ಸ್ಯಾಟ್‌ಲೈಟ್ ನಿಲ್ದಾಣದ ಶೀಟ್​ಗಳು ಕಳಚಿ‌ ಬೀಳೊ ಆತಂಕ; ಅಧಿಕಾರಿಗಳು ಗಮನಹರಿಸುವಂತೆ ಪ್ರಯಾಣಿಕರ ಮನವಿ

ಬ್ರಾಂಡ್ ಬೆಂಗಳೂರು ಕನಸನ್ನ ಹೊತ್ತಿರುವ ಮಂತ್ರಿಗಳೇ ಒಮ್ಮೆ ಇಲ್ನೋಡಿ. ಬ್ರಾಂಡ್ ಬೆಂಗಳೂರಿನ ಈ ಬಸ್ ನಿಲ್ದಾಣ ನೋಡಿದ್ರೆ ಬೆಚ್ಚಿ ಬೀಳ್ತಿರಾ. ಪ್ರತಿದಿನ ಸಾವಿರಾರು ಜನರು ಓಡಾಡೊ ಬಸ್ ನಿಲ್ದಾಣ ಎಷ್ಟು ಸೇಫ್ ಆಗಿದೆ ಗೊತ್ತಾ? ಸ್ಯಾಟ್‌ಲೈಟ್ ನಿಲ್ದಾಣದ ಮೇಲ್ಚಾವಣಿ ಪರಸ್ಥಿತಿ ನೋಡಿದರೆ, ಕ್ಲಿಷ್ಟ ಪರಸ್ಥಿತಿಯಲ್ಲಿ ಇದೆ. ಯಾವಾಗ ಬೇಕಾದ್ರು ಬೀಳಬಹುದು.

ಸ್ಯಾಟ್‌ಲೈಟ್ ನಿಲ್ದಾಣದ ಶೀಟ್​ಗಳು ಕಳಚಿ‌ ಬೀಳೊ ಆತಂಕ; ಅಧಿಕಾರಿಗಳು ಗಮನಹರಿಸುವಂತೆ ಪ್ರಯಾಣಿಕರ ಮನವಿ
ಸ್ಯಾಟ್‌ಲೈಟ್ ನಿಲ್ದಾಣ
Edited By:

Updated on: Oct 09, 2024 | 7:24 AM

ಬೆಂಗಳೂರು, ಅ.09: ಸಿಲಿಕಾನ್ ಸಿಟಿ ಬೆಂಗಳೂರನ್ನ ಸರ್ಕಾರ ಬ್ರ್ಯಾಂಡ್ ಬೆಂಗಳೂರು (Brand Bengaluru) ಮಾಡಲು ಹೊರಟಿದೆ. ಆದರೆ, ಪ್ರತಿದಿನ ಸಾವಿರಾರು ಜನರು ಬರುವ ನಿಲ್ದಾಣದಲ್ಲಿಲ್ಲ ಸೇಫ್ಟಿ. ನಗರದ ಸ್ಯಾಟ್‌ಲೈಟ್ ನಿಲ್ದಾಣದ (Starlight Bus Stand) ಮೇಲ್ವಾವಣಿಗೆ ಅಳವಡಿಕೆ ಮಾಡಲಾದ ಶೀಟ್ ಗಳು ಈಗಲೋ ಆಗಲೋ ಕಳಚಿ‌ ಬೀಳೊ ಆತಂಕ ಎದುರಾಗಿದೆ. ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಶಿಥಿಲಾವಸ್ಥೆಗೆ ತಲುಪಿದ್ದು ಯಾವಾಗ ಏನಾಗುತ್ತೆ ಎಂಬ ಆತಂಕ ಹೆಚ್ಚಾಗಿದೆ.

ಈ ಬಸ್ ನಿಲ್ದಾಣವೇನೋ ನೋಡಲು ಹೈಟೆಕ್ ಆಗಿದೆ. ಆದರೆ ಇಲ್ಲಿನ  ಮೇಲ್ವಾವಣಿಗೆ ಅಳವಡಿಕೆ ಮಾಡಲಾದ ಶೀಟ್ ಗಳು  ಹಾಳಾಗಿವೆ. ಪ್ರತಿನಿತ್ಯ ಸಾವಿರಾರು ಜನ ಓಡಾಡೊ ಜಾಗವಿದು. ಇಲ್ಲಿ ಏನಾದ್ರು ಆದರೆ ಯಾರು ಹೊಣೆ. ಇಲಾಖೆ ಅಧಿಕಾರಿಗಳು ಜವಾಬ್ದಾರಿ ತಗೆದುಕೊಳ್ಳಬೇಕು. ಮಳೆ ಗಾಳಿ ಬಂದ್ರೆ ಯಾವ ಸಂದರ್ಭದಲ್ಲಿ ಏನಾಗುತ್ತೆ ಅಂತ ಭಯ ಆಗುತ್ತೆ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕು ಅಂತ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ವೈಟ್ ಬೋರ್ಡ್ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ; ಪ್ರಮೋಷನ್‌‌ ರೀಲ್ಸ್ ಮಾಡುವವರ ಮೇಲೆ ಹದ್ದಿನ ಕಣ್ಣು

ಇನ್ನೂ ಸ್ಯಾಟ್‌ಲೈಟ್ ನಿಲ್ದಾಣದ ಮೇಲ್ಚಾವಣಿ ಪರಸ್ಥಿತಿ ನೋಡಿದರೆ, ಕ್ಲಿಷ್ಟ ಪರಸ್ಥಿತಿಯಲ್ಲಿ ಇದೆ. ಯಾವಾಗ ಬೇಕಾದ್ರು ಬೀಳಬಹುದು ಸರ್ಕಾರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಓಡಾಡಲು ಭಯವಾಗುತ್ತೆ ಹೀಗಾಗಿ ಆದಷ್ಟು ಬೇಗನೆ ಸರಿ ಪಡಿಸಬೇಕು ಅಂತ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಏನಾದರೂ ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ತುಕ್ಕು ಹಿಡಿದ ಶೀಟ್ ಗಳನ್ನ ತಗೆದು ಹೊಸ ಶೀಟ್ ಅಳವಡಿಕೆ ಮಾಡುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ