AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಆ್ಯಕ್ಟೀವ್​​ ಆದ ಸಿದ್ದರಾಮಯ್ಯ: ಕಾವೇರಿ ನಿವಾಸದಲ್ಲಿ ಸಚಿವರು, ಶಾಸಕರ ಜತೆ ಬ್ರೇಕ್​​ಫಾಸ್ಟ್​​​​​ ಮೀಟಿಂಗ್​

ಕಾವೇರಿ ನಿವಾಸದಲ್ಲಿ ಸಚಿವರು ಹಾಗೂ ಶಾಸಕರೊಂದಿಗೆ ಉಪಹಾರ ಕೂಟ ನಡೆಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಕ್ರಿಯರಾಗಿದ್ದಾರೆ. ಮೀಟಿಂಗ್​​ ವೇಳೆ ಸ್ಟಿಂಗ್ ಕೇಸ್​​ ಸಂಬಂಧ ತನಿಖೆ ವಿಳಂಬದ ಕುರಿತು ಮಾಜಿ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ನವೆಂಬರ್​​ 26ರಂದು ನಡೆಸಲು ಉದ್ದೇಶಿಸಿರುವ ಸಂವಿಧಾನ ದಿನ ಆಚರಣೆ ಹೆಚ್​​.ಸಿ. ಮಹದೇವಪ್ಪ ಮತ್ತು ಸಚಿವ ಯತೀಂದ್ರ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಲಿದೆಯಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಮತ್ತೆ ಆ್ಯಕ್ಟೀವ್​​ ಆದ ಸಿದ್ದರಾಮಯ್ಯ: ಕಾವೇರಿ ನಿವಾಸದಲ್ಲಿ ಸಚಿವರು, ಶಾಸಕರ ಜತೆ ಬ್ರೇಕ್​​ಫಾಸ್ಟ್​​​​​ ಮೀಟಿಂಗ್​
ಮತ್ತೆ ಆ್ಯಕ್ಟೀವ್​​ ಆದ ಸಿದ್ದರಾಮಯ್ಯ
ಪ್ರಸನ್ನ ಗಾಂವ್ಕರ್​
| Edited By: |

Updated on:Oct 29, 2026 | 1:12 PM

Share

ಬೆಂಗಳೂರು, ಅಕ್ಟೋಬರ್​ 29: ಸಿಎಂ ಸ್ಥಾನದಿಂದ ಇಳಿದ ಬಳಿಕ ಸೈಲೆಂಟ್​​ ಆಗಿದ್ದ ಸಿದ್ದರಾಮಯ್ಯ ಮತ್ತೆ ಆ್ಯಕ್ಟಿವ್​ ಆಗಿದ್ದು, ಕಾವೇರಿ ನಿವಾಸದಲ್ಲಿ ಸಚಿವರು, ಶಾಸಕರ ಜತೆ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ನವೆಂಬರ್ 26ರಂದು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಗೆ ಸಿದ್ಧತೆ ನೆಪದಲ್ಲಿ ಮಾತುಕತೆ​​ ನಡೆದಿದೆ. ಸಚಿವ ಯತೀಂದ್ರ ಕರೆದಿದ್ದ ಬ್ರೇಕ್​ಫಾಸ್ಟ್​​ ಮೀಟಿಂಗ್​​ ಇದಾಗಿತ್ತಾದರೂ ಸಿದ್ದರಾಮಯ್ಯ ತಾವೇ ಸಭೆಯ ನೇತೃತ್ವ ವಹಿಸಿದ್ದು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಈ ವೇಳೆ ಸಚಿವ ಯತೀಂದ್ರ ಜೊತೆ ಸಚಿವರಾದ ಮುನಿಯಪ್ಪ, ನರೇಂದ್ರಸ್ವಾಮಿ, ಚಲುವರಾಯಸ್ವಾಮಿ, ಖಾದರ್, ಪುಟ್ಟರಂಗಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ಸ್ಟಿಂಗ್​​ ತನಿಖೆ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ

ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮದ ನೆಪದಲ್ಲಿ ಶಾಸಕರು, ಸಚಿವರ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಇದಾಗಿದೆ ಎನ್ನಲಾಗ್ತಿದೆ. ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಿರುವ ಸಿದ್ದರಾಮಯ್ಯ, ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಸಿಎಂ ಆಹ್ವಾನಿಸಲೂ ನಿರ್ಧಾರ ಮಾಡಿದ್ದಾರಂತೆ. ಇನ್ನು ಬ್ರೇಕ್‌ಫಾಸ್ಟ್‌ ಮೀಟಿಂಗ್ ವೇಳೆ ಸ್ಟಿಂಗ್ ವಿಚಾರವನ್ನೂ ಮಾಜಿ ಸಿಎಂ ಪ್ರಸ್ತಾಪಿಸಿದ್ದಾರೆ. ಸ್ಟಿಂಗ್ ನಡೆಸಿದವರನ್ನು ಇಷ್ಟೊತ್ತಿಗೆ ಬಂಧಿಸಬೇಕಿತ್ತು. ಆದರೆ ಈವರೆಗೆ ಅರೆಸ್ಟ್​ ಆಗಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಈ ಸಂದರ್ಭ ಕೃಪಾ ಆಳ್ವಾ ವಿದೇಶಕ್ಕೆ ಹಾರಿದ ಬಗ್ಗೆಯೂ ಸಭೆಯಲ್ಲಿ ಸಚಿವರು ಮಾತನಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಷಡ್ಯಂತ್ರ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ

ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಾ ಸಂವಿಧಾನ ದಿನ ಆಚರಣೆ?

ಮತ್ತೊಂದೆಡೆ ನವೆಂಬರ್ 26ರಂದು ನಡೆಸಲು ಉದ್ದೇಶಿಸಿರುವ ಸಂವಿಧಾನ ದಿನ ಆಚರಣೆ ಹೆಚ್​​.ಸಿ. ಮಹದೇವಪ್ಪ ಮತ್ತು ಸಚಿವ ಯತೀಂದ್ರ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಲಿದೆಯಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ದಲಿತ ಸಂಘಟನೆಗಳ ಜೊತೆಗೂಡಿ ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮಕ್ಕೆ ಮಹದೇವಪ್ಪ ಕೂಡ ಮುಂದಾಗಿದ್ದಾರೆ. ಕಾರ್ಯಕ್ರಮ ಯಶಸ್ವಿಯಾದರೆ ಮಹದೇವಪ್ಪ ಶಕ್ತಿ ಪ್ರದರ್ಶನ ಆಗಲಿದೆ. ಹೀಗಾಗಿ ಮಹದೇವಪ್ಪಗೆ ಟಕ್ಕರ್ ಕೊಡಲು ಮೈಸೂರಿನಲ್ಲೇ ಸರ್ಕಾರಿ ಕಾರ್ಯಕ್ರಮ ಮಾಡಲು ಡಾ.ಯತೀಂದ್ರ ಮುಂದಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:09 pm, Thu, 29 October 26

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More