಅಂತಾ ಗೊತ್ತಾಗುತ್ತಿದ್ದಂತೆ ಮೂವರು ರೌಡಿಗಳು ಎಸ್ಕೇಪ್ ಆಗಿದ್ದಾರೆ.
ತಾವರೆಕೆರೆ ರೌಡಿಶೀಟರ್ ಕುಳ್ಳ ಶಿವರಾಜ್ ಹಾಗೂ ಬಸವೇಶ್ವರ ನಗರ ರಫೀಕ್ ಎಂಬುವರಿಂದ ಬ್ಯಾಡರಹಳ್ಳಿ ಸಬ್ ಇನ್ಸ್ ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ಮೇಲೆ ಸ್ಪ್ರೇ ದಾಳಿ ಯತ್ನ ನಡೆದಿದೆ. ಐದು ಮಂದಿ ರೌಡಿ ಗ್ಯಾಂಗ್ ಪೈಕಿ ಇಬ್ಬರನ್ನು ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ಹರೀಶ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಮೂವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆರೋಪಿಗಳ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಕಲಿ ಕೀ ತಯಾರಿಸಿ ಮನೆಗೆ ಕನ್ನ ಹಾಕುತ್ತಿದ್ದ ಆರೋಪಿ ಸೆರೆ
ಅಪರಿಚಿತರನ್ನು ಪರಿಚಯ ಮಾಡಿಕೊಂಡು ಮನೆಗೆ ಕನ್ನ ಹಾಕುತ್ತಿದ್ದ ಆರೋಪಿಯನ್ನು ಕೆಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಅಪರಿಚಿತರನ್ನು ಮೊದಲಿಗೆ ಪರಿಚಯಸಿಕೊಳ್ಳುತ್ತಿದ್ದ. ಬಳಿಕ ನಕಲಿ ಕೀ ತಯಾರು ಮಾಡಿಕೊಂಡು, ಯಾರೂ ಇಲ್ಲದ ವೇಳೆ ಕನ್ನ ಹಾಕುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಕೆಪಿ ಅಗ್ರಹಾರ ಪೊಲೀಸರು ಬಂಧಿತನಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
(rowdy sheeters attack psi in tavarekere limits 3 rowdies escape)
Published On - 12:36 pm, Fri, 13 August 21