ಟಿವಿ9 ಮುಂಚೂಣಿ ಸ್ಥಾನದಲ್ಲಿ ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ- ತುಮಕೂರು ಸಿದ್ದಗಂಗಾ ಶ್ರೀಗಳ ಆಶೀರ್ವಚನ

ಅಪೌಷ್ಠಿಕತೆಯನ್ನು ಹೋಗಲಾಡಿಸುವ ಅಂದಿನ ಕಾರ್ಯಕ್ರಮದಿಂದ - ಇಂದಿನ ಕೊರೊನಾ ಸೋಂಕು ಕಾಲದಲ್ಲಿಯೂ ಅನೇಕ ವಿಧದ ಜಾಗೃತಿ ಕಾರ್ಯಕ್ರಮಗಳನ್ನು, ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖಾಂತರವಾಗಿ ಅನೇಕ ಕೊಡುಗೆಗಳನ್ನು ಮತ್ತು ಸೇವೆಗಳನ್ನು ಸಲ್ಲಿಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಟಿವಿ9 ಸಂಸ್ಥೆಯದ್ದಾಗಿದೆ -

ಟಿವಿ9 ಮುಂಚೂಣಿ ಸ್ಥಾನದಲ್ಲಿ ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ- ತುಮಕೂರು ಸಿದ್ದಗಂಗಾ ಶ್ರೀಗಳ ಆಶೀರ್ವಚನ
ಟಿವಿ9 ಮುಂಚೂಣಿ ಸ್ಥಾನದಲ್ಲಿ ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ- ತುಮಕೂರು ಸಿದ್ದಗಂಗಾ ಮಠದ ಶ್ರೀಗಳ ಆಶೀರ್ವಚನ
Follow us
| Updated By: ಸಾಧು ಶ್ರೀನಾಥ್​

Updated on:Jan 05, 2022 | 6:44 AM

ಬೆಂಗಳೂರು: ಟಿವಿ9 ಕರ್ನಾಟಕ​ ನವನಕ್ಷತ್ರ ಸನ್ಮಾನ 2021 ಕಾರ್ಯಕ್ರಮದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀಗಳು ಆಶೀರ್ವಚನ ನೀಡಿದ ಸಂದರ್ಭದಲ್ಲಿ ನುಡಿದ ಮಾತುಗಳು ಇಲ್ಲಿವೆ. ಸರಿ ಸುಮಾರು 10 ನೇ ಶತಮಾನದ ವಚನಕಾರ ಜೇಡರ ದಾಸಿಮಯ್ಯ ಅವರ ವಚನವೊಂದನ್ನು ಪಠಿಸುವ ಮೂಲಕ ಸಿದ್ದಗಂಗಾ ಮಠದ ಶ್ರೀಗಳು ತಮ್ಮ ಮಾತು ಆರಂಭಿಸಿದರು. ಆದ್ಯ ವಚನಕಾರ ಜೇಡರ ದಾಸಿಮಯ್ಯ ಅವರ ಆ ವಚನ ಹೀಗಿದೆ: ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ, ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ, ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ, ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ! ರಾಮನಾಥ.

ಬಸವಾದಿಮತರನ್ನು ಮತ್ತು ಪೂಜ್ಯ ಗುರುಗಳನ್ನು ಸ್ಮರಿಸುತ್ತಾ ಮಾತನಾಡಿದ ಸಿದ್ದಗಂಗಾ ಶ್ರೀಗಳು ಕನ್ನಡ ನಾಡಿನ ಹೆಮ್ಮೆಯ ಮಾಧ್ಯಮವಾದ ಟಿವಿ9 ಚಾನೆಲ್​ನ 15ನೇ ವರ್ಷದ ಸಂಭ್ರಮದ ಸಮಾರಂಭಕ್ಕೆ ಉಪಸ್ಥಿತರನ್ನು ಆಹ್ವಾನಿಸಿದರು. ಕನ್ನಡ ನಾಡಿನಲ್ಲಿ ಅನೇಕ ಟಿವಿ9 ಮಾಧ್ಯಮಗಳು ಸೇವೆ ಸಲ್ಲಿಸುತ್ತಾ ಇವೆ. ಅನೇಕ ಮಾಧ್ಯಮಗಳು ಮುಂಚೂಣಿ ಸ್ಥಾನದಲ್ಲಿ ಇವೆ. ಆ ಮುಂಚೂಣಿ ಸ್ಥಾನದಲ್ಲಿ ಟಿವಿ9 ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ. ತನ್ನ ಪ್ರಾರಂಭದ ಅವಧಿಯಲ್ಲಿಯೇ ಉತ್ತಮ ಸಮಾಜಕ್ಕಾಗಿ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಉತ್ತಮ ಸಮಾಜದ ನಿರ್ಮಾಣವನ್ನು ಟಿವಿ9 ಮಾಧ್ಯಮ ಪ್ರಾರಂಭದಿಂದಲೂ ಮಾಡಿಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಪೌಷ್ಠಿಕತೆಯನ್ನು ಹೋಗಲಾಡಿಸುವ ಅಂದಿನ ಕಾರ್ಯಕ್ರಮದಿಂದ – ಇಂದಿನ ಕೊರೊನಾ ಸೋಂಕು ಕಾಲದಲ್ಲಿಯೂ ಅನೇಕ ವಿಧದ ಜಾಗೃತಿ ಕಾರ್ಯಕ್ರಮಗಳನ್ನು, ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖಾಂತರವಾಗಿ ಅನೇಕ ಕೊಡುಗೆಗಳನ್ನು ಮತ್ತು ಸೇವೆಗಳನ್ನು ಸಲ್ಲಿಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಟಿವಿ9 ಸಂಸ್ಥೆಯದ್ದಾಗಿದೆ ಎಂಬುದನ್ನು ನಾವೆಲ್ಲಾ ಸಂತೋಷದಿಂದ ಒಪ್ಪಿಕೊಳ್ಳಬೇಕಾದ ಸಂಗತಿಯೆಂದರು.

ಇವತ್ತು ಟಿವಿ ಮಾಧ್ಯಮ ಎಲ್ಲರ ಬದುಕಿನಲ್ಲೂ ಮಹಳ ಮಖ್ಯವಾದ ಪಾತ್ರವನ್ನು ನಿರ್ವಹಿಸುತ್ತಾ ಇದೆ. ಇವತ್ತು ಮನುಷ್ಯನ ಬದುಕನ್ನು ಉತ್ತಮಪಡಿಸಲಿಕ್ಕೆ, ಅವನ ಮನಸ್ಸನ್ನು ವಿಕಾಸಗೊಳಿಸಲಿಕ್ಕೆ, ಅವನ ಭಾವನೆಗಳನ್ನು ಪವಿತ್ರಗೊಳಿಸಲಿಕ್ಕೆ ಟಿವಿ ಮಾಧ್ಯಮಗಳು ಉತ್ತಮ ಕಾರ್ಯ್ರಮಗಳನ್ನು ಸಾದರಪಡಿಸಬೇಕಿರುವುದು ಅಷ್ಟೇ ಮಹತ್ವಪೂರ್ಣವಾಗಿದೆ. ಆದ್ದರಿಂದ ಇವತ್ತು ಮನುಷ್ಯನ ಉತ್ತಮ ಬದುಕಿಗಾಗಿ, ಉತ್ತಮ ಜೀವನಕ್ಕಾಗಿ ಉತ್ತಮ ಕಾರ್ಯಕ್ರಮಗಳನ್ನು ಬಿತ್ತರಿಸುವ, ಆ ಕೊಡುಗೆ ನೀಡುವ ಕೀರ್ತಿಯನ್ನು ಟಿವಿ9 ಮಾಧ್ಯಮ ಮಾಡಿಕೊಂಡು ಬರುತ್ತಾ ಇದೆ ಎಂದು ಟಿವಿ9 ಚಾನೆಲ್​ಅನ್ನು ಅಭಿನಂದಿಸಿದರು.

ಈ ವೇಳೆ ವಿಶ್ವಗುರು ಬಸವಣ್ಣನವರ ವಚನಾಮೃತ ಒಂದನ್ನು ವಾಚಿಸುತ್ತಾ ನ್ಯಾಯ ನಿಷ್ಠುರಿ; ದಾಕ್ಷಿಣ್ಯಪರ ನಾನಲ್ಲ. ಲೋಕವಿರೋಧಿ; ಶರಣನಾರಿಗಂಜುವನಲ್ಲ- ಎಂದು ಹೇಳಿದಂತೆ ಯಾವುದೆ ಅನ್ಯಾಯ, ನಿಷ್ಠೂರಕ್ಕೆ ಅಂಜದೆ- ಎಲ್ಲಿ ಅನ್ಯಾಯ ಆಗಿದೆಯೋ ಅಲ್ಲಿ ನ್ಯಾಯವನ್ನ ಒದಗಿಸಿಕೊಡುವಂತಹುದು, ಎಲ್ಲಿ ತಪ್ಪಾಗಿದೆಯೋ ಅದನ್ನು ಸರಿಪಡಿಸುವಂತಹುದು, ಎಲ್ಲಿ ಉತ್ತಮ ಕಾರ್ಯಗಳು ಆಗುತ್ತಿವೆಯೋ ಅದನ್ನು ಶ್ಲಾಘಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುವುದರ ಮುಖಾಂತರವಾಗಿ ನಮ್ಮ ಟಿವಿ9 ಕನ್ನಡ ಮಾಧ್ಯಮ ಉತ್ತಮ ಕೆಲಸವನ್ನು ಮಾಡಿಕೊಂಡು ಬರುತ್ತಾ ಇದೆ. ಇದು ಕನ್ನಡಿಗರ ಹೆಮ್ಮೆ ಎಂಬ ಭಾವನೆಯನ್ನು ವ್ಯಕ್ತಮಾಡುವೆ ಎಂದರು.

ಈ ಸಂದರ್ಭದಲ್ಲಿ ನವ ಸಾಧಕರನ್ನು ಗುರುತಿಸಿ, ಸನ್ಮಾನಿಸುತ್ತಿದೆ. ನಾವೇ ಸನ್ಮಾನವನ್ನು ಅರಿಸಿಕೊಂಡು ಹೋದರೆ ಅದು ದೌರ್ಬಲ್ಯವಾಗುತ್ತದೆ. ಹಾಗೆಯೇ ಅದು ನಮ್ಮನ್ನು ಹುಡುಕಿಕೊಂಡು ಬಂದರೆ ಅದು ಗೌರವ. ಹಾಗಾಗಿ ಇಂದು ಇಲ್ಲಿ ಸನ್ಮಾನಕ್ಕೆ ಪಾತ್ರರಾಗುತ್ತಿರುವವರು ಯಾರೂ ನಮಗೆ ಸನ್ಮಾನ ಬೇಕು ಎಂದು ಬಯಸಿದವರಲ್ಲ. ಟಿವಿ9 ಆ ಕೆಲಸ ಮಾಡುತ್ತಿರುವುದು ಅತ್ಯತ ಹೆಮ್ಮೆ ಪಡುವಂತಹ ಸಂಗತ ಎಂದು ಸಿದ್ದಗಂಗಾ ಮಠದ ಶ್ರೀಗಳು ಮೆಚ್ಚುಗೆ ಸೂಚಿಸಿದರು. ಟಿವಿ9 ಮಾಧ್ಯಮ ಇದೇ ರೀತಿ ತನ್ನ ಕಾರ್ಯಕ್ರಮಗಳನ್ನು 100 ಪಟ್ಟು ಹೆಚ್ಚಿಸಿಕೊಂಡು ಹೋಗಲೀ ಎಂದು ಆಶಿಸುವೆ ಎಂದು ಶ್ರೀ ಗಳು ಇದೇ ಸಂದರ್ಭದಲ್ಲಿ ಆಶಿಸಿದರು.

ತುಮಕೂರು ಸಿದ್ದಗಂಗಾ ಮಠದ ಶ್ರೀಗಳು ಆಶೀರ್ವಚನ ಮಾತುಗಳನ್ನು ವೀಕ್ಷಿಸಲು ಈ ವಿಡಿಯೋ ಕ್ಲಿಕ್​ ಮಾಡಿ:

Also Read: ಟಿವಿ9 ಧ್ಯೇಯವಾಕ್ಯ ‘ಉತ್ತಮ ಸಮಾಜಕ್ಕಾಗಿ’ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ- ಸಿಇಒ ಬರುನ್​ ದಾಸ್

Also Read: ಟಿವಿ9 ಕನ್ನಡಿಗರಿಗಾಗಿ ನಂಬಿಕಾರ್ಯ, ಅಧಿಕಾರಯುತ, ನಿಖರ ಸುದ್ದಿ ಸಾದರ ಪಡಿಸಲು ಕಟಿಬದ್ಧ: ವ್ಯವಸ್ಥಾಪಕ ಸಂಪಾದಕ ಶ್ರೀಧರನ್

Published On - 1:32 pm, Tue, 4 January 22

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ