ಬೆಂಗಳೂರು: ನಗರದಲ್ಲಿ ಒಬ್ಬ ಸೈಕೊ ಮನಸ್ಥಿತಿಯ ಯುವಕ ಪತ್ತೆಯಾಗಿದ್ದಾನೆ. ಇವನ ಬಗ್ಗೆ ಕೇಳಿದ್ರೆ ನೀವು ದಂಗಾಗಿ ಹೋಗುತ್ತೀರಾ. ತಂದೆ-ತಾಯಿ ಇಲ್ಲದ ಅನಾಥ ಮಗುವೆಂದು ಆಶ್ರಯ ನೀಡಿದ್ದೇ ಆ ದಂಪತಿಗೆ ಕಂಟಕವಾಗಿದೆ. ಈ ಸೈಕೊ ಮನಸ್ಥಿತಿಯ ಯುವಕ ತನ್ನ ಸಾಕು ಅಪ್ಪ-ಅಮ್ಮನ ಖುಣ ತೀರಿಸಿದನ್ನು ಕೇಳಿದ್ರೆ ಇಂತಹ ನೀಚನಿಗೆ ಆಶ್ರಯ ನೀಡಬಾರದಿತ್ತು ಎಂದು ಶಾಪ ಹಾಕ್ತೀರಾ.
ಸೈಕೊ ಮನಸ್ಥಿತಿಯ ಯುವಕ ಉತ್ತಮ್ ಕುಮಾರ್, 2018ರಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ತನ್ನ ಸಾಕು ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ವೇಳೆ ಸಾಕು ತಂದೆಯೊಂದಿಗೂ ಜಗಳವಾಡಿ ಹುಚ್ಚಾಟ ಮೆರೆದಿದ್ದ. ಇದಾದ ಬಳಿಕ ಜೈಲು ಸೇರಿ ಮುದ್ದೆ ಮುರಿದಿದ್ದಾನೆ. ಸದ್ಯ ಒಂದೂವರೆ ವರ್ಷದ ಹಿಂದೆ ಜೈಲಿನಿಂದ ಹೊರ ಬಂದಿದ್ದು ಈಗ ಮತ್ತೆ ತನ್ನ ಪುಂಡಾಟ ಮುಂದುವರೆಸಿದ್ದಾನೆ. ಜೈಲಿನಿಂದ ಹೊರಬಂದ ಬಳಿಕ ಸಾಕು ತಂದೆಗೆ ಧಮ್ಕಿ ಹಾಕಿದ್ದಾನೆ.
ಸೈಕೊ ಮನಸ್ಥಿತಿಯ ಯುವಕ ಉತ್ತಮ್ ಕುಮಾರ್ ಸಾಕು ತಂದೆ ಮಂಜುನಾಥ್ ತಮಗೆ ಮಕ್ಕಳಿಲ್ಲದ ಕಾರಣ ಬಾಲ್ಯದಲ್ಲೇ ಉತ್ತಮ್ ನನ್ನು ದತ್ತು ಪಡೆದಿದ್ದರು. ಆದ್ರೆ ಉತ್ತಮ್ ಒಳ್ಳೆಯ ಉತ್ತಮ ಮಗನಾಗಲಿಲ್ಲ. ಚಿಕ್ಕ ವಿಚಾರಕ್ಕೆ ಸಾಕು ತಾಯಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿ ಜೈಲು ಸೇರಿದ್ದ. ಬಳಿಕ ಜೈಲಿನಿಂದ ವಾಪಾಸಾಗಿ ತಂದೆ ಮಂಜುನಾಥ್ರಿಗೂ ಬೆದರಿಕೆ ಹಾಕಿದ್ದ.
ಐದಾರು ಬಾಡಿಗೆ ಮನೆ ಮಂಜುನಾಥ್ ಅವರ ಹೆಸರಲ್ಲಿದೆ. ಹೀಗಾಗಿ ಅದರ ಬಾಡಿಗೆ ನನಗೆ ಬರಬೇಕು ಎಂದು ಉತ್ತಮ್ ಆವಾಜ್ ಹಾಕಿದ್ದ. ಬಾಡಿಗೆದಾರ ಮನೋಹರ್ ಪಾಂಡು ಲಮಾಣಿ ಮನೆಗೆ ತೆರಳಿ ಬಾಡಿಗೆ ನನಗೆ ಕೊಡಿ ಎಂದು ಬೆದರಿಕೆ ಹಾಕಿದ್ದ. ಕುತ್ತಿಗೆ ಮೇಲೆ ಲಾಂಗ್ ಇಟ್ಟು ಬಾಡಿಗೆ ನೀಡುವಂತೆ ಹೆದರಿಸಿದ್ದ. ಇದೆಲ್ಲಾ ಆದ ಬಳಿಕ ಈ ಬಗ್ಗೆ ವಿಷಯ ತಿಳಿದ ಪೊಲೀಸರು ಜನವರಿ 31 ರ ರಾತ್ರಿ 9.30ಕ್ಕೆ ಅಶ್ವತ್ಥ್ ನಗರದಲ್ಲಿ ಆರೋಪಿ ಉತ್ತಮ್ನನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಉತ್ತಮ್ ಲಾಂಗ್ ಹಿಡಿದು ಹೈಡ್ರಾಮ ಮಾಡಿದ್ದಾನೆ. ಯಾರಿಗೆ ಏನು ಮಾಡಿಬಿಡ್ತಾನೊ ಅನ್ನೋ ಭಯದಲ್ಲಿದ್ದ ಸದಾಶಿವನಗರ ಪೊಲೀಸರು ಕೊನೆಗೂ ಆರ್ಮ್ ಆ್ಯಕ್ಟ್ ಅಡಿ ಉತ್ತಮ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:15 am, Sat, 4 February 23