ಬಿಬಿಎಂಪಿ ವಾರ್ಡ್ನಲ್ಲಿ ‘ರಸ್ತೆ ಮಧ್ಯೆ ಸೈಟ್ ಇದೆ’ ಅಂತ ರೋಡು ತೋಡಿದ ಕಿಡಿಗೇಡಿ
ಇದೀಗ ಕೇಬಲ್ ಮಂಜುನಾಥ್ ವಿರುದ್ಧ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕಚ್ಚಾ ರಸ್ತೆಗೆ ಡಾಂಬರ್ ಹಾಕೋಕು ಬಿಡ್ತಿಲ್ಲ, ರಸ್ತೆಯ ಬದಿಯ ಮರ ಕಟ್ ಮಾಡಿದ್ದಾರೆ ಅಂತಾನೂ ಆರೋಪ ಕೇಳಿಬಂದಿದೆ.
ಆನೇಕಲ್: ರಸ್ತೆಯ ನಟ್ಟನಡುವೆ ನಿವೇಶನ ಇದೆ ಅಂತಾ ರಸ್ತೆಯಲ್ಲಿಯೇ ಗುಣಿ ತೋಡಿ ಕೇಬಲ್ ಮಂಜುನಾಥ್ ಎಂಬಾತ ಬೆದರಿಕೆಯೊಡ್ಡಿದ್ದಾನೆ. ಬೆಂಗಳೂರು ದಕ್ಷಿಣ ತಾಲೂಕಿನ ಬಸಾಪುರಂ ರೋಡಿನ ಚಿಕ್ಕ ತೋಗೂರು ವೀರಭದ್ರ ನಗರ್ಲ ಸರ್ವೇ ನಂಬರ್ 40/2 ರಸ್ತೆ ಮಧ್ಯೆ ಸೈಟ್ ಇದೆ ಅಂತಾ ಈ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಬಿಬಿಎಂಪಿ ವಾರ್ಡ್ ನಂಬರ್ 192 ರಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರಾದ ಮುನಿಯಪ್ಪ ರೆಡ್ಡಿ ಹಾಗೂ ಕೇಬಲ್ ಮಂಜುನಾಥ್ ಅವರ ವಿರುದ್ಧ ಈ ರಸ್ತೆ ಕಬಳಿಕೆ ಆರೋಪ ಕೇಳಿಬಂದಿದೆ.
ಇದೀಗ ಕೇಬಲ್ ಮಂಜುನಾಥ್ ವಿರುದ್ಧ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕಚ್ಚಾ ರಸ್ತೆಗೆ ಡಾಂಬರ್ ಹಾಕೋಕು ಬಿಡ್ತಿಲ್ಲ, ರಸ್ತೆಯ ಬದಿಯ ಮರ ಕಟ್ ಮಾಡಿದ್ದಾರೆ ಅಂತಾನೂ ಆರೋಪ ಕೇಳಿಬಂದಿದೆ. ಬಡಾವಣೆಯಲ್ಲಿ ಯಾರೇ ಮನೆ ಮಾಡಿದರೂ ಲಕ್ಷಾಂತರ ಹಣ ದರೋಡೆ ಮಾಡ್ತಾರೆ ಅಂತ ಆರೋಪ ಕೇಳಿಬಂದಿದೆ.
ಕಳೆದ 40 ವರ್ಷದಿಂದ ನಾವು ಇಲ್ಲೇ ಇದ್ದೇವೆ. ಆದ್ರೆ ಇತ್ತೀಜೆಗೆ ಬಂದು ಇಲ್ಲಿ ಸೈಟ್ ಇದೆ ಎಂದು ಗುಂಡಾಗಿರಿ ಮಾಡ್ತಿದ್ದಾರೆ. ಅಲ್ಲದೆ ಇಲ್ಲಿ ಹೊಸದಾಗಿ ಕಟ್ಟಡ ಕಟ್ಟಲು ಬರುವವರ ಬಳಿಯೂ ಕಟ್ಟಡ ಕಟ್ಟಲು ನಿಯಮಗಳಿವೆ ಎಂತ ಪುರಾಣ ಊದಿ ಹಣ ವಸೂಲಿ ಮಾಡುತ್ತಿದ್ದಾರೆ. ಪುಡಿ ರೌಡಿಗಳನ್ನು ಕರೆದುಕೊಂಡು ಬಂದು ಗೂಂಡಾಗಿರಿ ಮಾಡ್ತಾರೆ. ಇದರಿಂದ ಇಲ್ಲಿನ ಜನ ಭಯಪಟ್ಟು ದುಡ್ಡು ಕೂಡ ಕೊಟ್ಟಿದ್ದಾರೆ ಈ ಬಗ್ಗೆ ನಮ್ಮಲ್ಲಿ ಸಾಕ್ಷಿ ಇದೆ. ಹೀಗಾಗಿ ನಾವು ಈಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಮಂಜು ಎಂಬುವವನ್ನು ಕೇಳಿದ್ರೆ ಕಳೆದ ನಲ್ವತ್ತು ವರ್ಷಗಳಿಂದ ಈ ಜಮೀನಿನ ಒಡೆತನದ ಪತ್ರ ನಮ್ಮ ಬಳಿ ಇದೆ. ಈ ಜಾಗ ನಮಗೆ ಸೇರಿದ್ದು ಅಂತ ಸ್ಪಷ್ಟನೆ ನೀಡಿದ್ದಾರೆ. ಈ ಇಬ್ಬರನ್ನು ಕರೆಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸಧ್ಯ ಸರ್ವೇ ಮಾಡೋದಕ್ಕೆ ಹೇಳಿ ಇಬ್ಬರ ಅರ್ಜಿಯನ್ನು ಪಡೆದುಕೊಂಡು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
Published On - 2:55 pm, Tue, 4 January 22