Train Cancellation: ಬೆಂಗಳೂರಿ​ಗೆ​ ಸಂಪರ್ಕ ಕಲ್ಪಿಸುವ ದಕ್ಷಿಣ ರೈಲ್ವೆ ವಲಯದ ಕೆಲ ರೈಲುಗಳು ರದ್ದು

|

Updated on: Apr 26, 2023 | 10:33 AM

ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ದಕ್ಷಿಣ ರೈಲ್ವೆ ವಲಯದ ಕೆಲ ರೈಲುಗಳು ಏಪ್ರಿಲ್ ತಿಂಗಳಲ್ಲಿ​ ಈ ದಿನಾಂಕದಂದು ರದ್ದಾಗಿವೆ.

Train Cancellation: ಬೆಂಗಳೂರಿ​ಗೆ​ ಸಂಪರ್ಕ ಕಲ್ಪಿಸುವ ದಕ್ಷಿಣ ರೈಲ್ವೆ ವಲಯದ ಕೆಲ ರೈಲುಗಳು ರದ್ದು
ರೈಲು
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ (Bengaluru) ಸಂಪರ್ಕ ಕಲ್ಪಿಸುವ ದಕ್ಷಿಣ ರೈಲ್ವೆ ವಲಯದ (Southern Railway Zone) ಕೆಲ ರೈಲುಗಳು ಏಪ್ರಿಲ್ ತಿಂಗಳಲ್ಲಿ​ ಈ ದಿನಾಂಕದಂದು ರದ್ದಾಗಿವೆ. ಹಳಿಗಳ ಕಾರಿಡಾರ್ ಬ್ಲಾಕ್​ಗಳ ನಿರ್ವಹಣೆ ಕಾರ್ಯ ನಡೆಯುತ್ತಿರುವ ಹಿನ್ನೆಲೆ ರೈಲುಗಳನ್ನು ರದ್ದು ಮಾಡಲಾಗಿದೆ. ರದ್ದಾಗಿರುವ ರೈಲುಗಳ ಸಂಖ್ಯೆ ಈ ಕೆಳಗಿನಂತಿವೆ.

ರದ್ದಾದ ರೈಲುಗಳು/ಭಾಗಶಃ ರದ್ದು

1. ರೈಲು ಸಂಖ್ಯೆ (12678): ಏಪ್ರಿಲ್​​ 27 ರಂದು ಕೇರಳದ ಎರನಾಕುಲಂನಿಂದ ಹೊರಟು ಕೆಎಸ್​ಆರ್​​ ಬೆಂಗಳೂರು ತಲುಪಲಿದ್ದ ಡೈಲಿ ಸೂಪರ್​​​​ಫಾಸ್ಟ್​ ಎಕ್ಸಪ್ರೆಸ್​ ​ರದ್ದಾ​ಗಿದೆ.

2. ರೈಲು ಸಂಖ್ಯೆ (12677): ಏಪ್ರಿಲ್​​ 28 ರಂದು ಕೆಎಸ್​ಆರ್​ ಬೆಂಗಳೂರು-ಎರನಾಕುಲಂ ಮಧ್ಯೆ ಸಂಪರ್ಕ ಕಲ್ಪಿಸಲಿರುವ ಡೈಲಿ ಸೂಪರ್​​​​ಫಾಸ್ಟ್ಎಕ್ಸಪ್ರೆಸ್​ ಕೂಡಾ ​ರದ್ದಾ​ಗಿದೆ.

3. ರೈಲು ಸಂಖ್ಯೆ (12677): ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಏಪ್ರಿಲ್ 26 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದ್ದು, ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆ ಇಲ್ಲ. ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಿಗ್ಗೆ 6.10 ಕ್ಕೆ ಹೊರಟಿದೆ.

ಇದನ್ನೂ ಓದಿ: Vande Bharat Express: ಕೇರಳದ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಸರಗೋಡಿಗೂ ವಿಸ್ತರಣೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

4. ರೈಲು ಸಂಖ್ಯೆ (01772): ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು, ಏಪ್ರಿಲ್ 26 ರಂದು ಮಾರಿಕುಪ್ಪಂನಿಂದ ಹೊರಡಲಿದ್ದು, ಬೆಂಗಳೂರು ಕಂಟೋನ್ಮೆಂಟ್‌ ಕೊನೆ ನಿಲ್ದಾಣವಾಗಿದೆ.

5. ರೈಲು ಸಂಖ್ಯೆ (06396): ಕೆಎಸ್​ಆರ್​ ಬೆಂಗಳೂರು-ಮಾರಿಕುಪ್ಪಂ ಎಮ್​ಇಎಮ್​ಯು ವಿಶೇಷ ರೈಲು, ಏಪ್ರಿಲ್ 26 ರಂದು ನಿಗದಿತ ಸಮಯದಲ್ಲಿ ಕಂಟೋನ್ಮೆಂಟ್‌ನಿಂದ ಹೊರಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Wed, 26 April 23