Temple Of Success: ಟೆಂಪಲ್ ಆಫ್ ಸಕ್ಸಸ್ ಸಾಯಿದತ್ತ ರಘುನಾಥ್ ಗುರೂಜಿ ಬೆಂಗಳೂರಿನಲ್ಲಿ ವಿಧಿವಶ

| Updated By: ಸಾಧು ಶ್ರೀನಾಥ್​

Updated on: Aug 31, 2022 | 3:51 PM

ಅನುಯಾಯಿಗಳು ಬೆಂಗಳೂರು ಬಸವನಗುಡಿಯ ವಾಣಿ ನಿಲಾಸ ರಸ್ತೆಯಲ್ಲಿರುವ ಟೆಂಪಲ್ ಆಫ್ ಸಕ್ಸಸ್ ಬಳಿ ನಾಳೆ ಗುರುವಾರ (ಸೆಪ್ಟೆಂಬರ್ 1) ರಘುನಾಥ್ ಗುರೂಜಿ ಅವರ ಅಂತಿಮ ದರ್ಶನ ಪಡೆಯಬಹುದು.

Temple Of Success: ಟೆಂಪಲ್ ಆಫ್ ಸಕ್ಸಸ್ ಸಾಯಿದತ್ತ ರಘುನಾಥ್ ಗುರೂಜಿ ಬೆಂಗಳೂರಿನಲ್ಲಿ ವಿಧಿವಶ
ಟೆಂಪಲ್ ಆಫ್ ಸಕ್ಸಸ್ ಸಾಯಿದತ್ತ ರಘುನಾಥ್ ಗುರೂಜಿ ಬೆಂಗಳೂರಿನಲ್ಲಿ ವಿಧಿವಶ
Follow us on

ಬೆಂಗಳೂರು: ಟೆಂಪಲ್ ಆಫ್ ಸಕ್ಸಸ್ ನ (Temple Of Success) ಸಾಯಿದತ್ತ ರಘುನಾಥ್ ಗುರೂಜಿಯವರು (Sai Datta Ragunath guruji) ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ತೀವ್ರ ಅಸೌಖ್ಯ ಗೊಂಡಿದ್ದ ರಘುನಾಥ್ ಗುರೂಜಿ ಅವರು ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರೂಜಿಯವರು ಅಪಾರ ಭಕ್ತವೃಂದವನ್ನು ಹೊಂದಿದ್ದಾರೆ.

ರಘುನಾಥ್ ಗುರೂಜಿ ಅಂತಿಮ ದರ್ಶನ, ಅಂತ್ಯಕ್ರಿಯೆ:

ನಿನ್ನೆ (30th August 2022) ವಿಧಿವಶರಾದ ರಘುನಾಥ್ ಗುರೂಜಿ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 2 ರಂದು ಮಣಿಪಾಲದಲ್ಲಿ ನಡೆಯಲಿದೆ. ಅನುಯಾಯಿಗಳು ಬೆಂಗಳೂರು ಬಸವನಗುಡಿಯ ವಾಣಿ ನಿಲಾಸ ರಸ್ತೆಯಲ್ಲಿರುವ ಟೆಂಪಲ್ ಆಫ್ ಸಕ್ಸಸ್ ಬಳಿ ನಾಳೆ ಗುರುವಾರ (ಸೆಪ್ಟೆಂಬರ್ 1) ರಘುನಾಥ್ ಗುರೂಜಿ ಅವರ ಅಂತಿಮ ದರ್ಶನ ಪಡೆಯಬಹುದು. ಮರು ದಿನ ಸೆಪ್ಟೆಂಬರ್ 2 ರಂದು ಮಣಿಪಾಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಯಶಸ್ಸಿನ ದೇವಾಲಯ:
ಸಾಯಿ ದತ್ತ ರಘುನಾಥ ಗುರೂಜಿ ಅವರು ಹುಟ್ಟಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮುಗುತ್ತಿಯಲ್ಲಿ. ಅವರು ಟೆಂಪಲ್ ಆಫ್ ಸಕ್ಸೆಸ್‌ನ ಸಂಸ್ಥಾಪಕರಾಗಿದ್ದಾದ್ದರು. ಹಳೆಯ ಚಿಕಿತ್ಸಾ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಅಮೃತ್ ಚಿಕಿತ್ಸೆ (Amrutha Chikitse) ಎಂಬ ಹಳೆಯ ಪದ್ದತಿಯನ್ನು ಅಳವಡಿಸಿಕೊಂಡಿದ್ದರು. ಅವರ ಯೌವನದಲ್ಲಿ, ಅವರು ನಾಲ್ಕು ಕಾಯಿಲೆಗಳಿಂದ ಬಳಲುತ್ತಿದ್ದರು. 6 ವರ್ಷಗಳ ನೋವು ಮತ್ತು 200 ಕ್ಕೂ ಹೆಚ್ಚು ವೈದ್ಯರು, ಮೆಡಿಸಿನ್‌ಗಳು ಇತ್ಯಾದಿಗಳನ್ನು ಸಮಾಲೋಚಿಸಿದ ನಂತರ ಅವರು ಅಮೃತ್ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಂಡರು.

ಈ ಚಿಕಿತ್ಸೆಯು ನಾಲ್ಕು ತಿಂಗಳೊಳಗೆ ಅವರ ಎಲ್ಲಾ ಕಾಯಿಲೆಗಳನ್ನು ಗುಣಪಡಿಸಿತು. ಶ್ರೀ ಶಿರಡಿ ಸಾಯಿ ಬಾಬಾ ಅವರ ಒಳನೋಟದ ಮೂಲಕ, ಅವರು ಈ ದೈವಿಕ ಚಿಕಿತ್ಸೆಯನ್ನು ಅಗತ್ಯವಿರುವವರಿಗೆ ಹರಡಲು ನಿರ್ಧರಿಸಿದರು. ಅವರು 1999 ರಲ್ಲಿ ಸರಸ್ವತಿ ನಗರದಲ್ಲಿ ಟೆಂಪಲ್ ಆಫ್ ಸಕ್ಸೆಸ್ ಅನ್ನು ಪ್ರಾರಂಭಿಸಿದರು. ಅಂದಿನಿಂದ ಇದು ನಿರ್ಗತಿಕರಿಗೆ ಸಹಾಯ ಮಾಡುವ ಸಂಸ್ಥೆಯಾಗಿ ವಿಕಸನಗೊಂಡಿದೆ.

Published On - 3:40 pm, Wed, 31 August 22