ಬೆಂಗಳೂರು: ನಗರದಲ್ಲಿ ಶೂ ಕಳ್ಳರ ಹಾವಳಿ ಹೆಚ್ಚಾಗಿದೆ. ಸಾವಿರಾರು ರೂಪಾಯಿ ಮೌಲ್ಯದ ಶೂಗಳೇ ಕಳ್ಳರು ಟಾರ್ಗೆಟ್ ಮಾಡ್ತಿದ್ದು, ಕವರ್ ಹಿಡಿದುಕೊಂಡು ಬಂದು ಶೂ ತುಂಬ್ಕೊಂಡ್ ಹೋಗುವ ಖರ್ತನಾಕ್ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹದೇವಪುರ ಬಳಿಯ ಅಕ್ಷಯನಗರದ ಸ್ಯಾನ್ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ಕಳ್ಳನ ಕೈಚಳಕ ಬೆಳಕಿಗೆ ಬಂದಿದೆ. ಅಪಾರ್ಟ್ಮೆಂಟ್ನ ರೂಂ ಮುಂದಿನ ಕಬೋರ್ಡ್ ಹಾಗೂ ಚಪ್ಪಲಿ ಸ್ಟಾಂಡ್ಗಳಲ್ಲಿನ ಬೆಲೆಬಾಳುವ ಪ್ರಮುಖ ಕಂಪನಿಗಳ 25 ಕ್ಕೂ ಹೆಚ್ಚು ಜೊತೆ ಶೂಗಳನ್ನ ಕದ್ದೊಯ್ದಿದ್ದಾರೆ.
ಸಾವಿರಾರು ರೂ. ಬೆಲೆಬಾಳುವ ನೈಕಿ, ಪೂಮ, ಲೀಕೂಪರ್, ಸ್ಪಾರ್ಕ್ ಶೂಗಳನ್ನೇ ಖದೀಮರು ಕದ್ದೊಯ್ದಿದ್ದಾರೆ. ಡಿಸೆಂಬರ್ 13ರಂದು ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹದೇವಪುರ ಪೊಲೀಸ್ ಠಾಣೆಗೆ ಅಪಾರ್ಟ್ಮೆಂಟ್ ನಿವಾಸಿಗಳು ದೂರು ದಾಖಲಿಸಿದ್ದಾರೆ.