ಉಡುಪಿ: ಗಂಗೊಳ್ಳಿಯಲ್ಲಿ ಜಟ್ಟಿ ನಿರ್ಮಾಣ ಕಾಮಗಾರಿ ಕುಸಿತ: ಗುತ್ತಿಗೆದಾರರ‌‌ ಮೇಲೆ ಕ್ರಮಕೈಗೊಳ್ಳಲಾಗುವುದು- ಸಚಿವ ಎಸ್. ಅಂಗಾರ

| Updated By: ವಿವೇಕ ಬಿರಾದಾರ

Updated on: Oct 03, 2022 | 6:22 PM

ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಜಟ್ಟಿ ನಿರ್ಮಾಣ ಕಾಮಗಾರಿ ಕುಸಿತಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರು, ಇಂಜಿನಿಯರ್ ರಿಂದ ಮಾಹಿತಿ ಪಡೆದಿದ್ದೇನೆ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದ್ದಾರೆ.

ಉಡುಪಿ: ಗಂಗೊಳ್ಳಿಯಲ್ಲಿ ಜಟ್ಟಿ ನಿರ್ಮಾಣ ಕಾಮಗಾರಿ ಕುಸಿತ: ಗುತ್ತಿಗೆದಾರರ‌‌ ಮೇಲೆ ಕ್ರಮಕೈಗೊಳ್ಳಲಾಗುವುದು- ಸಚಿವ ಎಸ್. ಅಂಗಾರ
ಸಚಿವ ಎಸ್​ ಅಂಗಾರ
Follow us on

ಬೆಂಗಳೂರು: ಉಡುಪಿ (Udupi) ಜಿಲ್ಲೆಯ ಗಂಗೊಳ್ಳಿಯಲ್ಲಿ ಜಟ್ಟಿ ನಿರ್ಮಾಣ ಕಾಮಗಾರಿ ಕುಸಿತಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರು, ಇಂಜಿನಿಯರ್ ರಿಂದ ಮಾಹಿತಿ ಪಡೆದಿದ್ದೇನೆ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ (S Angara) ಹೇಳಿದ್ದಾರೆ. ಈ ಬಗ್ಗೆ ಗುತ್ತಿಗೆದಾರರ‌‌ ಮೇಲೆ ಯಾವ ರೀತಿ ಕ್ರಮ ತಗೆದುಕೊಳ್ಳಬೇಕು ಅಂತ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಜಟ್ಟಿ ಕುಸಿದಿದ್ದರಿಂದ ಮೀನುಗಾರರಿಗೆ ಸಮಸ್ಯೆ ಆಗುತ್ತಿದೆ. ತೆರವು‌ ಕಾರ್ಯ ಆಗದಿದ್ದರೆ ಮೀನುಗಾರಿಕೆಗೆ ತೊಂದರೆ ‌ಆಗುತ್ತದೆ. ಕೂಡಲೇ ತೆರವು ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ಮೊದಲು ಸಮುದ್ರಕ್ಕೆ ಕಲ್ಲು ಹಾಕುವ ಯೋಜನೆ ಇತ್ತು. ಅದನ್ನು ನಿಲ್ಲಿಸಿ ಬ್ರೇಕ್ ವಾಟರ್ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಅವೈಜ್ಞಾನಿಕ ಕಾಮಗಾರಿ ಆಗಿದ್ದು ನಿಜ. ಅದರಲ್ಲಿ ಯಾವುದೇ ಡೌಟ್ ಇಲ್ಲ. ಪ್ರಾಥಮಿಕ ವರದಿ ಬಂದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ ಬಗ್ಗೆ ದತ್ತಾತ್ರೇಯ ಹೊಸಬಾಳೆಯವರು ಹೇಳಿದ್ದು ಸತ್ಯ

ನಿರುದ್ಯೋಗ ಸಮಸ್ಯೆ ಬಗ್ಗೆ ಆರ್​ಎಸ್​ಎಸ್​​ನ ಸರಕಾರ್ಯವಾರು ದತ್ತಾತ್ರೇಯ ಹೊಸಬಾಳೆಯವರು ಹೇಳಿದ್ದು ಸತ್ಯ. ಪ್ರಜಾಪ್ರಭುತ್ವದಲ್ಲಿ ರಾಜಕೀಯವಾಗಿ ಸ್ಪರ್ಧೆಯಲ್ಲಿ ಆರ್ಥಿಕ ನೀತಿ ಇರಬೇಕು. ನಮ್ಮ ದೇಶದಲ್ಲಿ ಅದು ಇಲ್ಲ. ಬಿಜೆಪಿ ಹಾಗೂ ಜನಸಂಘಕ್ಕೆ ಆ ರೀತಿಯ ಆರ್ಥಿಕ ನೀತಿ ಇದೆ. ಆಡಳಿತ ಮಾಡಿದ ಪ್ರತಿಯೊಬ್ಬರು ಏನು ಕ್ರಮ ಕೈಗೊಂಡಿದ್ದಾರೆ? ನಾವು ಅಧಿಕಾರಕ್ಕೆ ಬಂದ ಮೇಲೆ ಆತ್ಮನಿರ್ಭರ ಮೂಲಕ ಉದ್ಯಮ ನೀಡುವ ಬಗ್ಗೆ ಕೆಲಸ ಆಗುತ್ತಿದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ಏಕಾಏಕಿ ಮಾಡಲು ಆಗಲ್ಲ. ಮೋದಿ ಅಧಿಕಾರಕ್ಕೆ ಬಂದು ಬರೀ ಎಂಟು ವರ್ಷ ಆಗಿದೆ ಅಷ್ಟೇ. ಪೂರ್ತಿಯಾಗಿ ಹತ್ತರಿಂದ ಹದಿನೈದು ವರ್ಷ ಅಧಿಕಾರ ಮಾಡಿಲ್ಲ. ಅಧಿಕಾರ ಕೊಟ್ಟಾಗ ಏನು ಮಾಡಬೇಕೋ ಅದನ್ನು ಮಾಡುತ್ತಾ ಬಂದಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Mon, 3 October 22