160 ರೂ. ಸಂಬಳದಲ್ಲಿ ನಾನು ಬದುಕುವುದಾದರೂ ಹೇಗೆ? ಸರ್ಕಾರಕ್ಕೆ ಜೈನ ಪುರೋಹಿತ ಪ್ರಶ್ನೆ

|

Updated on: Oct 13, 2023 | 9:32 PM

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು ಐದು ಸಾವಿರು ರೂ. ಮಾಸಿಕ ಭತ್ಯೆ ಪಡೆಯುತ್ತಾರೆ. ಆದರೆ ಜೈನ ಮಂದಿರಗಳಲ್ಲಿನ ಅರ್ಚಕರಿಗೆ ಕೇವಲ 160 ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದರಲ್ಲಿ ಜೀವನ ನಡೆಸುವುದು ಹೇಗೆ ಎಂದು ಮೈಸೂರಿನ ಜೈನ ಧರ್ಮಗುರು ಎಂ.ವಿ.ಶ್ರೇಣಿಕಾ ಅವರು ಪ್ರಶ್ನಿಸಿದ್ದಾರೆ.

160 ರೂ. ಸಂಬಳದಲ್ಲಿ ನಾನು ಬದುಕುವುದಾದರೂ ಹೇಗೆ? ಸರ್ಕಾರಕ್ಕೆ ಜೈನ ಪುರೋಹಿತ ಪ್ರಶ್ನೆ
ಸಂಪತ್ ಕುಮಾರ್, ಎಂ.ವಿ.ಶ್ರೇಣಿಕಾ
Follow us on

ಬೆಂಗಳೂರು, ಅಕ್ಟೋಬರ್​​ 13: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು ಐದು ಸಾವಿರು ರೂ. ಮಾಸಿಕ ಭತ್ಯೆ ಪಡೆಯುತ್ತಾರೆ. ಆದರೆ ಜೈನ ಮಂದಿರಗಳಲ್ಲಿನ ಅರ್ಚಕರಿಗೆ ಕೇವಲ 160 ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದರಲ್ಲಿ ಜೀವನ ನಡೆಸುವುದು ಹೇಗೆ ಎಂದು ಮೈಸೂರಿನ ಜೈನ ಧರ್ಮಗುರು ಎಂ.ವಿ.ಶ್ರೇಣಿಕಾ ಅವರು ಹೇಳಿದ್ದಾರೆ. ಕರ್ನಾಟಕ ರಾಜ್ಯ ಮುಜರಾಯಿ (Muzarai Department) ದೇವಸ್ಥಾನಗಳ ಅರ್ಚಕರು ಮತ್ತು ಕಾರ್ಯಕರ್ತರ ಸಂಘವು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ತಮ್ಮ ಭತ್ಯೆಯನ್ನು ಹೆಚ್ಚಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮತ್ತು ಸುರಕ್ಷಿತ ಜೀವನವನ್ನು ನಡೆಸಲು ಸರ್ಕಾರಕ್ಕೆ ವಿನಂತಿಸಿದ್ದಾರೆ.

ಕೆ.ಆರ್.ಪೇಟೆಯ ಬೀಚನ ಗ್ರಾಮದವರಾದ ಅರ್ಚಕ ಸಂಪತ್ ಕುಮಾರ್​ ಮಾತನಾಡಿ, ಗವಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ 20 ವರ್ಷದಿಂದ ಅರ್ಚಕ ಕೆಲಸ ನಿರ್ವಹಿಸುತ್ತಿದ್ದಾರೆ. ದೇವಾಲಯದ ಭೂಮಿಯನ್ನು ಕಬಳಿಕೆ ಮಾಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಕಬಳಿಸಿರುವ ಭೂಮಿಯನ್ನು ದೇವಸ್ಥಾನಗಳಿಗೆ ಹಿಂದಿರುಗಿಸಿದರೆ, ಅರ್ಚಕರು ಗೌರವಯುತ ಜೀವನ ನಡೆಸಬಹುದಾಗಿದೆ. 1940 ರ ದಶಕದಲ್ಲಿ ನನ್ನ ತಾತ ಅರ್ಚಕರಾಗಿದ್ದರು. ನಮ್ಮ ದೇವಸ್ಥಾನಕ್ಕೆ ಮೈಸೂರು ಮಹಾರಾಜರೇ ನೀಡಿದ ಸುಮಾರು 30 ಎಕರೆ ಜಮೀನು ಈಗ ದೇವಸ್ಥಾನಕ್ಕೆ ಐದು ಎಕರೆಗಿಂತ ಕಡಿಮೆ ಉಳಿದಿದ್ದು, ಬಾಕಿ ಕಬಳಿಕೆ ಆಗಿದೆ ಎಂದರು.

ಇದನ್ನೂ ಓದಿ: ಕೆಐಎಡಿಬಿ ಹಂಚಿಕೆಯಲ್ಲಿ 4,248 ಕೋಟಿ ರೂ. ಬಾಕಿ: 4 ತಿಂಗಳಲ್ಲಿ ವಸೂಲಿ ಮಾಡುವಂತೆ ಸಚಿವ ಎಂಬಿ ಪಾಟೀಲ್​​ ಗಡುವು

ಮಾಸಿಕ ಭತ್ಯೆಯನ್ನು 12 ಸಾವಿರ ರೂ.ಗೆ ಏರಿಸಬೇಕು. ದೂರದ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ದೇವಾಲಯಗಳು ಕಡಿಮೆ ಭಕ್ತರನ್ನು ಹೊಂದಿದ್ದು, ಕಡಿಮೆ ಆದಾಯವಿರುತ್ತದೆ. ಹಾಗಾಗಿ ಸರ್ಕಾರ ಅರ್ಚಕರಿಗೆ ಮಾಸಿಕ ಗೌರವಧನ ನೀಡಬೇಕು ಎಂದಿದ್ದಾರೆ.

ಇದನ್ನೂ ಓದಿ: ವರ್ಗಾವಣೆ ದಂಧೆಯಲ್ಲಿ ಜೆಟಿ ಪಾಟೀಲ್ ಪಿಎ ಭಾಗಿ ಆರೋಪ; ಇದು ನಿಜ ಎಂದ ಮಾಜಿ ಸಚಿವ ಮುರುಗೇಶ್ ನಿರಾಣಿ

ವಿಚಾರ ಸಂಕಿರಣದಲ್ಲಿ ಸುಮಾರು 500 ಪುರೋಹಿತರು ಭಾಗವಹಿಸಿದ್ದು, ಮುಜರಾಯಿ ಸಚಿವ ಎಂ. ರಾಮಲಿಂಗಾರೆಡ್ಡಿ ಅವರು ಭಾಗವಹಿಸಿದ್ದರು. ಪಾಲ್ಗೊಂಡಿದ್ದ ಅರ್ಚಕರು ವೈದ್ಯಕೀಯ ವಿಮೆ, ತಮ್ಮ ಮಕ್ಕಳಿಗೆ ಶಿಕ್ಷಣ ಸಾಲ, ಆಶ್ರಯ ಮತ್ತು ನಿವೃತ್ತಿ ವಯಸ್ಸನ್ನು ಪ್ರಸ್ತುತ 60 ವರ್ಷದಿಂದ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುವುದಾಗಿ ಸಚಿವ ಎಂ. ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.