ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತೇವೆ; ಮೋದಿಗೆ ಒಂದು ನಮಗೊಂದು ಕಾನೂನಾ: ಸಿದ್ದರಾಮಯ್ಯ ಪ್ರಶ್ನೆ

| Updated By: ganapathi bhat

Updated on: Jan 04, 2022 | 4:58 PM

ನಾವು ರಾಜಕೀಯಕ್ಕೋಸ್ಕರ ಪಾದಯಾತ್ರೆ ಮಾಡುತ್ತಿಲ್ಲ. ರಾಜ್ಯದ ಹಿತಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತೇವೆ; ಮೋದಿಗೆ ಒಂದು ನಮಗೊಂದು ಕಾನೂನಾ: ಸಿದ್ದರಾಮಯ್ಯ ಪ್ರಶ್ನೆ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೊವಿಡ್ (Coronavirus) ಕಂಟ್ರೋಲ್ ಮಾಡುವ ಜವಾಬ್ದಾರಿ ಯಾರದ್ದು? ಆರೊಗ್ಯ ಸಚಿವ ಡಾ.ಕೆ.ಸುಧಾಕರ್ ಕೆಲಸ ಅದೇ ಅಲ್ವಾ? ಇವರು ಸರಿಯಾಗಿ ನಿಯಂತ್ರಣ ಮಾಡದ್ದಕ್ಕೆ ಕೊವಿಡ್ (Covid19) ಹೆಚ್ಚಳ ಆಗಿದೆ. ನಾವೇನು ನಿಯಮ ಮೀರಿ ಪಾದಯಾತ್ರೆ (Mekedatu Padayatre) ಮಾಡುವುದಿಲ್ಲ. ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದೇ ವೇಳೆ, ಸಂಸದ ಡಿ.ಕೆ. ಸುರೇಶ್ ಹಾಗೂ ಸಚಿವ ಡಾ. ಅಶ್ವತ್ಥ್ ನಾರಾಯಣ ವಾಕ್ಸಮರ ವಿಚಾರಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ (Siddaramaiah) ನಿರಾಕರಿಸಿದ್ದಾರೆ. ಏನಾಯ್ತು ಎಂದು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮ ಪಾದಯಾತ್ರೆಯಿಂದ ಕೇಸ್ ಹೆಚ್ಚಾಗುತ್ತೆ ಅಂತಾರಲ್ಲ. ಉತ್ತರಪ್ರದೇಶದಲ್ಲಿ ಏನಾಗಿದೆ? ಅಲ್ಲಿ ಪಾದಯಾತ್ರೆ ಮಾಡ್ತಿಲ್ವಾ? ಮೋದಿಗೆ ಒಂದು ಕಾನೂನು ನಮಗೊಂದು ಕಾನೂನಾ? ನಾವು ರಾಜಕೀಯಕ್ಕೋಸ್ಕರ ಪಾದಯಾತ್ರೆ ಮಾಡುತ್ತಿಲ್ಲ. ರಾಜ್ಯದ ಹಿತಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೇಕೆದಾಟು ‌ಯೋಜನೆ ರಾಜಕೀಯ ಸ್ವರೂಪ ಪಡೆಯುತ್ತಿದೆ: ವಾಟಾಳ್ ನಾಗರಾಜ್
ರಾಮನಗರ: ಮೇಕೆದಾಟು ವಿಚಾರ ಯಾವುದೇ ಕಾರಣಕ್ಕೂ ರಾಜಕೀಯವಾಗಬಾರದು. ಮೇಕೆದಾಟು ‌ಹೋರಾಟ ಮಾಡಿದವರೇ ನಾವು. ಎರಡು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ. ನಿಮ್ಮ ಸರ್ಕಾರ ಇದ್ದಾಗ ಅಡ್ಡಿ ಮಾಡಿದವರು ಯಾರು. ನಿಮ್ಮ ಸರ್ಕಾರ ಇದ್ದಾಗ ಮಾಡಬಹುದಿತ್ತು. ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು. ಉನ್ನತ ಮಟ್ಟದ ಸಭೆ ಕರೆಯಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ‌. ಮೇಕೆದಾಟು ಯೋಜನೆ ರಾಜಕೀಯ ಸ್ವರೂಪ ಪಡೆಯುತ್ತಿದೆ. ಬಿಜೆಪಿ ಲೋಕಸಭಾ ಸದಸ್ಯರು ಪ್ರಧಾನಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಬೇಕು. ಇಲ್ಲ ರಾಜೀನಾಮೆ ಕೊಡಬೇಕು ಎಂದು ರಾಮನಗರದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: HD Kumaraswamy: ಮೇಕೆದಾಟು ಪಾದಯಾತ್ರೆ ನಾವು ಪ್ಲಾನ್‌ ಮಾಡಿದ್ದನ್ನೇ ಅವರು ಶುರು ಮಾಡಕೊಂಡ್ರು -ಹೆಚ್‌ಡಿ ಕುಮಾರಸ್ವಾಮಿ

ಇದನ್ನೂ ಓದಿ: ಮೇಕೆದಾಟು ಜಲಾಶಯಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ: ಬಿಜೆಪಿಯಲ್ಲಿ ಗರಿಗೆದರಿಗೆ ಚರ್ಚೆ

Published On - 2:53 pm, Tue, 4 January 22