AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮಾಂತರ ಪ್ರದೇಶದಲ್ಲಿ ಮನೆಗಳ ಮೇಲೆ ಹಾಕಿದ ಜಾಹೀರಾತಿಗೂ ತೆರಿಗೆ!: ವಿಪಕ್ಷಗಳಿಂದ ತೀವ್ರ ವಿರೋಧ

ಖಾಸಗಿ ಜಾಗಗಳ ಮೇಲಿನ ಜಾಹೀರಾತುಗಳಿಗೆ ತೆರಿಗೆ ವಿಧಿಸುವ ಕರ್ನಾಟಕ ಮುನ್ಸಿಪಾಲಿಟಿ ತಿದ್ದುಪಡಿ ವಿಧೇಯಕ 2026, ವಿಧಾನಪರಿಷತ್‌ನಲ್ಲಿ ಅಂಗೀಕಾರಗೊಂಡಿದೆ. ಖಾಸಗಿ ಆಸ್ತಿಗಳ ಮೇಲಿನ ಜಾಹೀರಾತುಗಳಿಗೆ ತೆರಿಗೆ ವಿಧಿಸುವುದಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದಿವೆ. ಆದರೆ, ನಗರಾಭಿವೃದ್ಧಿ ಸಚಿವರು ಆದಾಯ ಸಂಗ್ರಹಕ್ಕೆ ಅನಿವಾರ್ಯ, ತೆರಿಗೆ ಹೊರೆ ಭರಿಸಬೇಕಿರೋದು ಕಂಪನಿಗಳು ಎಂದು ಸಮರ್ಥಿಸಿಕೊಂಡಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ಮನೆಗಳ ಮೇಲೆ ಹಾಕಿದ ಜಾಹೀರಾತಿಗೂ ತೆರಿಗೆ!: ವಿಪಕ್ಷಗಳಿಂದ ತೀವ್ರ ವಿರೋಧ
ಸಾಂದರ್ಭಿಕ ಚಿತ್ರImage Credit source: Google
Anil Kalkere
| Edited By: |

Updated on: Mar 18, 2026 | 2:52 PM

Share

ಬೆಂಗಳೂರು, ಮಾರ್ಚ್​​ 18: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್​ನಲ್ಲಿ ಕರ್ನಾಟಕ ಮುನ್ಸಿಪಾಲಿಟಿ ಮತ್ತು ಕೆಲವು ಇತರೆ ಕಾನೂನು(ತಿದ್ದುಪಡಿ) ವಿಧೇಯಕ-2026 ಅಂಗೀಕಾರಗೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಮನೆಗೆ ಹಾಕಿದ ಜಾಹೀರಾತಿಗೂ ತೆರಿಗೆ ವಿಧಿಸಲು ಮುಂದಾಗಿದ್ದು, ಜೀವನಕ್ಕೆ ಏನೋ ಮಾಡಿಕೊಂಡಿರುವವರಿಗೂ ಟ್ಯಾಕ್ಸ್​​ ಹಾಕುವಷ್ಟು ಸರ್ಕಾರ ಬರಗೆಟ್ಟಿದ್ಯಾ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.

ರಾಜಕಾರಣಿಗಳು ಫ್ಲೆಕ್ಸ್ ಹಾಕ್ತಾರೆ, ಅವರಿಗೆ ಯಾವುದೇ ಟ್ಯಾಕ್ಸ್ ಇಲ್ಲ. ಹೀಗಿರುವಾಗ ಖಾಸಗಿಯಾಗಿ ಮನೆ ಮೇಲೆ ಜಾಹೀರಾತು ಹಾಕಿಕೊಂಡ್ರೆ ನಿಮಗೇನು? ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರಶ್ನೆ ಮಾಡಿದ್ದಾರೆ. ಮನೆ ಮೇಲೆ ಜಾಹೀರಾತು ಹಾಕಿದ್ದಕ್ಕೆ ತೆರಿಗೆ ಬೇಕಾ, ನಾಚಿಕೆ ಆಗಲ್ವಾ? ಎಂದು ತಿವಿದಿದ್ದಾರೆ. ಈ ವೇಳೆ ಚಿಕ್ಕಮಗಳೂರಲ್ಲಿ ನಿಮ್ಮ, ಸಿ.ಟಿ. ರವಿ ಫೋಟೋ ಇದೆ ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದು, ನೀವು ಹೇಳಿದಂತೆ ಎಲ್ಲಾ ಕಡೆ ನನ್ನ ಫೋಟೋ ಇದ್ದರೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಭೋಜೇಗೌಡ ಸವಾಲು ಹಾಕಿದ ಪ್ರಸಂಗವೂ ನಡೆದಿದೆ.

ಇದನ್ನೂ ಓದಿ: ಅಂತರ್ಜಾತಿ ವಿವಾಹವಾಗುವವರಿಗೆ ಶುಭ ಸುದ್ದಿ; ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ

ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ನಾರಾಯಣಸ್ವಾಮಿ, ಸರ್ಕಾರಿ ಜಾಗದಲ್ಲಿ ಜಾಹೀರಾತು ಹಾಕಿದರೆ ತೆರಿಗೆ ಹಾಕುವುದು ಸರಿ. ಆದರೆ ಖಾಸಗಿ ಜಾಗದಲ್ಲಿನ ಜಾಹೀರಾತಿಗೆ ಯಾಕೆ ತೆರಿಗೆ? ಇದನ್ನು ಕೈಬಿಡಬೇಕು. ಜಾಹೀರಾತು ಎನ್ನುವುದು ದೊಡ್ಡ ಮಾಫಿಯಾ, ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ತಮಿಳುನಾಡು, ಮುಂಬೈ ಮಾದರಿಯಲ್ಲಿ ಜಾಹೀರಾತು ನಿಯಮ ತನ್ನಿ. ಪಾರಂಪರಿಕ ಕಟ್ಟಡದ ಬಳಿ ಯಾವುದೇ ಜಾಹೀರಾತು ಹಾಕಬಾರದು. ಫ್ಲೆಕ್ಸ್ ಹಾಕುವ ವ್ಯವಸ್ಥೆಯನ್ನೇ ರದ್ದುಮಾಡಬೇಕು. ಪ್ರಮುಖ ಜಂಕ್ಷನ್​ಗಳಲ್ಲಿನ ಖಾಸಗಿ ಜಾಹೀರಾತಿಗೆ ತೆರಿಗೆ ಹಾಕಬೇಕು ಎಂದು ಕಾಂಗ್ರೆಸ್ ಸದಸ್ಯ ಶಿವಕುಮಾರ್ ಕೂಡ ಆಗ್ರಹಿಸಿದ್ದಾರೆ.

ಸಚಿವರ ಸಮರ್ಥನೆ

ವಿಪಕ್ಷಗಳ ಆಕ್ರೋಶದ ನಡುವೆಯೂ ತೆರಿಗೆ ವಿಧಿಸುವ ಸರ್ಕಾರದ ಕ್ರಮ ಸರಿಯಿದೆ ಎಂದು ನಗರಾಭಿವೃದ್ಧಿ ಸಚಿವರ ಭೈರತಿ ಸುರೇಶ್ ಸಮರ್ಥಿಸಿಕೊಂಡಿದ್ದು, ಟ್ಯಾಕ್ಸ್​​ ಸಂಗ್ರಹಿಸದೆ ನಗರ ಪಾಲಿಕೆಗಳನ್ನು ನಡೆಸುವುದು ಹೇಗೆ? ತೆರಿಗೆ ಬಾರದೆ ನೂರಾರು ಕೋಟಿ ರೂಪಾಯಿ ಲಾಸ್ ಆಗಿದೆ. ಸರ್ಕಾರಿ ಪ್ರಾಯೋಜಿತ ಜಾಹಿರಾತಿಗೆ ಟ್ಯಾಕ್ಸ್ ಇಲ್ಲ. ಆದರೆ ಖಾಸಗಿ ಜಾಗದಲ್ಲಿ ಜಾಹಿರಾತು ಹಾಕಿದ್ರೆ ಅದಕ್ಕೆ ಟ್ಯಾಕ್ಸ್ ಹಾಕ್ತೀವಿ. ಲಾಭಕ್ಕಾಗಿ ಅವರು ಜಾಹೀರಾತು ಹಾಕುವ ಕಾರಣ ಅವರು ಸಣ್ಣ ಪ್ರಮಾಣದ ತೆರಿಗೆ ಕಟ್ಟಬೇಕು. ಖಾಸಗಿ ಕಟ್ಟಡಗಳ ಮಾಲೀಕರಿಗೆ ನಾವು ಟ್ಯಾಕ್ಸ್ ಹಾಕಲ್ಲ. ಬದಲಾಗಿ ತೆರಿಗೆ ನೀಡಬೇಕಿರೋದು ಕಂಪನಿಗಳು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ರೀತಿಯ ತೆರಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಅದಕ್ಕೆ ಈಗ ತಿದ್ದುಪಡಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ವಿಡಿಯೋ: ಆಂಬ್ಯುಲೆನ್ಸ್‌ನಲ್ಲೇ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!
ವಿಡಿಯೋ: ಆಂಬ್ಯುಲೆನ್ಸ್‌ನಲ್ಲೇ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!
ಯುಗಾದಿ ವರ್ಷ ಭವಿಷ್ಯ;ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ;ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2 ಕೋಟಿ ರೂ. ಹಣ ಸೀಜ್
ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2 ಕೋಟಿ ರೂ. ಹಣ ಸೀಜ್
ಇದನ್ನು ನಿರೀಕ್ಷಿಸಿರಲಿಲ್ಲ; ಲವ್ ಮಾಕ್ಟೇಲ್ 3 ಸೂಪರ್ ಎಂದ ಸೆಲೆಬ್ರೆಟಿಗಳು
ಇದನ್ನು ನಿರೀಕ್ಷಿಸಿರಲಿಲ್ಲ; ಲವ್ ಮಾಕ್ಟೇಲ್ 3 ಸೂಪರ್ ಎಂದ ಸೆಲೆಬ್ರೆಟಿಗಳು
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ
ಮೈಸೂರು ಸಿಗ್ನಲ್​​​ ಬಗ್ಗೆ ಸಿದ್ದರಾಮಯ್ಯ ಅವರ ಸುಪುತ್ರ ಹೇಳಬೇಕು
ಮೈಸೂರು ಸಿಗ್ನಲ್​​​ ಬಗ್ಗೆ ಸಿದ್ದರಾಮಯ್ಯ ಅವರ ಸುಪುತ್ರ ಹೇಳಬೇಕು
ಯುಗಾದಿಗೆ ಗಣೇಶ್ ಕಡೆಯಿಂದ ಸಿಗಲಿದೆ ದೊಡ್ಡ ಸರ್​ಪ್ರೈಸ್
ಯುಗಾದಿಗೆ ಗಣೇಶ್ ಕಡೆಯಿಂದ ಸಿಗಲಿದೆ ದೊಡ್ಡ ಸರ್​ಪ್ರೈಸ್
LPG ಬಿಕ್ಕಟ್ಟು: ಕಾಳಸಂತೆಯಲ್ಲಿ ದಂಧೆಕೋರರ ಕಳ್ಳಾಟ, 15000 ಸಿಲಿಂಡರ್ ಜಪ್ತಿ
LPG ಬಿಕ್ಕಟ್ಟು: ಕಾಳಸಂತೆಯಲ್ಲಿ ದಂಧೆಕೋರರ ಕಳ್ಳಾಟ, 15000 ಸಿಲಿಂಡರ್ ಜಪ್ತಿ
ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ
ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ