ದೆಹಲಿ ಆರ್ಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹರ್ಜೋತ್ ಸಿಂಗ್; ಸಹಾಯ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ
ತಮ್ಮ ಮಗ ಬದುಕುಳಿದು ಬಂದಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಹರ್ಜೋತ್ ಸಿಂಗ್ ತಂದೆ ಕೇಸರ್ ಸಿಂಗ್, ನನ್ನ ಪುತ್ರನಿಗೆ ಇನ್ನೊಂದು ಅವಕಾಶ ಸಿಕ್ಕಿದೆ. ಖಂಡಿತವಾಗಿಯೂ ಉಕ್ರೇನ್ಗೆ ಮತ್ತೆ ಓದುವುದಕ್ಕೋಸ್ಕರ ಹೋಗುತ್ತಾನೆ ಎಂದಿದ್ದಾರೆ.
ಉಕ್ರೇನ್ನ ಕೀವ್ನಲ್ಲಿ ರಷ್ಯಾ ಸೈನಿಕರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಭಾರತದ ವಿದ್ಯಾರ್ಥಿ ಹರ್ಜೋತ್ ಸಿಂಗ್ ಇದೀಗ ಚೇತರಿಸಿಕೊಂಡಿದ್ದು, ದೆಹಲಿಯ ಸೇನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ನನ್ನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆದರೆ ಮುಂದೆಯೂ ಸ್ವಲ್ಪ ಚಿಕಿತ್ಸೆಯ ಅಗತ್ಯವಿದ್ದು, ಕೇಂದ್ರ ಸರ್ಕಾರ ನನಗೆ ಸಹಾಯ ಮಾಡಬೇಕು ಎಂದು ಹರ್ಜೋತ್ ಸಿಂಗ್ ಹೇಳಿದ್ದಾರೆ. ನನ್ನ ಕೈ ಮತ್ತು ಕಾಲು ಪಾದಗಳು ಸರಿಯಾಗಲು ಇನ್ನೂ ಒಂದು ವರ್ಷ ಚಿಕಿತ್ಸೆ ಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ನನ್ನ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ತಂದೆಗೂ ನಿವೃತ್ತಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸಹಾಯ ಮಾಡಬೇಕು ಎಂದು ಅವರು ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.
Indian student Harjot Singh, injured in Ukraine was discharged from Army hospital in Delhi
“The doctor said that my hands and feet will be treated for about 1 year. My financial condition is not good, my father has retired. I want GoI to help me with further treatment,” he said pic.twitter.com/JwRVYaohHj
— ANI (@ANI) March 29, 2022
ತಮ್ಮ ಮಗ ಬದುಕುಳಿದು ಬಂದಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಹರ್ಜೋತ್ ಸಿಂಗ್ ತಂದೆ ಕೇಸರ್ ಸಿಂಗ್, ನನ್ನ ಪುತ್ರನಿಗೆ ಇನ್ನೊಂದು ಅವಕಾಶ ಸಿಕ್ಕಿದೆ. ಖಂಡಿತವಾಗಿಯೂ ಉಕ್ರೇನ್ಗೆ ಮತ್ತೆ ಓದುವುದಕ್ಕೋಸ್ಕರ ಹೋಗುತ್ತಾನೆ. ಮೊದಲು ನನ್ನ ಪುತ್ರ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು. ಬಳಿಕ ಮುಂದೇನು ಎಂದು ಯೋಚಿಸಲಿ. ಯಾವುದೇ ದೇಶವೂ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಈಗ ನಡೆಯುತ್ತಿರುವ ಯುದ್ಧ ಅಹಂಕಾರಗಳ ನಡುವೆ ನಡೆಯುತ್ತಿದೆ ಹೊರತು ಎರಡು ದೇಶಗಳ ಮಧ್ಯೆ ಅಲ್ಲ ಎಂದು ಹೇಳಿದ್ದಾರೆ. ಹರ್ಜೋತ್ ಸಿಂಗ್ರನ್ನು ಕೀವ್ನಿಂದ ಆಂಬುಲೆನ್ಸ್ ಮೂಲಕ ಪೋಲ್ಯಾಂಡ್ಗೆ ಕರೆತಂದು ಅಲ್ಲಿಂದ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿತ್ತು.