ಬೆಂಗಳೂರು ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾದ ವಾಯುಮಾಲಿನ್ಯ! ಬೇಸಿಗೆಯಲ್ಲಿಯೂ ಮಂಜು ಕವಿದಂತಿರುವ ದಟ್ಟ ಹೊಗೆ

ಬೆಳಿಗ್ಗೆಯಿಂದಲೂ ದಟ್ಟ ಹೊಗೆ ಆವರಿಸಿಕೊಂಡು ಬೇಸಿಗೆ ಕಾಲದಲ್ಲೂ ಮಂಜು ಮುಸುಕಿದಂತೆ ಭಾಸವಾಗುತ್ತಿದೆ. ಘಟನಾ ಪ್ರದೇಶದಿಂದ ತೆರಳುವ ಜನರಿಗೆ ಉಸಿರು ತೆಗೆದುಕೊಳ್ಳಲೂ ಆಗದ ಸ್ಥಿತಿ ಇದೆ.

ಬೆಂಗಳೂರು ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾದ ವಾಯುಮಾಲಿನ್ಯ! ಬೇಸಿಗೆಯಲ್ಲಿಯೂ ಮಂಜು ಕವಿದಂತಿರುವ ದಟ್ಟ ಹೊಗೆ
ಬೇಸಿಗೆಯಲ್ಲಿಯೂ ಮಂಜು ಕವಿದಂತಿರುವ ದಟ್ಟ ಹೊಗೆ ಆವರಿಸಿದೆ
Follow us
TV9 Web
| Updated By: sandhya thejappa

Updated on:Mar 29, 2022 | 4:02 PM

ಆನೇಕಲ್: ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ (Industrial Area) ರಾಸಾಯನಿಕ ತಾಜ್ಯ ಹೊತ್ತಿ ಉರಿದ ಪರಿಣಾಮ ಬೊಮ್ಮಂಡಹಳ್ಳಿ ಸೇರಿದಂತೆ ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಾಮುತ್ತಾ ದಟ್ಟ ಹೊಗೆ ಆವರಿಸಿದೆ. ಕೈಗಾರಿಕಾ ಪ್ರದೇಶದ ಖಾಲಿ ಸ್ಥಳದಲ್ಲಿ ಹೋಟೆಲ್ (Hotel) ಸೇರಿದಂತೆ ಕಾರ್ಖಾನೆಗಳ ತ್ಯಾಜ್ಯ ಬಿಸಾಡಿರುವ ಪರಿಣಾಮ ಬಿಸಿಲಿಗೆ ಬೆಂಕಿ ಹೊತ್ತಿ ಅಲ್ಲಲ್ಲಿ ಬೆಂಕಿ ಅವಘಡ ಕೂಡ ನಡೆಯುತ್ತಿವೆ. ಬೊಮ್ಮಂಡಹಳ್ಳಿಯ ಸಮೀಪ ಹೊತ್ತಿ ಉರಿಯುತ್ತಿರುವ ತ್ಯಾಜ್ಯದ ಪರಿಣಾಮ ಇಡೀ ಪ್ರದೇಶದಲ್ಲಿ ಉಸಿರುಗಟ್ಟುವ ವಾತವರಣ ನಿರ್ಮಾಣವಾಗಿದೆ.

ಬೆಳಿಗ್ಗೆಯಿಂದಲೂ ದಟ್ಟ ಹೊಗೆ ಆವರಿಸಿಕೊಂಡು ಬೇಸಿಗೆ ಕಾಲದಲ್ಲೂ ಮಂಜು ಮುಸುಕಿದಂತೆ ಭಾಸವಾಗುತ್ತಿದೆ. ಘಟನಾ ಪ್ರದೇಶದಿಂದ ತೆರಳುವ ಜನರಿಗೆ ಉಸಿರು ತೆಗೆದುಕೊಳ್ಳಲೂ ಆಗದ ಸ್ಥಿತಿ ಇದೆ. ಜಿಗಣಿ ವ್ಯಾಪ್ತಿಯ ಅನೇಕ ಕಾರ್ಖಾನೆ ಹಾಗೂ ಹೋಟೆಲ್ ಸಿಬ್ಬಂದಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದರೂ, ಜಿಗಣಿ ಪುರಸಭೆ ಅಧಿಕಾರಿಗಳು ಕಣ್ಮುಚ್ಚಿ ಕೂತಿದ್ದಾರೆ. ಕಸ ಹಾಕುತ್ತಿರುವವ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ಭ್ರಷ್ಟಾಚಾರದ ಆರೋಪವೂ ಕೇಳಿ ಬಂದಿದೆ.

ದೆಹಲಿಯಂತಾಗುತ್ತಾ ಪರಿಸ್ಥಿತಿ?: ಬೆಂಗಳೂರು ನಗರದಲ್ಲಿ ಸದ್ಯ ಮಿತಿಮೀರಿದ ಟ್ರಾಫಿಕ್ ಕಾರಣದಿಂದ ಆಕ್ಸಿಜನ್ ಪ್ರಮಾಣ ಇಳಿತ ಕಂಡಿರುವುದು ಎಲ್ಲಾರಿಗೂ ತಿಳಿದಿರುವ ವಿಚಾರ. ಹೀಗಾಗಿ ಉದ್ಯಾನವನ ಹಾಗೂ ಪಾರ್ಕ್​ಗಳ ಅಭಿವೃದ್ಧಿಗೆ ಸರಕಾರ ಕೋಟ್ಯಾಂತರ ಹಣ ವ್ಯಯಿಸುತ್ತಿದೆ. ಬನ್ನೇರುಘಟ್ಟ ಉದ್ಯಾನವನ ಹಾಗೂ ನ್ಯಾಶನಲ್ ಪಾರ್ಕ್ ಬೆಂಗಳೂರು ನಗರಕ್ಕೆ ಶ್ವಾಸಕೋಶದ ರೀತಿ ಇದ್ದಂತೆ ಅಂತ ತಜ್ಞರು ಹಲವು ಬಾರಿ ಪ್ರಸ್ತಾಪ ಮಾಡಿದ್ದಾರೆ. ಹೀಗಿದ್ದಾಗ ಜಿಗಣಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಆಕ್ಸಿಜನ್ ಪ್ರಮಾಣ ಕುಗ್ಗಿಸುವ ಕೆಲಸ ಮಾಡುತ್ತಿವೆ ಅನ್ನೋದು ಪ್ರಮುಖ ಅಂಶ. ಅದಕ್ಕೆ ತಾಜ್ಯ ವಿಲೇವಾರಿ ಆಗದೇ ಇರುವ ಕಾರಣ ಬೆಂಕಿ ಹೊತ್ತಿ ಉರಿಯುವ ಘಟನೆ ನಡೆಯುತ್ತಿವೆ.

ಇದನ್ನೂ ಓದಿ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ಬೆಂಗಳೂರಿನ ಎನ್ಐಎ ಅಧಿಕೃತ ಕಚೇರಿಯಲ್ಲಿ ಕಾರ್ಯಾರಂಭ

ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ 2ನೇ ದಿನಕ್ಕೆ; ರೈತರು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಆಗ್ರಹ

Published On - 4:01 pm, Tue, 29 March 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್