ಬೆಂಗಳೂರು: ಮಹಾಮಾರಿ ಕೊರೊನಾದಿಂದ ಬಂದ್ ಆಗಿದ್ದ ಶಾಲೆಗಳು ಕೊನೆಗೂ ತೆರೆಯುತ್ತಿವೆ. ಶಾಲೆ ಆರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದ್ರೆ ಇದರ ಬೆನ್ನಲ್ಲೇ ಫೀಸ್ ಫೈಟ್ ಶುರುವಾಗಿದೆ. ಸೆಪ್ಟೆಂಬರ್ 6ರಿಂದ ರಾಜ್ಯದಲ್ಲಿ ಶಾಲೆಗಳು ತೆರೆಯಲಿದ್ದು 6, 7, 8ನೇ ತರಗತಿಗಳು ಶುರು ಆಗಲಿವೆ. ಇದರ ಜೊತೆಗೆ ಖಾಸಗಿ ಶಾಲೆಗಳಿಂದ ಫೀಸ್ ಫೈಟ್ ಶುರುವಾಗಿದೆ.
ಶಾಲೆಗೆ ಮಕ್ಕಳು ಎಂಟ್ರಿಯಾಗುತ್ತಿದ್ದಂತೆ ಶುಲ್ಕ ಸಮರ ಶುರುವಾಗಿದೆ. ಕಳೆದ ವರ್ಷ 70% ಫೀಸ್ ಕಟ್ಬೇಕು ಅಂತಾ ಸರ್ಕಾರ ಹೇಳಿತ್ತು. ಆದ್ರೆ ಇವಾಗ ಫೀಸ್ ಕಡಿತ ವಿಚಾರ ಕೋರ್ಟ್ ನಲ್ಲಿದೆ. ಸರ್ಕಾರ ಹಾಗೂ ಶಿಕ್ಷಣ ಸಚಿವರು ಪೀಸ್ ವಿಚಾರ ಕೋರ್ಟ್ ನಲ್ಲಿದೆ ಅಂತಿದ್ದಾರೆ. ಕೋರ್ಟ್ ಹೆಗಲಿಗೆ ಹಾಕಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳು ಫುಲ್ ಫೀಸ್ಗೆ ಮುಂದಾಗಿವೆ. ಮಕ್ಕಳ ಶಾಲೆಗಳ ಎಂಟ್ರಿಗೂ ಮೊದಲೆ ಫೀಸ್ ಡಿಮ್ಯಾಂಡ್ ಶುರುವಾಗಿದೆ.
ಬಾಕಿ ಇರುವ ಹಾಗೂ ಪ್ರಸ್ತುತ ಸಾಲಿನ ಫೀಸ್ ಕಟ್ಟುವಂತೆ ಒತ್ತಡ ಹಾಕುತ್ತಿವೆ. ಅಲ್ಲದೇ ಕಳೆದ ವರ್ಷಕ್ಕಿಂತ ಈ ವರ್ಷ ಫೀಸ್ ಜಾಸ್ತಿ ಮಾಡಿದ್ದಾರೆ. ಪೋಷಕರು ಎಷ್ಟು ಫೀಸ್ ಕಟ್ಟಬೇಕು ಅಂತಾ ಅರ್ಥವಾಗುತ್ತಿಲ್ಲ. ಎಷ್ಟು ಫೀಸ್ ಕಟ್ಟಬೇಕು ಅನ್ನೊ ಗೊಂದಲದಲ್ಲಿ ಪೋಷಕರಿದ್ದೇವೆ ಎಂದು ವಿದ್ಯಾರ್ಥಿಗಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ನಾಳೆಯಿಂದ ಶಾಲೆಗಳು ಆರಂಭ
ನಾಳೆಯಿಂದ ಮಕ್ಕಳ ಶಾಲಾ ದಾಖಲಾತಿಯನ್ನು ಪ್ರಾರಂಭಿಸಿ, ಆಗಸ್ಟ್ 31ರ ಒಳಗೆ ದಾಖಲಾತಿ ಮುಕ್ತಾಯಗೊಳಿಸಬೇಕು. ಲಾಕ್ಡೌನ್ ಇರುವ ಜಿಲ್ಲೆಗಳಲ್ಲಿ ಪಾಸ್ ಪಡೆದು ಶಾಲೆಗೆ ಬರಬೇಕು. ಈಗಾಗಲೇ ಒಂದು ಶೈಕ್ಷಣಿಕ ವರ್ಷ ತಡವಾಗಿದೆ. ಶಿಕ್ಷಕರು ಅನ್ಯ ಕಾರಣ ನೀಡುವಂತಿಲ್ಲ. ಕೊವಿಡ್ ಸಮಯದಲ್ಲಿ ವೈದ್ಯರು ಪೌರಕಾರ್ಮಿಕರ ಮಾದರಿಯಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಎಂದು ಅನ್ಬುಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಶೈಕ್ಷಣಿಕ ವರ್ಷ ಮೂಂದುಡುವ ಪ್ರಶ್ನೆಯೇ ಇಲ್ಲ. ಕೊವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ನೀಡಬೇಕಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶುಲ್ಕದ ಲೆಕ್ಕದಲ್ಲಿ ಶಾಲೆ ಕಳ್ಳಾಟ; ಫುಲ್ ಫೀಸ್ ಕಟ್ಟಿದ ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್