ಈ ನಾಡಿನ, ಜನರ ಅಭಿಮಾನದ ಸುದ್ದಿ ಮಾಧ್ಯಮ ಟಿವಿ 9: ಗೃಹ ಸಚಿವ ಆರಗ ಜ್ಞಾನೇಂದ್ರ
ಟಿವಿ 9 ವಾಹಿನಿಯ ನವನಕ್ಷತ್ರ-9 ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ, ಒಂದು ಸುದ್ದಿ ದೃಶ್ಯ ಮಾಧ್ಯಮ ಇಂಥ ಕಾರ್ಯಕ್ರಮಗಳನ್ನು ಮಾಡುತ್ತದೆ ಎನ್ನುವುದೇ ವಿಶೇಷ ಎಂದು ಹೇಳಿದರು.
2006ರಲ್ಲಿ ಪ್ರಾರಂಭವಾಗಿರುವ ಟಿವಿ 9 (Tv9 Kannada News Channel) ಜನಮನ ಗೆದ್ದ ಸುದ್ದಿ ವಾಹಿನಿ. ಪ್ರತಿವರ್ಷವೂ ಅದರ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ (Araga jnanendra) ಹೇಳಿದರು. ಟಿವಿ 9 ದೃಶ್ಯ ಸುದ್ದಿ ಮಾಧ್ಯಮ ಪ್ರಾರಂಭವಾಗಿ 15 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಾಹಿನಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಹಿನಿಗೆ ಶುಭಕೋರಿದರು.
ಟಿವಿ 9 ಸುದ್ದಿ ವಾಹಿನಿಯ ಕಾರ್ಯಕ್ರಮಗಳ ಗುಣಮಟ್ಟ ಬಹಳ ಅತ್ಯುತ್ತಮವಾಗಿದೆ. ಸುದ್ದಿ ಪ್ರಸಾರವೇ ಆಗಿರಲಿ, ಸಾಂಸ್ಕೃತಿಕ ಸೇರಿ ಇನ್ನಿತರ ಯಾವುದೇ ಕಾರ್ಯಕ್ರಮಗಳ ಪ್ರಸಾರವಾಗಿರಲಿ, ಬಹಳ ಚೆನ್ನಾಗಿ ಮೂಡಿಬರುತ್ತಿದೆ. ನಾನು ಎಲ್ಲ ಚಾನೆಲ್ಗಳನ್ನೂ ನೋಡುತ್ತೇನೆ. ಆದರೆ ಟಿವಿ9 ನೋಡದೆ ಇರಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ನಮ್ಮನ್ನು ಹಿಡಿದಿಟ್ಟಿದೆ. ನಮ್ಮಂಥ ರಾಜಕಾರಣಿಗಳನ್ನು ಎಚ್ಚರಿಸುವಂಥ ಅನೇಕ ಕಾರ್ಯಕ್ರಮಗಳನ್ನು ಟಿವಿ 9 ಮಾಡುತ್ತಿದೆ. ಇಡೀ ರಾಜ್ಯದ, ಜನತೆಯ ಅಭಿಮಾನದ ಚಾನೆಲ್ ಇದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಟಿವಿ 9 ವಾಹಿನಿಯ ನವನಕ್ಷತ್ರ-9 ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ, ಒಂದು ಸುದ್ದಿ ದೃಶ್ಯ ಮಾಧ್ಯಮ ಇಂಥ ಕಾರ್ಯಕ್ರಮಗಳನ್ನು ಮಾಡುತ್ತದೆ ಎನ್ನುವುದೇ ವಿಶೇಷ. ಟಿವಿ 9 ತನ್ನ 15ವರ್ಷಗಳ ಪ್ರಯಾಣದಲ್ಲಿ, ಈ ವರ್ಷ ವಿಶೇಷವಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ತನ್ಮೂಲಕ ಅವರನ್ನು ನಾಡಿಗೆ ಇನ್ನಷ್ಟು ಸರಿಯಾಗಿ ಪರಿಚಯ ಮಾಡಿಕೊಡುತ್ತಿದೆ. ಇದು ನಿಜಕ್ಕೂ ಅತ್ಯುತ್ತಮ ಕಾರ್ಯಕ್ರಮ ಎಂದು ತಿಳಿಸಿದರು.
ಇದನ್ನೂ ಓದಿ: ಟಿವಿ9 ಮುಂಚೂಣಿ ಸ್ಥಾನದಲ್ಲಿ ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ- ತುಮಕೂರು ಸಿದ್ದಗಂಗಾ ಶ್ರೀಗಳ ಆಶೀರ್ವಚನ
Published On - 2:42 pm, Tue, 4 January 22