ಬೆಂಗಳೂರಿನಲ್ಲೊಂದು ಖತರ್ನಾಕ್ ಜೋಡಿ: ಪ್ರೀತಿ, ಪ್ರೇಮದ ಜೊತೆಗೆ ಇನ್ನೇನೋ ಮಾಡಲು ಹೋಗಿ ತಗ್ಲಾಕೊಂಡರು​

ನಗರದೆಲ್ಲೆಡೆ ಬೈಕ್​ ಕಳ್ಳತನ ಜಾಸ್ತಿಯಾಗಿದ್ದು, ಅದರಂತೆ ಇದೀಗ ಇಬ್ಬರು ಖತರ್ನಾಕ್ ಜೋಡಿಗಳನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಮೋಜು ಮಸ್ತಿಗಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ ಜೋಡಿ ಇದೀಗ ಪೊಲೀಸ್​ ಅತಿಥಿಯಾಗಿದ್ದಾರೆ.

ಬೆಂಗಳೂರಿನಲ್ಲೊಂದು ಖತರ್ನಾಕ್ ಜೋಡಿ: ಪ್ರೀತಿ, ಪ್ರೇಮದ ಜೊತೆಗೆ ಇನ್ನೇನೋ ಮಾಡಲು ಹೋಗಿ ತಗ್ಲಾಕೊಂಡರು​
ಬೈಕ್​ ಕಳ್ಳತನ ಮಾಡಿ ಸಿಕ್ಕಿಬಿದ್ದ ಜೋಡಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 26, 2023 | 12:53 PM

ಬೆಂಗಳೂರು: ನಗರದೆಲ್ಲೆಡೆ ಬೈಕ್​ ಕಳ್ಳತನ ಜಾಸ್ತಿಯಾಗಿದ್ದು, ಅದರಂತೆ ಇದೀಗ ಇಬ್ಬರು ಖತರ್ನಾಕ್ ಜೋಡಿಗಳನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಹೌದು ಆರೋಪಿ ಮುರುಗಾ ಮತ್ತು ಆತನ ಪ್ರೇಯಸಿ ಸೇರಿ ಮೋಜು, ರಾಯಲ್ ಲೈಫ್​​ಗಾಗಿ ಬೈಕ್​ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಬಂದ ಹಣದಲ್ಲಿ ಈ ಜೋಡಿ ಹಕ್ಕಿಗಳು ಮಾದಕವಸ್ತು ಸೇವಿಸಿ ಮೋಜು ಮಾಡುತ್ತಿದ್ದರು. ಕೇವಲ ಪ್ರಿಯಕರ ಮಾತ್ರವಲ್ಲದೆ ಆತನ ಪ್ರೇಯಸಿಯೇ ಖುದ್ದು ಬೈಕ್ ಕದಿಯುತ್ತಿದ್ದಳು. ಇದೀಗ ಈ ಲವರ್ಸ್ ಬೈಕ್ ಕದ್ದು ಪೊಲೀಸರ ಅತಿಥಿಯಾಗಿದ್ದಾರೆ. ಇನ್ನು ಇವರಿಬ್ಬರ ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುರುಗನ ಪ್ರೀತಿಯಲ್ಲಿ ಬಿದ್ದು ಕಳ್ಳತನಕ್ಕೆ ಸಾಥ್ ಕೊಟ್ಟಿದ್ದ ಯುವತಿ

ಹೌದು ಮುರುಗನ ಪ್ರೀತಿಯಲ್ಲಿ ಬಿದ್ದು, ಈ ಯುವತಿ ಕೂಡ ಆತನ ಕ್ರೈಂ ಚಟುವಟಿಕೆಗೆ ಸಾಥ್​ ಕೊಟ್ಟಿದ್ದಳು. ಹೇಗೆ ಅಂದರೆ, ಒಂದು ಟೈಂ ಮುರುಗಾ ಬೈಕ್ ಕಳ್ಳತನ ಮಾಡಿದ್ರೆ, ಇನ್ನೊಂದು ಬಾರಿ ಆತನ ಪ್ರೇಯಸಿ ಬೈಕ್ ಕಳ್ಳತನ ಮಾಡುತ್ತಿದ್ದಳು. ಬಳಿಕ ಬಂದ ಹಣದಲ್ಲಿ ಎಂಡಿಎಂಎ, ಗಾಂಜಾ ಸೇವಿಸಿ ಮಜಾ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಗಾ‌ ಎಂಬಾತ ಶ್ರೀರಾಂಪುರ, ಮಲ್ಲೇಶ್ವರಂ ಸೇರಿ ಹಲವು ಠಾಣೆಗೆ ಬೇಕಾಗಿದ್ದನು. ಇದೀಗ ಬೆಂಗಳೂರು ಮಲ್ಲೇಶ್ವರಂ ಪೊಲೀಸರಿಂದ ಚೋರ್ ಲವ್ವರ್ಸ್ ಅರೆಸ್ಟ್​ಯಾಗಿದ್ದು, ಬಂಧಿತರಿಂದ 3 ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:Atiq Ahmad Killers: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಂತಕರನ್ನು 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದ ನ್ಯಾಯಾಲಯ

ಪ್ರಿಯತಮೆಗೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಗಿಫ್ಟ್‌ ಕೊಡಿಸಲು ಕಳ್ಳತನ, ಕಿಲಾಡಿ ಜೋಡಿ ಅರೆಸ್ಟ್

ಬೆಂಗಳೂರು: ಹೌದು ಇಂತಹ ಕೇಸ್​ಗಳು ಸರ್ವೇಸಾಮಾನ್ಯವಾಗಿದ್ದು, ಕಳೆದ 2021 ರಲ್ಲಿ ಲಾಂಗ್‌ ಡ್ರೈವ್‌ ಹೋಗಲಿಕ್ಕೆ ಹಾಗೂ ಗಿಫ್ಟ್‌ ಕೊಡಿಸಲು ಹಣವಿಲ್ಲದ ಕಾರಣ ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರೇಮಿಗಳನ್ನು ಬಂಧಿಸಿದ್ದರು. ಬೆಂಗಳೂರಿನ ರಾಜಾಜಿನಗರ ರೌಡಿಶೀಟರ್ ವಿನಯ್ ಹಾಗೂ ಪ್ರಿಯತಮೆ ಕೀರ್ತನಾ ಬಂಧಿತರು.

ರೌಡಿಶೀಟರ್ ವಿನಯ್​ ಆತನ ಪ್ರಿಯತಮೆ ಕೀರ್ತನಾ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗು, ಗಿಫ್ಟ್ ಕೊಡ್ಸು ಎಂದು ಪೀಡಿಸುತ್ತಿದ್ದಳಂತೆ. ಆಗ ವಿನಯ್ ನಾನೇ ಕಳ್ಳ ನಿನಗೇನು ಗಿಫ್ಟ್ ಕೊಡಿಸಲಿ, ನಾನೊಬ್ಬ ರೌಡಿಶೀಟರ್ ಅಂತ ಕೀರ್ತನಾಳನ್ನ ಕಿಚಾಯಿಸುತ್ತಿದ್ದನಂತೆ. ನೀನ್ ರೌಡಿ ಆದ್ರು, ನಿನ್ನನ್ನೆ ಲವ್ ಮಾಡಿದ್ದೀನಿ ನಿನ್ ಜೊತೆ ಜೈಲಿಗೆ ಬೇಕಾದ್ರು ಬರ್ತಿನಿ ಎಂದು ಕೀರ್ತನಾ ವಿನಯ್ ಬಳಿ ತನ್ನ ಪ್ರೀತಿ ತೋರ್ಪಡಿಸುತ್ತಿದ್ದಳಂತೆ. ಅದರಂತೆ ರೌಡಿಶೀಟರ್ ವಿನಯ್ ತನ್ನ ಲವರ್ ಕೀರ್ತನಾ ಜೊತೆ ಸೇರಿ ಕಳ್ಳತನಕ್ಕೆ ಮುಂದಾಗಿ, ಗಂಡ ಹೆಂಡತಿ ರೂಪದಲ್ಲಿ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಮನೆ ಕಳ್ಳತನಕ್ಕೆ ಮುಂದಾಗಿದ್ದರು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Wed, 26 April 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ