AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದಿತ ಸಿಬಿಎಸ್​​ಇ ಸಿಲಬಸ್ ಶಾಲೆಗಳು: ಕರ್ನಾಟಕ ಶಿಕ್ಷಣ ಇಲಾಖೆಯಿಂದ ಭಾರತ ತಂಡದ ಮಾಜಿ ಕ್ಯಾಪ್ಟನ್​​ ಎಂಎಸ್​ ಧೋನಿ ಶಾಲೆಗೂ ನೋಟಿಸ್

ಖ್ಯಾತ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿರುವ ಧೋನಿ ಶಾಲೆಗೂ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ. ನಗರದ ಆರ್ಕಿಡ್ ಶಾಲೆ ಜೊತೆಗೆ ಎಂಎಸ್ ಧೋನಿ ಶಾಲೆಗೂ ನೋಟಿಸ್ ನೀಡಲಾಗಿದೆ.

ವಿವಾದಿತ ಸಿಬಿಎಸ್​​ಇ ಸಿಲಬಸ್ ಶಾಲೆಗಳು: ಕರ್ನಾಟಕ ಶಿಕ್ಷಣ ಇಲಾಖೆಯಿಂದ ಭಾರತ ತಂಡದ ಮಾಜಿ ಕ್ಯಾಪ್ಟನ್​​ ಎಂಎಸ್​ ಧೋನಿ ಶಾಲೆಗೂ ನೋಟಿಸ್
TV9 Web
| Updated By: ಆಯೇಷಾ ಬಾನು|

Updated on:Feb 04, 2023 | 3:03 PM

Share

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ(MS Dhoni) ಮಕ್ಕಳ ಕಲಿಕೆಗಾಗಿ ಬೆಂಗಳೂರಿನಲ್ಲಿ ಗ್ಲೋಬಲ್​ ಸ್ಕೂಲ್(MS Dhoni Global School) ಆರಂಭಿಸಿದ್ದು ಎಂಎಸ್ ಧೋನಿ ಶಾಲೆಗೂ ಶಿಕ್ಷಣ ಇಲಾಖೆ(Karnataka Education Department) ಶಾಕ್ ಕೊಟ್ಟಿದೆ. ಎಂಎಸ್ ಧೋನಿ ಶಾಲೆ ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದಿದೆ. ಆದ್ರೆ ಸಿಬಿಎಸ್ಇ ಹಾಗೂ ಇತರೆ ಪಠ್ಯ ಬೋಧನೆ ಹಿನ್ನಲೆ ಎಂಎಸ್ ಧೋನಿ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಖ್ಯಾತ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿರುವ ಧೋನಿ ಶಾಲೆಗೂ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ. ನಗರದ ಆರ್ಕಿಡ್ ಶಾಲೆ ಜೊತೆಗೆ ಎಂಎಸ್ ಧೋನಿ ಶಾಲೆಗೂ ನೋಟಿಸ್ ನೀಡಲಾಗಿದೆ. ಕಳೆದ ವರ್ಷವಷ್ಟೇ ಅಂದರೆ 2021-22 ರಲ್ಲಿ ಸಿಂಗಸಂದ್ರದಲ್ಲಿ ಎಂಎಸ್​ ಧೋನಿಯವರ ಶಾಲೆ ಆರಂಭವಾಗಿತ್ತು. ಆದರೆ ಸಿಬಿಎಸ್​ಇ ಸೇರಿದಂತೆ ಇತರೆ ಕೆಲ ಪಠ್ಯಕ್ರಮ ಬೋಧನೆ ಹಿನ್ನಲೆ ಶಾಲೆಗೆ ನೋಟಿಸ್ ನೀಡಲಾಗಿದೆ.

ಆರ್ಕಿಡ್​ ಶಾಲೆ, ಎಂಎಸ್​ ಧೋನಿ ಶಾಲೆಗೆ ನೋಟಿಸ್

ಎಂಎಸ್​ ಧೋನಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದು ಪ್ರಸಕ್ತ ವರ್ಷ ಶಾಲೆಯಲ್ಲಿ 248 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಅನಧಿಕೃತ ಪಠ್ಯ ಬೋಧನೆಯಡಿ ಶಾಲೆಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ 8 ಅನಧಿಕೃತ ಆರ್ಕಿಡ್ ಶಾಲೆಗೆ ಶಿಕ್ಷಣ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ. ಈಗ ಎಂಎಸ್​ ಧೋನಿ ಶಾಲೆ ಕೂಡ ಇದೇ ಪಟ್ಟಿಯಲ್ಲಿ ಸೇರಿಕೊಂಡಿದೆ.

2022 ರಲ್ಲಿ ಪ್ರಾರಂಭವಾದ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ ನಲ್ಲಿ ಮೊದಲನೇ ತರಗತಿಗೆ 1 ಲಕ್ಷ 47‌ ಸಾವಿರದಷ್ಟು ಶುಲ್ಕವಿದೆ. ಎರಡನೇ ಮೂರನೇ ತರಗತಿ ಪಠ್ಯ, ಪುಸ್ತಕ, ಸಮವಸ್ತ್ರ ಸೇರಿ 1ಲಕ್ಷ 56‌ ಸಾವಿರ ಫೀಸ್ ನಿಗದಿ ಮಾಡಲಾಗಿದೆ. ಪೋಷಕರಿಗೆ ಸಿಬಿಎಸ್​ಸಿ ಶಾಲೆ ಅಂತ ಹೇಳಿ ಅಡ್ಮಿಷನ್ ಮಾಡಿಕೊಳ್ಳಲಾಗುತ್ತೆ. ಆದರೆ ಸಿಬಿಎಸ್​ಸಿ ಪಠ್ಯಕ್ರಮಕ್ಕೆ ಇನ್ನೂ ಪರವಾನಗಿ ಸಿಕ್ಕಿಲ್ಲ. ಇನ್ನು ನೋಟಿಸ್ ಬಂದ ಬಗ್ಗೆ ಎಂಎಸ್ ಧೋನಿ ಶಾಲೆ ಆಡಳಿ ಮಂಡಳಿ ಪ್ರತಿಕ್ರಿಯೆ ನೀಡಿದ್ದು ರಾಜ್ಯ ಶಿಕ್ಷಣ ಇಲಾಖೆ ಪಠ್ಯವನ್ನೇ ಓದಿಸುತ್ತಿರೋದಾಗಿ ತಿಳಿಸಿದೆ. ಪೋಷಕರ ಒತ್ತಾಯದ ಮೇರೆಗೆ ಹೆಚ್ಚಿನ ವಿಷಯ ಓದಿಸಿರೋದಾಗಿ ಹೇಳಿದ್ದಾರೆ. ಎರಡು ತಿಂಗಳ ಬಳಿಕ ಸಿಬಿಎಸ್​ಸಿ ಪರವಾನಗಿ ಸಿಗಲಿದೆ. ಹೀಗಾಗಿ ಈಗಿನಿಂದಲೇ ಮಕ್ಕಳಿಗೆ ಸಿಬಿಎಸ್​ಸಿ ಕ್ರಮ ಅನ್ವಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ ಬೋರ್ಡ್​ ಬದಲಾವಣೆ: ಮತ್ತೊಂದೆಡೆ ಪೋಷಕರಿಂದ ಕಾನೂನು ಹೋರಾಟಕ್ಕೆ ಪ್ಲ್ಯಾನ್

ಸಿಬಿಎಸ್​ಇ ಶಾಲೆ ಎಂದು ಪಬ್ಲಿಷ್ ಪರೀಕ್ಷೆ ಬರೆಸಲು ಮುಂದಾಗಿದ್ದ ಆರ್ಕಿಡ್

ಸಿಬಿಎಸ್​ಇ ಶಾಲೆ ಎಂದು ಹೇಳಿಕೊಂಡು ಆರ್ಕಿಡ್ ಶಾಲೆ ಆಡಳಿತ ಮಂಡಳಿ ಪೋಷಕರಿಂದ ಲಕ್ಷ ಲಕ್ಷ ಫೀಸ್ ವಸೂಲಿ ಮಾಡಿದೆ. ಆದ್ರೆ ಸಿಬಿಎಸ್​ಇ ಪರೀಕ್ಷೆ ಬಿಟ್ಟು ಸ್ಟೇಟ್ ಸಿಲಬಸ್ ಪಾಠ ಮಾಡಲಾಗಿದೆ. ಹಾಗೂ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಗೆ ತಯಾರಿ ಮಾಡಲಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ್ದು ಈ ವೇಳೆ ಆರ್ಕಿಡ್ ಸಿಬಿಎಸ್​ಇ ಶಾಲೆಗಳ ಅಡಿಯಲ್ಲಿ ರಿಜಿಸ್ಟರ್ ಆಗದಿರುವುದು ಬಯಲಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ನೋಟಿಸ್ ಕಳಿಸಿದೆ. ಬೆಂಗಳೂರಿನ 8 ಆರ್ಕಿಡ್ ಶಾಲೆಗೆಗಳಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಬೆಂಗಳೂರು ಉತ್ತರ ಜಿಲ್ಲೆಯ ಹೋನ್ನೆನಹಳ್ಳಿಯಲ್ಲಿರು ಆರ್ಕಿಡ್ ಶಾಲೆ, ಮೈಸೂರು ರಸ್ತೆ, ನಾಗರಭಾವಿ, ಪಣತೂರು, ಹೊಮ್ಮದೇವನಹಳ್ಳಿ ಹರಳೂರು, ಮಹಾಲಕ್ಷ್ಮಿ ಲೇಔಟ್, ಹೊರಮಾವು ಭಾಗದಲ್ಲಿರು ಆರ್ಕಿಡ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:49 am, Sat, 4 February 23