ಕಂಠೀರವ ಸ್ಟುಡಿಯೋ ಸುತ್ತಮುತ್ತ ಸೆಕ್ಷನ್ 144 ಜಾರಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್

ಸದ್ಯಕ್ಕೆ ಕಂಠೀರವ ಸ್ಟುಡಿಯೋ ಒಳಗೆ ಪ್ರವೇಶ ನಿರ್ಬಂಧ ಇದೆ. ಸೆಕ್ಷನ್ 144 ಜಾರಿ ಮಾಡುತ್ತೇವೆ. ಸ್ಥಳೀಯ ಡಿಸಿಪಿಯವರು ಈ ಆದೇಶವನ್ನು ಮಾಡುತ್ತಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಕಂಠೀರವ ಸ್ಟುಡಿಯೋ ಸುತ್ತಮುತ್ತ ಸೆಕ್ಷನ್ 144 ಜಾರಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್
ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್
Follow us
TV9 Web
| Updated By: preethi shettigar

Updated on:Oct 31, 2021 | 11:36 AM

ಬೆಂಗಳೂರು: ಕನ್ನಡ ಚಿತ್ರರಂಗದ ನಾಯಕ ನಟ ಪುನೀತ್​ ರಾಜ್​ ಕುಮಾರ್​ ಅವರ ಅಂತ್ಯ ಸಂಸ್ಕಾರ ವ್ಯವಸ್ಥಿತವಾಗಿ ನಡೆದಿದೆ. ಯಾವುದೇ ರೀತಿ ವಿಧಿವಿಧಾನಕ್ಕೆ ಅಡಚಣೆಯಾಗದಂತೆ ನಿರ್ವಹಿಸಿದ್ದೇವೆ. ವಾಹನ ವ್ಯವಸ್ಥೆ ಸೌಕರ್ಯ ಎಲ್ಲಾ ಆಗಿತ್ತು. ಕರ್ನಾಟಕ ಸರ್ಕಾರದ ಸಕಲ ಗೌರವ ಸಲ್ಲಿಸಿದ್ದೇವೆ. ಕುಟುಂಬಸ್ಥರು ವಿಧಿ ವಿಧಾನ ಮಾಡಿದ್ದಾರೆ. ಎಲ್ಲಾರಿಗೂ ದುಖಃವಾಗಿದೆ. ಆದರೂ ಸಹಕಾರ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಬಿಬಿಎಂಪಿ, ಪೊಲೀಸ್​ ಸಿಬ್ಬಂದಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ಕುಟುಂಬಸ್ಥರಿಂದ ಇಂದು (ಅಕ್ಟೋಬರ್​ 31) ಹಾಲು ತುಪ್ಪ ಕಾರ್ಯ ಇಲ್ಲ. 5ನೇ ದಿನ ಕುಟುಂಬಸ್ಥರಿಂದ ಹಾಲು-ತುಪ್ಪ ಬಿಡುವ ಕಾರ್ಯ ಇದೆ. ಹೀಗಾಗಿ ಹಾಲು, ತುಪ್ಪ ಶಾಸ್ತ್ರದ ಬಳಿಕ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋ ಒಳಗೆ ಪ್ರವೇಶಕ್ಕೆ ಅವಕಾಶ ಇದೆ. ಸದ್ಯಕ್ಕೆ ಕಂಠೀರವ ಸ್ಟುಡಿಯೋ ಒಳಗೆ ಪ್ರವೇಶ ನಿರ್ಬಂಧ ಇದೆ. ಸೆಕ್ಷನ್ 144 ಜಾರಿ ಮಾಡುತ್ತೇವೆ. ಸ್ಥಳೀಯ ಡಿಸಿಪಿಯವರು ಈ ಆದೇಶವನ್ನು ಮಾಡುತ್ತಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಕಂಠೀರವ ಸ್ಟೂಡಿಯೋ ಆವರಣದಲ್ಲಿ ಪೊಲೀಸರ ಬಂದೊಸ್ತ್ ಕಂಠೀರವ ಸ್ಟೂಡಿಯೋ ಆವರಣದಲ್ಲಿ 11 ದಿನ ನಿಷೇಧಾಜ್ಞೆ ಜಾರಿ ಹಿನ್ನಲೆಯಲ್ಲಿ ಪೊಲೀಸರ ಭಾರೀ ಬಂದೊಸ್ತ್ ನಡೆಸಿದ್ದಾರೆ. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ನೇತೃತ್ವದಲ್ಲಿ ಬಿಗಿ ಬಂದೊಬಸ್ತ್ ನಡೆಸಲಾಗಿದೆ. ಭದ್ರತೆಯಲ್ಲಿ 400ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲಾಗಿದ್ದು, ಕಂಠೀರವ ಸ್ಟೂಡಿಯೋ ಸುತ್ತಲೂ ಪೊಲೀಸರು ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತಿದ್ದು, ಗುಂಪು ಸೇರಿದ ಜೊತೆಗೆ ನಿಂತಲ್ಲೆ ನಿಂತವರನ್ನು ಕಳುಹಿಸುತ್ತಿದ್ದಾರೆ.

ನಟ ಪುನೀತ್ ಅಂತ್ಯಕ್ರಿಯೆ ವೇಳೆ ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಯನ್ನು ಪ್ರಶಂಸಿಸಿದ ಕಮಲ್ ಪಂತ್ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ವೇಳೆ ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ ಪ್ರಶಂಸಿದ್ದಾರೆ. ನಟ ಪುನೀತ್ ಅಂತಿಮ ದರ್ಶನ, ಅಂತಿಮ ಯಾತ್ರೆ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸಿಬ್ಬಂದಿಯ ಕೈ ಕುಲುಕಿ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Puneeth Rajkumar Funeral: ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಅಪ್ಪು ಚಿರ ನಿದ್ರೆ; ಈಡಿಗ ಸಂಪ್ರದಾಯದಂತೆ ಪುನೀತ್​ ಅಂತ್ಯಕ್ರಿಯೆ

‘ಪುನೀತ್‌ ರಾಜ್​​ಕುಮಾರ್‌ ಇಲ್ಲ ಅನ್ನೋದನ್ನ ನನಗೆ ನಂಬೋಕೆ ಆಗ್ತಿಲ್ಲ’: ರಿಷಬ್​ ಶೆಟ್ಟಿ

Published On - 9:16 am, Sun, 31 October 21

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ