ಬೆಂಗಳೂರು: ಪಶ್ಚಿಮ ಬಂಗಾಳದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಸಂಜಯನಗರ ಠಾಣೆ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ದೆಹಲಿ ಮೂಲದ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ರಜತ್, ಶಿವ್ ರಾಣಾ, ದೇವ್ ಸರೋಯಿ, ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು.
ಮಾರ್ಚ್ 24ರಂದು ಪಶ್ಚಿಮ ಬಂಗಾಳದ ಯುವತಿಯನ್ನು ರೆಸ್ಟೋರೆಂಟ್ಗೆ ಕರೆದೊಯ್ದಿದ್ದ ರಜತ್, ನಂತರ ತಡರಾತ್ರಿ ಆದ ಕಾರಣ ಸಂಜಯನಗರ ಠಾಣಾ ವ್ಯಾಪ್ತಿಯ ರೂಮ್ಗೆ ಕರೆದುಕೊಂಡು ಹೋಗಿದ್ದ. ರೂಮ್ನಲ್ಲಿ ಬೆದರಿಸಿ ಯುವತಿ ಮೇಲೆ ಗ್ಯಾಂಗ್ರೇಪ್ ಮಾಡಿದ್ದರು. ಯುವತಿ ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಯುವತಿ ನೀಡಿದ ದೂರಿನ ಹಿನ್ನೆಲೆ ಎಫ್ಐಆರ್ ದಾಖಲಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ರಾಷ್ಟ್ರಮಟ್ಟದ ಸ್ವಿಮ್ಮರ್ಗಳಾಗಿದ್ದು ಅಭ್ಯಾಸಕ್ಕೆಂದು ಬೆಂಗಳೂರಿನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Sariska Tiger Reserve: ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಬೆಂಕಿ ಅವಘಡ; ವಾಯುಪಡೆಯ ಹೆಲಿಕಾಪ್ಟರ್ ನೇಮಕ
ದೆಹಲಿ ಆರ್ಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹರ್ಜೋತ್ ಸಿಂಗ್; ಸಹಾಯ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ