ಬೆಂಗಳೂರು, ಸೆಪ್ಟೆಂಬರ್ 14: ಹಳೆ ವಾಹನಗಳನ್ನ ಗುಜುರಿಗೆ ಹಾಕಲು ಆರ್ಟಿಒನಿಂದ ಸ್ಕ್ರ್ಯಾಪಿಂಗ್ (Vehicle Scrap) ಕೇಂದ್ರ ಸ್ಥಾಪನೆ ಮುಂದಾಗಿದ್ದು, M/s Mahindra M5TC Recycling Pvt Ltd, ವಿಜಯಪುರ, ದೇವನಹಳ್ಳಿ ಇವರಿಗೆ ಮೊಟ್ಟ ಮೊದಲ ಸ್ಕ್ರ್ಯಾಪಿಂಗ್ ಕೇಂದ್ರವನ್ನು ಸ್ಥಾಪಿಸಲು ಇಂದಿನಿಂದ ಜಾರಿಗೆ ಬರುವಂತೆ ಆರ್ಟಿಒ ನೋಂದಣಿ ಪತ್ರ ನೀಡಿದೆ.
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದನ್ವಯ ಸಾರಿಗೆ ಇಲಾಖೆಯು ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿ ಡಿಸೆಂಬರ್ 30, 2022ರಲ್ಲಿ ಜಾರಿಗೊಳಿಸಿದ್ದು, ಸಾರಿಗೆ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು.
ಇದನ್ನೂ ಓದಿ: ಚೀನಾದ ಕೀಪ್ ಶೇರರ್ ಮೊಬೈಲ್ ಆ್ಯಪ್ ಮೂಲಕ ವಂಚನೆ: 6. 71 ಕೋಟಿ ರೂ. ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ
M/s Mahindra MSTC Recycling Pvt. Ltd, ವಿಜಯಪುರ, ದೇವನಹಳ್ಳಿ ತಾಲೂಕು ಇವರಿಗೆ ಮೊಟ್ಟ ಮೊದಲನೇ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪಿಸಲು ಸೆಪ್ಟೆಂಬರ್ 14, 2023 ರಿಂದ ಜಾರಿಗೆ ಬರುವಂತೆ ನೋಂದಣಿ ಪುಮಾಣ ಪತ್ರವನ್ನು ನೀಡಲಾಗಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಹಳೆಯ ಅನರ್ಹ ವಾಹನಗಳನ್ನು ಸ್ವಯಂ ಪ್ರೇರಿತರಾಗಿ ನಾಶಪಡಿಸಲು ಈ ಕೇಂದ್ರದ ಉಪಯೋಗ ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿ ಹೊರಬಂದ ಗೋವಿಂದ ಬಾಬು ಮಾಧ್ಯಮದವರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಹೊಸ ನೀತಿ ಪ್ರಕಾರ ಈ ಕೇಂದ್ರವನ್ನು ಆರಂಭಿಸಲಾಗಿದೆ. 15 ವರ್ಷಕ್ಕಿಂತ ಹಳೆಯದಾದ, ಅನರ್ಹ ವಾಹನಗಳನ್ನು ಹಾಗೂ ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ನೋಂದಾಯಿತ ವಾಹನ ಗುಜರಿ ಕೇಂದ್ರಕ್ಕೆ ತಂದು ಸ್ಕ್ರ್ಯಾಪಿಂಗ್ ಮಾಡಬಹುದಾಗಿದೆ. 15 ವರ್ಷ ಓಡಿರುವ ಎಲ್ಲ ಸರ್ಕಾರಿ ವಾಹಗಳನ್ನು ಸ್ಕ್ರ್ಯಾಪಿಂಗ್ ಹಾಕಬೇಕು.
ಭಾರತದಾದ್ಯಂತ ಸುಮಾರು 60 ಆರ್‌ವಿಎಸ್‌ಎಫ್‌ಗಳಿವೆ. ಆದರೆ, ಕರ್ನಾಟಕದಲ್ಲಿ ಯಾವುದೂ ಇಲ್ಲ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.