AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕ್ರಣ್ಣ ಆತ್ಮಹತ್ಯೆ: ಗಂಡನಿಗೆ ಯಾವತ್ತೂ ಕಾಟ ಕೊಟ್ಟಿಲ್ಲ, ಆಸ್ತಿ-ಅಂತಸ್ತು ನೋಡಿ ಮದುವೆಯಾಗಿರಲಿಲ್ಲ ಎನ್ನುತ್ತಾರೆ ಮೇಘನಾ

ಶಂಕ್ರಣ್ಣ ಆತ್ಮಹತ್ಯೆ: ಗಂಡನಿಗೆ ಯಾವತ್ತೂ ಕಾಟ ಕೊಟ್ಟಿಲ್ಲ, ಆಸ್ತಿ-ಅಂತಸ್ತು ನೋಡಿ ಮದುವೆಯಾಗಿರಲಿಲ್ಲ ಎನ್ನುತ್ತಾರೆ ಮೇಘನಾ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 29, 2022 | 5:52 PM

Share

ಬೆಂಗಳೂರಿಗೆ ಹೋಗಿ ಅಲ್ಲೇ ಇದ್ದುಬಿಡೋಣ ತಾನು ಪತಿಯೊಂದಿಗೆ ವರಾತ ತೆಗೆದಿರಲಿಲ್ಲ ಎಂದು ಹೇಳುವ ಮೇಘನಾ, ಶಂಕ್ರಣ್ಣ ಎರಡು ವರ್ಷಗಳ ನಂತರ ಅಕ್ಕಿಮರಿಪಾಳ್ಯದಲ್ಲೇ ಮನೆಕಟ್ಟೋಣ ಎಂದಿದ್ದರಂತೆ. ತನ್ನತ್ತೆಗೂ ಒಂದು ಚಿಕ್ಕ ಮನೆ ಕಟ್ಟುವುದಾಗಿ ಹೇಳಿದ್ದರು ಎನ್ನುತ್ತಾರೆ.

ಸೋಮಾವಾರ ತುಮಕೂರಿನ ಅಕ್ಕಿಮರಿಪಾಳ್ಯದಲ್ಲಿ (Akkimaripalya) ಆತ್ಮಹತ್ಯೆ ಮೂಲಕ ಸಾವನ್ನಪ್ಪಿರುವ ಶಂಕ್ರಣ್ಣನ (Shankranna) ತಾಯಿ ಮಗನ ಸಾವಿಗೆ ಸೊಸೆ ಮೇಘನಾ (Meghana) ಕಾರಣ ಎಂದು ಹೇಳುತ್ತಾರೆ. ಆದರೆ, ನನ್ನತ್ತೆ ಬೈದಿದಕ್ಕೆ ನನ್ನ ಗಂಡ ನೇಣು ಹಾಕಿಕೊಂಡು ಸತ್ತಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಂಗಳವಾರ ಮಾತಾಡಿದ ಮೇಘನಾ ಹೇಳುತ್ತಾರೆ. ಸೋಮವಾರ ಸಾಯಂಕಾಲ ಮೇಘನಾ ತಮ್ಮ ನಾಯಿಯನ್ನು ಓಡಾಡಲು ಬಿಟ್ಟ ಬಳಿಕ ಅದನ್ಯಾಕೆ ಬಿಟ್ಟೆ, ನನ್ನ ಸಾಯಿಸೋದಿಕ್ಕಾ? ಅಂತ ಶಂಕ್ರಣ್ಣನ ತಾಯಿ ಮೇಘನಾ ಮೇಲೆ ರೇಗಾಡಿದರು, ತನಗೆ ಬೇಸರವಾಗಿ ಮನೆಯಲ್ಲಿ ಅಳುತ್ತಾ ಮಲಗಿದ್ದಾಗ ಪತಿ ಬಂದು ವಿಚಾರಿಸಿದರು. ಅವರಿಗೆ ವಿಷಯ ತಿಳಿಸಿದಾಗ, ಹೋಗಿ ತಾಯಿಗೆ ಯಾಕೆ ಬೈದೆ ಅಂತ ಕೇಳಿದರು. ಅವರಿಬ್ಬರ ನಡುವೆ ವಾಗ್ವಾದ ನಡೆದ ಬಳಿಕ ನಿಮ್ಮಿಬ್ಬರ ನಡುವೆ ನನಗೆ ಸಾಕಾಗಿಹೋಗಿದೆ ಎಂದು ಪತಿ ಹೇಳಿದಾಗ, ಮತ್ಯಾಕೋ ಬದುಕಿದ್ದೀಯಾ, ಹೋಗಿ ಸಾಯಿ ಅಂತ ತನ್ನತ್ತೆ ಹೇಳಿದ ಮೇಲೆ ಬಹಳ ನೊಂದುಕೊಂಡ ಪತಿ ಹೋಗಿ ಅತ್ಮಹತ್ಯೆ ಮಾಡಿಕೊಂಡರು ಎಂದು ಮೇಘನಾ ಹೇಳುತ್ತಾರೆ.

ಪತಿಯೊಂದಿಗೆ ತನಗೆ ಯಾವುದೇ ಸಮಸ್ಯೆ ಇರಲಿಲ್ಲ, ಆದರೆ ಅತ್ತೆಯೇ ಕಳೆದ ಮೂರು ತಿಂಗಳುಗಳಿಂದ ಒಂದಿಲ್ಲೊಂದು ಕಾರಣಕ್ಕೆ ತನಗೆ ಕಾಟ ಕೊಡುತ್ತಿದ್ದರು ಎಂದು ಮೇಘನಾ ಹೇಳುತ್ತಾರೆ. ತಲೆ ಮೇಲೆ ತೆಂಗಿನಕಾಯಿ ಬಿದ್ದ ಬಳಿಕ ಹುಚ್ಚರಂತೆ ಆಡುತ್ತಿರುವ ನಾದಿನಿಯ ಬಗ್ಗೆಯೂ ಅವರು ದೂರುತ್ತಾರೆ. ಶಂಕ್ರಣ್ಣನ ಆಸ್ತಿ ನೋಡಿ ಮದುವೆಯಾಗಿರುವುನೆಂದು ಹೇಳುತ್ತಿರುವುದು ಸುಳ್ಳು, ಅಂಥ ಉದ್ದೇಶ ತನಗಿರಲಿಲ್ಲ, ಎಂದು ಹೇಳುವ ಮೇಘನಾಗೆ ಅಸಲಿಗೆ ಇದು ಎರಡನೇ ಮದುವೆ.

ಇದಕ್ಕೆ ಮೊದಲು ಅವರು ಮಂಡ್ಯದ ಯುವಕನೊಬ್ಬನನ್ನು ಮದುವೆಯಾಗಿದ್ದರಂತೆ. ಆದರೆ ಮೈ ತುಂಬಾ ಸಾಲ ಮಾಡಿಕೊಂಡಿದ್ದ ಆ ವ್ಯಕ್ತಿ ಒಂದು ದಿನ ನಾಪತ್ತೆಯಾದವನು ಪುನಃ ವಾಪಸ್ಸು ಬರಲಿಲ್ಲವಂತೆ.

ಬೆಂಗಳೂರಿಗೆ ಹೋಗಿ ಅಲ್ಲೇ ಇದ್ದುಬಿಡೋಣ ತಾನು ಪತಿಯೊಂದಿಗೆ ವರಾತ ತೆಗೆದಿರಲಿಲ್ಲ ಎಂದು ಹೇಳುವ ಮೇಘನಾ, ಶಂಕ್ರಣ್ಣ ಎರಡು ವರ್ಷಗಳ ನಂತರ ಅಕ್ಕಿಮರಿಪಾಳ್ಯದಲ್ಲೇ ಮನೆಕಟ್ಟೋಣ ಎಂದಿದ್ದರಂತೆ. ತನ್ನತ್ತೆಗೂ ಒಂದು ಚಿಕ್ಕ ಮನೆ ಕಟ್ಟುವುದಾಗಿ ಹೇಳಿದ್ದರು ಎನ್ನುತ್ತಾರೆ.

ತನ್ನತ್ತೆ ದೂರು ಕೊಡಲಿಚ್ಛಿಸಿದ್ದರೆ ಕೊಡಲಿ, ಸತ್ಯಾಂಶ ಏನು ಅಂತ ಪೊಲೀಸರಿಗೆ ತಿಳಿಸುತ್ತೇನೆ ಎನ್ನುವ ಸಂತೆಮುತ್ತೂರಿನ ಮೇಘನಾ ಈಗ ನಾಲ್ಕು-ತಿಂಗಳು ಬಸುರಿ ಅಂತೆ.

ಇದನ್ನೂ ಓದಿ:   ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸೊಸೆ ಮೇಘನಾ ಕಾರಣ ಎನ್ನುತ್ತಾರೆ ಶಂಕ್ರಣ್ಣನ ತಾಯಿ