AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Atiq Ahmad Killers: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಂತಕರನ್ನು 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದ ನ್ಯಾಯಾಲಯ

ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್​ನನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಸಿಜೆಐ ನ್ಯಾಯಾಲಯವು 4 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿದೆ.

Atiq Ahmad Killers: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಂತಕರನ್ನು 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದ ನ್ಯಾಯಾಲಯ
ಅತೀಕ್ ಅಹ್ಮದ್ ಹಂತಕರು
ನಯನಾ ರಾಜೀವ್
|

Updated on: Apr 19, 2023 | 1:23 PM

Share

ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್( Atiq Ahmad) ಹಾಗೂ ಆತನ ಸಹೋದರ ಅಶ್ರಫ್​ನನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಸಿಜೆಐ ನ್ಯಾಯಾಲಯವು 4 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿದೆ. ವಿಶೇಷ ತನಿಖಾ ತಂಡವು ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮೊದಲು ಅವರನ್ನು ಏಪ್ರಿಲ್ 16 ರಂದು ಜಿಲ್ಲಾ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.

ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಅರುಣ್ ಮೌರ್ಯ, ಸನ್ನಿ ಸಿಂಗ್ ಹಾಗೂ ಲವ್ಲೇಶ್ ತಿವಾರಿ ಎಂದು ಗುರುತಿಸಲಾದ ಆರೋಪಿಗಳನ್ನು ಪೊಲೀಸರು ಅವರು ಹತ್ಯೆ ಮಾಡಲು ಬಯಸಿದ್ದ ಆಯುಧದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಗ್ಯಾಂಗ್​ಸ್ಟರ್​ಗಳ ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ಪತ್ತೆಹಚ್ಚಲಿದ್ದಾರೆ.

ಮೂವರೂ ಆರೋಪಿಗಳನ್ನು ಏಪ್ರಿಲ್ 23 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಇಂದು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಶನಿವಾರ ರಾತ್ರಿ ಪ್ರಯಾಗ್​ರಾಜ್​ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಪತ್ರಿಕಾ ಪ್ರತಿನಿಧಿಗಳಂತೆ ಬಂದ ವ್ಯಕ್ತಿಗಳು ಗುಂಡು ಹಾರಿಸಿ ಇಬ್ಬರನ್ನು ಹತ್ಯೆ ಮಾಡಿದ್ದರು.

ಮತ್ತಷ್ಟು ಓದಿ: Atiq Ahmad Killers: ಪ್ರತಾಪ್​ಗಢ ಕಾರಾಗೃಹಕ್ಕೆ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಂತಕರ ಸ್ಥಳಾಂತರ

ಏಪ್ರಿಲ್ 16 ರಂದು ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅವರ ಅಂತ್ಯಕ್ರಿಯೆ ಪ್ರಯಾಗ್​ರಾಜ್​ನ ಕಸರಿ ಮಸಾರಿಯಲ್ಲಿ ನಡೆಯಿತು. ಅತೀಕ್ ಅಹ್ಮದ್ ಹಾಗೂ ಅಶ್ರಫ್ ರಾಜುಪಾಲ್ ಹಾಗೂ ಉಮೇಶ್​ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ