AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರ್ಜಾತಿ ವಿವಾಹವಾಗುವವರಿಗೆ ಶುಭ ಸುದ್ದಿ: ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ

ಕರ್ನಾಟಕ ಸರ್ಕಾರವು ಅಂತರ್ಜಾತಿ ವಿವಾಹಿತರನ್ನು ರಕ್ಷಿಸಲು "ಇವ ನಮ್ಮವ" ವಿಧೇಯಕವನ್ನು ಮಂಡಿಸಿದೆ. ಈ ಕಾಯ್ದೆಯು ಅಂತರ್ಜಾತಿ ವಿವಾಹದ ಜೋಡಿಗಳ ವಿರುದ್ಧ ಸಾಮಾಜಿಕ ಬಹಿಷ್ಕಾರ, ಆರ್ಥಿಕ ಕಿರುಕುಳ ಮತ್ತು ಕೊಲೆಯಂತಹ ಘಟನೆಗಳನ್ನು ತಡೆಯುವ ಗುರಿ ಹೊಂದಿದೆ. ಇದು ಜಾತಿ ಶ್ರೇಣೀಕರಣದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ನಿಷೇಧಿಸಿ, ವಿವಾಹಿತರಿಗೆ ಕಾನೂನು ರಕ್ಷಣೆ ನೀಡುತ್ತದೆ ಮತ್ತು ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಮಾನ್ಯತೆ ನೀಡುತ್ತದೆ.

ಅಂತರ್ಜಾತಿ ವಿವಾಹವಾಗುವವರಿಗೆ ಶುಭ ಸುದ್ದಿ: ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ' ವಿಧೇಯಕ ಮಂಡನೆ
ಸಾಂದರ್ಭಿಕ ಚಿತ್ರImage Credit source: Google
ಸುನಿಲ್​ ಎಮ್​ ಹೆಚ್​
| Edited By: |

Updated on:Mar 18, 2026 | 2:12 PM

Share

ಬೆಂಗಳೂರು, ಮಾರ್ಚ್​​ 18: ಅಂತರ್ಜಾತಿ ವಿವಾಹ ಸಂದರ್ಭ ಕುಟುಂಬಸ್ಥರಿಂದ ತೀವ್ರ ಆಕ್ಷೇಪ, ಬಹಿಷ್ಕಾರ ಸೇರಿ ಕೆಲ ಪ್ರಕರಣಗಳಲ್ಲಿ ಕೊಲೆಯೂ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಅಂತರ್ಜಾತಿ ವಿವಾಹಿತರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಕಾಯ್ದೆ ತರಲು ಮುಂದಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ ಮಾಡಲಾಗಿದ್ದು, ಜಾತಿ ಶ್ರೇಣೀಕರಣ, ಸಂಪ್ರದಾಯಗಳ ಹೆಸರಿನಲ್ಲಿ ಹಿಂಸೆ ಮತ್ತು ಕಿರುಕುಳ‌ ತಪ್ಪಿಸಲು ಮುಂದಾಗಿದೆ. ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದರೆ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಮಾನ್ಯತೆ ಸಿಗಲಿದೆ.

ವಿಧೇಯಕ ಏನು ಹೇಳುತ್ತೆ?

  • ಅಂತರ್ಜಾತಿ ಮದುವೆಯಾದ್ರೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ಹಾಕುವಂತಿಲ್ಲ
  • ಸಂಬಂಧಿಸಿದ ಜೋಡಿ ವಾಸಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸುವುದು ಅವರ ಕುಟುಂಬವನ್ನು ಹೊರಹಾಕುವುದು ಕಾನೂನು‌ಬಾಹಿರ
  • ಜಾತಿ, ಇಲ್ಲವೆ ಸಮುದಾಯದಲ್ಲಿ ಬಲವಂತವಾಗಿ ಸಂಪ್ರದಾಯ ಹೇರುವಂತಿಲ್ಲ
  • ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ
  • ಅಂತರ್ಜಾತಿ ವಿವಾಹಿತರಿಂದ ಕುಟುಂಬದ ಆಸ್ತಿ, ದಂಡಹಾಕುವಂತಿಲ್ಲ
  • ಕೆಲಸಕ್ಕೆ ಅಡ್ಡಿ, ಕೆಲಸ ಕೊಡಲು ಹಿಂದೇಟು ಹಾಕುವುದು ಅಪರಾಧ
  • ಅಂರ್ಜಾತಿ ವಿವಾಹವಾಗಲು ಅವರ ಕುಟುಂಬಸ್ಥರು ವಿರೋಧಿಸುವಂತಿಲ್ಲ
  • ಇಬ್ಬರು ವಯಸ್ಕರ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ
  • ವಿವಾಹಿತ ಜೋಡಿಗೆ ಹಿಂಸೆ, ಮಾನಸಿಕ ನಿಂದನೆ ಕಾನೂನು‌ಬಾಹಿರ
  • ದಂಪತಿಯನ್ನು ಬಲವಂತವಾಗಿ ದೂರ ಇಡುವ ಪ್ರಯತ್ನ ಸರಿಯಲ್ಲ. ಮದುವೆಯಾದ ಜೋಡಿಯನ್ನ ಕಿಡ್ನ್ಯಾಪ್​ ಮಾಡುವುದು, ಆರ್ಥಿಕ‌ ಬಹಿಷ್ಕಾರ ಹಾಕುವುದು ಕಾನೂನು‌ಬಾಹಿರ
  • ದಂಪತಿಗೆ ಸಹಕಾರ ಕೊಟ್ಟವರ ಬಹಿಷ್ಕಾರ ಮಾಡುವುದು ಸರಿಯಲ್ಲ
  • ಬ್ಯಾಂಕ್ ಖಾತೆ ಸ್ಥಗಿತ, ಉದ್ಯೋಗ ಕೊಟ್ಟವರ ಮೇಲೆ ಒತ್ತಡ ಅಪರಾಧ
  • ಲೈಂಗಿಕ‌ ಹಿಂಸೆ ನೀಡುವುದು, ಕಿರುಕುಳ ನೀಡುವುದು ಅಪರಾಧ
  • ಬಲವಂತದ ಗರ್ಭಪಾತ ಗರ್ಭಸ್ರಾವಕ್ಕೆ ಒತ್ತಡ ಹೇರುವುದು ಅಪರಾಧ
  • ಅಂತರ್ಜಾತಿ ವಿವಾಹವಾದವರ ಬೇರ್ಪಡಿಸಿ ಬೇರೆ ಮದುವೆ ಮಾಡಿಸುವಂತಿಲ್ಲ. ಒಂದು ವೇಳೆ ಮರ್ಯಾದಾ ಹತ್ಯೆ ಮಾಡಿದರೆ 5 ವರ್ಷ ಜೈಲು, ದಂಡ. ದಂಪತಿಯನ್ನು ಗಾಯಗೊಳಿಸಿದ್ರೂ 3 ಲಕ್ಷ ದಂಡ, 3 ವರ್ಷ ಜೈಲು
  • ದಂಪತಿಯನ್ನು ಬೆದರಿಸಿದರೆ 5 ವರ್ಷ ಶಿಕ್ಷೆ, 2 ಲಕ್ಷ ರೂಪಾಯಿ ದಂಡ. ನಿರಂತರ ಬೆದರಿಕೆಗೆ 7 ವರ್ಷಗಳವರೆಗೆ ಶಿಕ್ಷೆ ವಿಸ್ತರಣೆ ಮಾಡಬಹುದು
  • ವಿವಾಹಿತ ಜೋಡಿ ವಿಚಾರದಲ್ಲಿ ಸಾಕ್ಷಿಗಳ ಗುರುತು, ವಿಳಾಸ ನೀಡುವಂತಿಲ್ಲ

ಇದನ್ನೂ ಓದಿ: ದೀಢೀರ್​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ?

ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಅಂತಹ ಜೋಡಿಗಳ ರಕ್ಷಣೆಗಾಗಿ ಹಲವು ಪ್ರಮುಖ ವಿಚಾರಗಳನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಂತಹ ವಿಚಾರಗಳನ್ನು ಇದು ಒಳಗೊಂಡಿರುವ ಕಾರಣ, ಕಾಯ್ದೆಯಾದಲ್ಲಿ ಅನ್ಯ ಜಾತಿ ವಿವಾಹವಾಗುವ ಜೋಡಿಗಳಿಗೆ ಕಾನೂನಿನ ಬಲವೂ ಸಿಕ್ಕಂತಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ. 

Published On - 2:11 pm, Wed, 18 March 26

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ