ಬೆಂಗಳೂರಿನಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್; 24 ಗಂಟೆಯಲ್ಲಿ ಕೊವಿಡ್ ಪ್ರಕರಣಗಳು ದ್ವಿಗುಣ
Bengaluru News: ಕರ್ನಾಟಕ ರಾಜ್ಯದಲ್ಲಿ ಇಂದು 2,479 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು ಕೊರೊನಾ ಸೋಂಕಿಗೆ ನಾಲ್ವರು ಬಲಿ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 2.59ರಷ್ಟಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಮಂಗಳವಾರ (ಜನವರಿ 4) ಹೊಸದಾಗಿ 2,053 ಕೊರೊನಾ ಪ್ರಕರಣಗಳು ಪತ್ತೆ ಆಗಿದೆ. ಆ ಮೂಲಕ, ಬೆಂಗಳೂರಿನಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ 2 ಸಾವಿರ ಗಡಿ ದಾಟಿದಂತಾಗಿದೆ. ಬೆಂಗಳೂರಿನಲ್ಲಿ 24 ಗಂಟೆಯಲ್ಲಿ ಕೊರೊನಾ ಕೇಸ್ ದ್ವಿಗುಣವಾಗಿದೆ. ನಿನ್ನೆ 1 ಸಾವಿರದಷ್ಟಿದ್ದ ಕೊರೊನಾ ಕೇಸ್ ಇಂದು 2 ಸಾವಿರ ತಲುಪಿದೆ. ಕರ್ನಾಟಕ ರಾಜ್ಯದಲ್ಲಿ ಇಂದು 2,479 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು ಕೊರೊನಾ ಸೋಂಕಿಗೆ ನಾಲ್ವರು ಬಲಿ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 2.59ರಷ್ಟಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕೊವಿಡ್ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿತ್ತು. ಹೀಗಾಗಿ ಆಕ್ಸಿಜನ್ ತೊಂದರೆ ಆಗದಂತೆ ಸಿಬ್ಬಂದಿಗಳಿಂದ ತಯಾರಿ ಮಾಡಲಾಗುತ್ತಿದೆ. ಕೊವಿಡ್ ಕೇರ್ ಸೆಂಟರ್ಗಳನ್ನು ಬಿಬಿಎಂಪಿ ರೀ ಓಪನ್ ಮಾಡಿದೆ. ಆಕ್ಸಿಜನ್ ಇರುವ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕೊವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ.
ಬೆಂಗಳೂರಲ್ಲಿ ಕೊವಿಡ್ ನಿಯಂತ್ರಣಕ್ಕೆ ಅಧಿಕಾರಿಗಳ ನೇಮಕ ಬೆಂಗಳೂರಲ್ಲಿ ಕೊವಿಡ್ ನಿಯಂತ್ರಣಕ್ಕೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ನೋಡಲ್ ಅಧಿಕಾರಿಗಳಾಗಿ IAS, IPS ಅಧಿಕಾರಿಗಳನ್ನು ನೇಮಿಸಲಾಗಿದೆ. 1. ಏರ್‌ಪೋರ್ಟ್ ಕೊವಿಡ್ ಉಸ್ತುವಾರಿ- ಸಿ.ಶಿಖಾ 2. ಖಾಸಗಿ ವೈದ್ಯ ಸಂಸ್ಥೆಯಲ್ಲಿ ಹಾಸಿಗೆ ಮೀಸಲು ಉಸ್ತುವಾರಿಗಳಾಗಿ ಬೆಂಗಳೂರಿನ ಪೂರ್ವ ವಲಯ-1ಕ್ಕೆ ಇಬ್ಬರ ನೇಮಕಾತಿ ಮಾಡಲಾಗಿದೆ. ಕ್ಯಾ. ಮಣಿವಣ್ಣನ್ ಮತ್ತು ಅಲೋಕ್ ಕುಮಾರ್ ನೇಮಕ ಮಾಡಲಾಗಿದೆ. 3. ಬೆಂಗಳೂರಿನ ಪೂರ್ವ ವಲಯ-2ಕ್ಕೆ ಇಬ್ಬರ ನೇಮಕಾತಿ ಮಾಡಲಾಗಿದೆ. ಮೊಹಮ್ಮದ್ ಮೊಹಿಸಿನ್ ಮತ್ತು ಹರಿಶೇಖರನ್ ನೇಮಿಸಲಾಗಿದೆ. 4. ಮಹದೇವಪುರ- ಉಮಾ ಮಹದೇವನ್, ಹಿತೇಂದ್ರ 5. ಪಶ್ಚಿಮ ವಲಯ- ಎಂ.ಟಿ.ರೇಜು ಮತ್ತು ಕೆ.ಟಿ.ಬಾಲಕೃಷ್ಣ 6. ದಕ್ಷಿಣ ವಲಯ- ರಾಜೇಂದ್ರಚೋಳನ್, ರಾಮಚಂದ್ರರಾವ್ 7. ಆರ್.ಆರ್. ನಗರ- ರಾಮ್ ಪ್ರಸಾತ್, ಹೇಮಂತ್ ನಿಂಬಾಳ್ಕರ್ 8. ಯಲಹಂಕ, ದಾಸರಹಳ್ಳಿ- ಏಕ್‌ರೂಪ್ ಕೌರ್, ಎಸ್.ರವಿ 9. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಮೀಸಲಿಗೆ ಎನ್. ಜಯರಾಮ್ 10. ಟ್ರೇಸಿಂಗ್, ಅನ್‌ಟ್ರೇಸ್ಡ್ ಸೋಂಕಿತರ ಪತ್ತೆ- ಅನುಚೇತ್ 11. ಸೋಂಕಿತರ ಅಂತ್ಯಸಂಸ್ಕಾರ- ರಾಜೇಂದ್ರಕುಮಾರ್ ಕಠಾರಿಯಾ 12. ಕಂಟೋನ್ಮೆಂಟ್ ಜೋನ್ ಉಸ್ತುವಾರಿ- ಸತ್ಯವತಿ
ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ವಿ.ವಿ.ಪುರಂ ಠಾಣೆ ಇನ್ಸ್ಪೆಕ್ಟರ್, ಓರ್ವ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ ಇಬ್ಬರಿಗೆ ಪರೀಕ್ಷೆ ಮಾಡಲಾಗಿದೆ. ಸೋಂಕಿತ ಸಿಬ್ಬಂದಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಒಂದೇ ಶಾಲೆಯ 17 ಮಕ್ಕಳಿಗೆ ಕೊರೊನಾ ಮಂಡ್ಯ ಜಿಲ್ಲೆಯಲ್ಲಿ ಒಂದೇ ಶಾಲೆಯ 17 ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಕೊರೊನಾ ಕಂಡುಬಂದಿದೆ. ನಿನ್ನೆ ಲಸಿಕೆ ನೀಡುವ ವೇಳೆ ಕೊರೊನಾ ಟೆಸ್ಟ್ ಮಾಡಿಸಿದ್ದರು. ಈ ವೇಳೆ, ಕೊರೊನಾ ಸೋಂಕು ಇರುವುದು ದೃಢವಾಗಿದೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಸುವ ಅವಶ್ಯಕತೆ ಇಲ್ಲ: ರಘುಪತಿ ಭಟ್ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಉಡುಪಿಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೈಟ್ ಕರ್ಫ್ಯೂನಿಂದ ಕೊರೊನಾ ನಿಯಂತ್ರಣ ಎನ್ನಲು ಆಗಲ್ಲ. ಕೊರೊನಾ ಇನ್ನೂ ಇದೆ ಅನ್ನೋದು ಜನರ ಅರಿವಿಗೆ ಬರುತ್ತೆ ಅಷ್ಟೆ. ಕೇವಲ ಕೊರೊನಾ ಸೋಂಕಿನಿಂದ ಯಾವುದೇ ಅಪಾಯ ಇಲ್ಲ. ಸರ್ಕಾರ, ತಜ್ಞರ ಮೇಲೆ ಜನರು ವಿಶ್ವಾಸ ಇರಿಸಬೇಕು ಎಂದು ಉಡುಪಿಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: Mumbai Lockdown: ಮುಂಬೈನಲ್ಲಿ ಕೊವಿಡ್, ಒಮಿಕ್ರಾನ್ ಅಟ್ಟಹಾಸ; ಲಾಕ್ಡೌನ್ ಸುಳಿವು ನೀಡಿದ ಮೇಯರ್
Published On - 5:18 pm, Tue, 4 January 22