ಯೇಸು ಪ್ರತಿಮೆ ನಿರ್ಮಾಣ: ಬಿಜೆಪಿ ಆರೋಪಕ್ಕೆ ಡಿಕೆಶಿ ಟಾಂಗ್

ಯೇಸು ಪ್ರತಿಮೆ ನಿರ್ಮಾಣ: ಬಿಜೆಪಿ ಆರೋಪಕ್ಕೆ ಡಿಕೆಶಿ ಟಾಂಗ್

ಬೆಂಗಳೂರು: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಏಕಶಿಲಾ ಯೇಸು ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಡಿ. 25 ರಂದು ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸ್ವಂತ ಹಣದಿಂದ ಜಮೀನು ಖರೀದಿಸಿ ಡಿಕೆಶಿ ಟ್ರಸ್ಟ್​ಗೆ ನೀಡಿದ್ದಾರೆ. ಆದ್ರೆ ಇಲ್ಲಿ ಪ್ರತಿಮೆ ನಿರ್ಮಾಣವಾದ್ರೆ, ಮತಾಂತರ ನಡೆಯುತ್ತೆ ಎಂಬ ಭಾವನೆಯಿಂದ ಬಿಜೆಪಿ ನಾಯಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೊಟ್ಟ ಭರವಸೆ ಈಡೇರಿಸುವುದು ನನ್ನ ಕರ್ತವ್ಯ: […]

sadhu srinath

|

Dec 31, 2019 | 2:32 PM

ಬೆಂಗಳೂರು: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಏಕಶಿಲಾ ಯೇಸು ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಡಿ. 25 ರಂದು ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸ್ವಂತ ಹಣದಿಂದ ಜಮೀನು ಖರೀದಿಸಿ ಡಿಕೆಶಿ ಟ್ರಸ್ಟ್​ಗೆ ನೀಡಿದ್ದಾರೆ. ಆದ್ರೆ ಇಲ್ಲಿ ಪ್ರತಿಮೆ ನಿರ್ಮಾಣವಾದ್ರೆ, ಮತಾಂತರ ನಡೆಯುತ್ತೆ ಎಂಬ ಭಾವನೆಯಿಂದ ಬಿಜೆಪಿ ನಾಯಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೊಟ್ಟ ಭರವಸೆ ಈಡೇರಿಸುವುದು ನನ್ನ ಕರ್ತವ್ಯ: ಯೇಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ನಾನು ಎರಡೂವರೆ ವರ್ಷದ ಹಿಂದೆಯೇ ಪ್ಲ್ಯಾನ್ ಮಾಡಿದ್ದೆ. ಅಲ್ಲಿನ ಜನರಿಗೆ ಕೊಟ್ಟ ಭರವಸೆ ಈಡೇರಿಸುವುದು ನನ್ನ ಕರ್ತವ್ಯ ಎಂದು ಬಿಜೆಪಿ ನಾಯಕರ ಆರೋಪ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕೇವಲ ಯೇಸು ಪ್ರತಿಮೆಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಹಿಂದೂ ದೇಗುಲ ನಿರ್ಮಾಣಕ್ಕೂ ಸಹಾಯ ಮಾಡಿದ್ದೇನೆ. ಅಲ್ಲದೆ, ಪ್ರತಿಮೆ ನಿರ್ಮಾಣ ಮಾಡ್ತಿರುವ ಜಾಗ ಗೋಮಾಳದ್ದು. ಆದ್ರೂ ಆ ಜಾಗಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಬೆಂಗಳೂರಿನಲ್ಲಿ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

ಜೈಲಿನಲ್ಲಿದ್ದ ಕಾರಣ ಹಣ ನೀಡಲು ಆಗಿರಲಿಲ್ಲ: ಯೇಸುಕ್ರಿಸ್ತನ ಪ್ರತಿಮೆಯನ್ನು ಸೇವಾಮನೋಭಾವದಿಂದ ಮಾಡುತ್ತಿದ್ದೇನೆ. ನನಗೆ ಯಾವುದೇ ರೀತಿಯ ಪ್ರಚಾರದ ಅವಶ್ಯಕತೆಯಿಲ್ಲ. ಈ ಹಿಂದೆಯೇ ನಾನು ಅವರಿಗೆ ಹಣ ನೀಡಬೇಕಾಗಿತ್ತು. ಆದ್ರೆ, ಜೈಲಿನಲ್ಲಿದ್ದ ಕಾರಣ ಹಣವನ್ನು ನೀಡುವುದಕ್ಕೆ ಆಗಿರಲಿಲ್ಲ. ಅದಕ್ಕೆ ಯಾವುದೇ ಪ್ರತಿಫಲ ಬಯಸದೆ ಭೂಮಿ ನೀಡಿದ್ದೇವೆ ಎಂದರು. ಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಸಂಸದ ಅನಂತಕುಮಾರ ಹೆಗಡೆ ನಿರುದ್ಯೋಗಿಯಾಗಿದ್ದಾರೆ. ಪಾಪ ಅವರು ಅಂಬೇಡ್ಕರ್​ ಅವರ ಪುಸ್ತಕವನ್ನು ಸುಡಬೇಕಾಗಿದೆ. ಅವರು ಏನೇನೋ ಮಾತನಾಡುತ್ತಾರೆ, ಅವರಿಗೆ ಒಳ್ಳೆಯದಾಗಲಿ ಎಂದು ಅನಂತಕುಮಾರ ಹೆಗಡೆ ಟ್ವೀಟ್​ಗೆ ಡಿಕೆಶಿ ಟಾಂಗ್ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada