ರಾಜಕಾಲುವೆಯಲ್ಲಿ ಶವ ಪತ್ತೆ ಪ್ರಕರಣ; ಪಟಾಕಿ ಖರೀದಿಸಿ ಬರ್ತೀನಿ ಎಂದು ಹೋದ ಯುವಕನ ಬರ್ಬರ ಹತ್ಯೆ

ಪೊಲೀಸರು ಕೊಲೆಯಾಗಿದ್ದ ಯುವಕನ ಗುರುತು ಪತ್ತೆ ಹಚ್ಚಿದ್ದಾರೆ. ಭಾರತಿನಗರ ನಿವಾಸಿ ತರುಣ್(20) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ನಾಪತ್ತೆಯಾದವರ ಕೇಸ್‌ಗಳ ಪರಿಶೀಲನೆ ವೇಳೆ ಗುರುತು ಪತ್ತೆ ಮಾಡಲಾಗಿದೆ.

ರಾಜಕಾಲುವೆಯಲ್ಲಿ ಶವ ಪತ್ತೆ ಪ್ರಕರಣ; ಪಟಾಕಿ ಖರೀದಿಸಿ ಬರ್ತೀನಿ ಎಂದು ಹೋದ ಯುವಕನ ಬರ್ಬರ ಹತ್ಯೆ
ಆರ್ಆರ್ ನಗರ ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆಯಾಗಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ
Updated By: ಆಯೇಷಾ ಬಾನು

Updated on: Nov 03, 2021 | 7:54 AM

ಬೆಂಗಳೂರು: ನಿನ್ನೆ (ನವೆಂಬರ್ 2) ನಗರದ ರಾಜಕಾಲುವೆಯಲ್ಲಿ ಸಿಕ್ಕ ಅಪರಿಚಿತ ಶವದಿಂದ ಜನ ಬೆಚ್ಚಿಬಿದ್ದಿದ್ದರು. ಮೃತ ಯುವಕನ ಗುರುತು ಪತ್ತೆ ಹಚ್ಚಲು ಪೊಲೀಸರು ಹರ ಸಾಹಸ ಮಾಡಿದ್ದು ಸದ್ಯ ಯುವಕ ಯಾರೆಂಬುವುದು ಪತ್ತೆಯಾಗಿದೆ.

ಪೊಲೀಸರು ಕೊಲೆಯಾಗಿದ್ದ ಯುವಕನ ಗುರುತು ಪತ್ತೆ ಹಚ್ಚಿದ್ದಾರೆ. ಭಾರತಿನಗರ ನಿವಾಸಿ ತರುಣ್(20) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ನಾಪತ್ತೆಯಾದವರ ಕೇಸ್‌ಗಳ ಪರಿಶೀಲನೆ ವೇಳೆ ಗುರುತು ಪತ್ತೆ ಮಾಡಲಾಗಿದೆ. ಹೊಸೂರಿಗೆ ಸ್ನೇಹಿತರೊಂದಿಗೆ ಪಟಾಕಿ ತರುವುದಕ್ಕೆ ಮನೆಯಿಂದ ಹೋಗಿದ್ದ ತರುಣ್ ನಾಪತ್ತೆಯಾಗಿದ್ದ. ಪಟಾಕಿ ತರಲು ತಂದೆಯಿಂದ ಎರಡು ಸಾವಿರ ಹಣ ಪಡೆದಿದ್ದ. ಪಟಾಕಿ ತರ್ತೀನಿ ಎಂದು ಹೇಳಿ ಹೊರಟ್ಟಿದ್ದ ತರುಣ್ ಮತ್ತೆ ಮನೆಗೆ ವಾಪಾಸ್ ಬರಲೇ ಇಲ್ಲ. ಭಾರತಿನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸದ್ಯ R.R.ನಗರ ಬಳಿ ನಿನ್ನೆ ರಾಜಕಾಲುವೆಯಲ್ಲಿ ಪತ್ತೆಯಾಗಿದ್ದ ಶವ ತರುಣ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು ಕೊಲೆಯ ಹಿಂದಿನ ಕಾರಣವನ್ನು  ಬೇಧಿಸುತ್ತಿದ್ದಾರೆ.

ರಾಜಕಾಲುವೆಯಲ್ಲಿ ಶವ ಪತ್ತೆ
ಕೊಲೆಗಾರ ಯುವಕನನ್ನು ಕೊಂದು ಹಗ್ಗದಲ್ಲಿ ಕಟ್ಟಿ ದೇಹವನ್ನು ರೋಲ್ ಮಾಡಿ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮೂಟೆ ಕಟ್ಟಿ ರಾಜ ಕಾಲುವೆಯಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾಗಿರುವುದು ಓರ್ವ ಯುವಕ ಎಂಬುದು ಪತ್ತೆಯಾಗಿದ್ದು ಶ್ವಾನದಳ ಮತ್ತು ಎಫ್ಎಸ್ ಅಧಿಕಾರಿಗಳಿಗೆ ರಾಜರಾಜೇಶ್ವರಿ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಪರಿಶೀಲನೆ ಬಳಿಕ ಮತ್ತಷ್ಟು ಮಾಹಿತಿ ಹೊರ ಬೀಳಲಿದೆ.

ಇದನ್ನೂ ಓದಿ: ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆಕಟ್ಟಿ ಕಾಲುವೆಗೆ ಎಸೆದ ಕೊಲೆಗಾರ, ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆ