ಹಿಜಾಬ್ ತೆಗೆಯುವಂತೆ 3 ಬಾರೀ ವಾರ್ನ್ ಮಾಡಿದ್ರೂ ಶಿಕ್ಷಕಿ ಡೋಂಟ್ ಕೇರ್, ಹೀಗಾಗಿ ತಕ್ಷಣದಿಂದಲೇ ಪರೀಕ್ಷಾ ಸೇವೆಯಿಂದ ರಿಲೀವ್ ಮಾಡಲಾಯ್ತು: ಸ್ಪಷ್ಟನೆ

ನನಗೆ ಹಿಜಾಬ್ ಧರಿಸಿ ಅಭ್ಯಾಸ ಆಗೋಗಿದೆ ತೆಗೆಯೋಕೆ ಆಗೊಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಹಿಜಾಬ್ ಪರೀಕ್ಷಾ ಮೇಲ್ವಿಚಾರಕಿ ಫಾತಿಮಾ ಅವರನ್ನು ಅಮಾನತು ಮಾಡಲಾಗಿತ್ತು. ಪರೀಕ್ಷಾ ಕೆಲಸದಿಂದ ಮುಖ್ಯ ಅಧೀಕ್ಷಕರು ವಜಾಗೊಳಿಸಿದ್ದರು.

ಹಿಜಾಬ್ ತೆಗೆಯುವಂತೆ 3 ಬಾರೀ ವಾರ್ನ್ ಮಾಡಿದ್ರೂ ಶಿಕ್ಷಕಿ ಡೋಂಟ್ ಕೇರ್, ಹೀಗಾಗಿ ತಕ್ಷಣದಿಂದಲೇ ಪರೀಕ್ಷಾ ಸೇವೆಯಿಂದ ರಿಲೀವ್ ಮಾಡಲಾಯ್ತು: ಸ್ಪಷ್ಟನೆ
ಪ್ರಾತಿನಿಧಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Mar 29, 2022 | 7:55 PM

ಬೆಂಗಳೂರು: ನಿನ್ನೆಯಿಂದ (ಮಾರ್ಚ್ 28) ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ(SSLC Exam) ಆರಂಭವಾಗಿದೆ. ಇನ್ನೊಂದು ಕಡೆ ಶಾಲೆ,ಕಾಲೇಜಿನಲ್ಲಿ ಹಿಜಾಬ್ಗೆ(Hijab) ಅವಕಾಶ ಇಲ್ಲ ಅಂತ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಆದೇಶಿಸಿದೆ. ಹೀಗಿದ್ದೂ, ರಾಜಾಜಿನಗರದ ಕೆಟಿಎಸ್ವಿ ಹೈಸ್ಕೂಲ್ ಶಿಕ್ಷಕಿ ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಬಂದಿದ್ದರು. ಹೀಗೆ ಹಿಜಾಬ್ ಧರಿಸಿ ಬಂದ ಪರೀಕ್ಷಾ ಮೇಲ್ವಿಚಾರಕಿ ಫಾತಿಮಾ ಅವರನ್ನು ಅಮಾನತು ಮಾಡಲಾಗಿದೆ. ಸದ್ಯ ಈ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ.

ನಿನ್ನೆ(ಮಾರ್ಚ್ 28) ರಾಜಾಜಿನಗರದ ಸಿದ್ದಗಂಗಾ ಪರೀಕ್ಷಾ ಕೇಂದ್ರದಲ್ಲಿ ವಿಧ್ಯಾರ್ಥಿನಿಯರು ದುಪ್ಪಟ್ಟಾವನ್ನೇ ಹಿಜಾಬ್ ರೀತಿ ಧಾರಣೆ ಮಾಡಿದ್ದರು. ದುಪ್ಪಟ್ಟ ಮೂಲಕ ತಲೆ, ಕಿವಿ, ಮುಖವನ್ನ ಕವರ್ ಮಾಡಿಕೊಂಡು ಪರೀಕ್ಷೆಗೆ ಮುಂದಾಗಿದ್ದರು. ಮುಸ್ಲಿಂ ಬಾಲಕರು ತಲೆಗೆ ಟೋಪಿ ಧರಿಸಿದ್ದನ್ನ ಪರೀಕ್ಷಾ ಅಧೀಕ್ಷಕಿ ತೆಗೆಸಿದ್ದರು. ಇದರ ಜೊತೆಗೆ ಪರೀಕ್ಷಾ ಸಿಬ್ಬಂದಿ ಸಹ ದುಪ್ಪಟ್ಟದಲ್ಲಿ ಹಿಜಾಬ್ ಧಾರಣೆ ಮಾಡಿದ್ದರು. ಈ ವೇಳೆ ಹಿಜಾಬ್ ತೆಗೆಯುವಂತೆ 3 ಬಾರೀ ವಾರ್ನ್ ಮಾಡಿದ್ರೂ ಶಿಕ್ಷಕಿ ಕೇರ್ ಮಾಡಿಲ್ಲ.

ನನಗೆ ಹಿಜಾಬ್ ಧರಿಸಿ ಅಭ್ಯಾಸ ಆಗೋಗಿದೆ ತೆಗೆಯೋಕೆ ಆಗೊಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಹಿಜಾಬ್ ಪರೀಕ್ಷಾ ಮೇಲ್ವಿಚಾರಕಿ ಫಾತಿಮಾ ಅವರನ್ನು ಅಮಾನತು ಮಾಡಲಾಗಿತ್ತು. ಪರೀಕ್ಷಾ ಕೆಲಸದಿಂದ ಮುಖ್ಯ ಅಧೀಕ್ಷಕರು ವಜಾಗೊಳಿಸಿದ್ದರು. ರಾಜಾಜಿನಗರದ KTSV ಅನುದಾನಿತ ಹೈಸ್ಕೂಲ್ ಶಿಕ್ಷಕಿಯಾಗಿರುವ ನೂರ್ ಫಾತಿಮಾ ಅವರನ್ನು ಪರೀಕ್ಷಾ ಮೇಲ್ವಚಾರಕರಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಹಿಜಾಬ್ ಧರಿಸಿ ಬಂದ ಹಿನ್ನೆಲೆ ಕೂಡಲೇ ಪರೀಕ್ಷಾ ಕೆಲಸದಿಂದ ವಜಾಗೊಳಿಸಿದ ರಾಜಾಜಿನಗರದ ಸಿದ್ದಗಂಗಾ ಶಾಲೆಯ ಪರೀಕ್ಷಾ ಕೇಂದ್ರದ ಅಧೀಕ್ಷಕಿ ಮಾಲಿನಿ, ಇವರ ಜಾಗಕ್ಕೆ ಮತ್ತೋರ್ವ ಪರೀಕ್ಷಾ ಮೇಲ್ವಿಚಾರಕರನ್ನು ನಿಯೋಜನೆ ಮಾಡಿದ್ದಾರೆ. ಹಿಜಾಬ್ ತೆಗಿಯಬೇಕು ಎನ್ನುವ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ. ಶಿಕ್ಷಕರಿಗೆ ಅನ್ವಯಿಸಲ್ಲ ಅಂತ ಅಧೀಕ್ಷಕರ ಜೊತೆ ಶಿಕ್ಷಕಿ ನೂರ್ ಫಾತಿಮಾ ವಾಗ್ವಾದ ನಡೆಸಿದರು. ಹಿಜಾಬ್ ತೆಗೆಯುವಂತೆ ಸೂಚಿಸಿದರು ಶಿಕ್ಷಕಿ ಫಾತಿಮಾ ನಿರಾಕಸಿದ್ದಾರೆ. ಹೀಗಾಗಿ ಪರೀಕ್ಷಾ ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಹಿನ್ನೆಲೆ ಶಿಕ್ಷಕನ ವಿರುದ್ಧ ಶ್ರೀರಾಮಸೇನೆ ದೂರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಹಿನ್ನೆಲೆ ಶಿಕ್ಷಕನ ವಿರುದ್ಧ ಶ್ರೀರಾಮಸೇನೆ ದೂರು ದಾಖಲಿಸಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಇರುವ ಸರ್ಕಾರಿ ಉರ್ದು ಪ್ರೌಡ ಶಾಲೆ ಶಿಕ್ಷಕ ಮೊಹಮ್ಮದ್ ಅಲಿ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ನಿನ್ನೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹೀಗಾಗಿ ಶಿಕ್ಷಕ ಅಲಿ ವಿರುದ್ಧ ಜೇವರ್ಗಿ ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ನಿಂಗನಗೌಡ ಪಾಟೀಲ್ ದೂರು ನೀಡಿದ್ದಾರೆ. ಅಲ್ಲದೆ ಶಿಕ್ಷಕ ಮೊಹಮ್ಮದ್ ಅಲಿ ಅಮಾನತ್ತು ಮಾಡುವಂತೆ ಆಗ್ರಹಿಸಿದ್ದಾರೆ.

ಹಿಜಾಬ್ ಅವಕಾಶ ನೀಡಿದ್ದಕ್ಕೆ ಪರೀಕ್ಷಾ ಮುಖ್ಯ ಅಧೀಕ್ಷಕರು ಸೇರಿ ಏಳು ಶಿಕ್ಷಕರ ಅಮಾನತು ಗದಗ: ಜಿಲ್ಲೆಯಲ್ಲಿ SSLC ಪರೀಕ್ಷೆಯಲ್ಲಿ ಹಿಜಾಬ್ ಹಾಕಿಕೊಂಡ ವಿದ್ಯಾರ್ಥಿಗಳಿಗೆ ಅನುಮತಿ ನೀಡಿದ ಹಿನ್ನೆಲೆ ಇಬ್ಬರು ಪರೀಕ್ಷಾ ಮುಖ್ಯ ಅಧೀಕ್ಷಕರು ಸೇರಿ ಏಳು ಶಿಕ್ಷಕರ ಅಮಾನತುಗೊಳಿಸಲಾಗಿದೆ. ಗದಗ ನಗರದ ಸಿಎಸ್ ಪಾಟೀಲ್ ಬಾಲಕರ ಹಾಗೂ ಬಾಲಕಿಯರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಿನ್ನೆ ಹಿಜಾಬ್ ಹಾಕಿಕೊಂಡು ಕೆಲ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಹಿಜಾಬ್ ಹಾಕಿಕೊಂಡ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೊಠಡಿಯಲ್ಲಿ ಅವಕಾಶ ನೀಡಿದಕ್ಕೆ ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಸಿಎಸ್ ಪಾಟೀಲ್ ಬಾಲಕರ ಪ್ರೌಢ ಶಾಲೆಯ ಮುಖ್ಯ ಅಧೀಕ್ಷಕ ಕೆಬಿ ಭಜಂತ್ರಿ ಅಮಾನತುಗೊಂಡಿದ್ದಾರೆ. ಸಿಎಸ್ ಪಾಟೀಲ್ ಬಾಲಕಿಯರ ಪ್ರೌಢಶಾಲಾ ಮುಖ್ಯ ಅಧೀಕ್ಷಕ ಬಿಎಸ್ ಹೊನಗುಂಡಿ ಅಮಾನತುಗೊಳಿಸಿ ಗದಗ ಡಿಡಿಪಿಐ ಬಸವಲಿಂಗಪ್ಪ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಶಂಕ್ರಣ್ಣ ಆತ್ಮಹತ್ಯೆ: ಗಂಡನಿಗೆ ಯಾವತ್ತೂ ಕಾಟ ಕೊಟ್ಟಿಲ್ಲ, ಆಸ್ತಿ-ಅಂತಸ್ತು ನೋಡಿ ಮದುವೆಯಾಗಿರಲಿಲ್ಲ ಎನ್ನುತ್ತಾರೆ ಮೇಘನಾ

ಕೊರೊನಾ ವೇಳೆ ಸಾವನ್ನು ಕಂಡು ಮರುಗಿದ್ದ ಸಿರಗುಪ್ಪದ ಆಂಬುಲೆನ್ಸ್ ಚಾಲಕ ದೇಹದಾನ -ನೇತ್ರದಾನ ಮಾಡಿದರು

Published On - 6:14 pm, Tue, 29 March 22