Mumbai Lockdown: ಮುಂಬೈನಲ್ಲಿ ಕೊವಿಡ್, ಒಮಿಕ್ರಾನ್ ಅಟ್ಟಹಾಸ; ಲಾಕ್‌ಡೌನ್ ಸುಳಿವು ನೀಡಿದ ಮೇಯರ್
ದಿನನಿತ್ಯ ಕೊವಿಡ್ ಪ್ರಕರಣಗಳು 20,000 ಗಡಿ ದಾಟಿದರೆ ನಾವು ಮುಂಬೈನಲ್ಲಿ ಲಾಕ್‌ಡೌನ್ ಹೇರಬೇಕಾಗುತ್ತದೆ ಎಂದು ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್ ಕೇಸುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ, ಮುಂಬೈ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನವರಿ 31ರವರೆಗೆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಕೊರೊನಾವೈರಸ್ ಪ್ರಕರಣಗಳ ಉಲ್ಬಣದ ಮಧ್ಯೆ ಮುಂಬೈನಲ್ಲಿ ಲಾಕ್‌ಡೌನ್ ಹೇರುವ ಸಾಧ್ಯತೆಯ ಬಗ್ಗೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಇಂದು ಮಾತನಾಡಿದ್ದಾರೆ. ಮುಂಬೈನಲ್ಲಿ ದಿನವೂ ಕೊವಿಡ್ ಪ್ರಕರಣಗಳು 20,000 ಸಮೀಪಿಸುತ್ತಿದೆ. 20 ಸಾವಿರ ಕೊರೊನಾ ಕೇಸುಗಳು ಪತ್ತೆಯಾದರೆ ಮುಂಬೈನಲ್ಲಿ ಲಾಕ್‌ಡೌನ್ ಮಾಡಲಾಗುವುದು ಎಂದು ಮೇಯರ್ ಹೇಳಿದ್ದಾರೆ.
ದಿನನಿತ್ಯ ಕೊವಿಡ್ ಪ್ರಕರಣಗಳು 20,000 ಗಡಿ ದಾಟಿದರೆ ನಾವು ಮುಂಬೈನಲ್ಲಿ ಲಾಕ್‌ಡೌನ್ ಹೇರಬೇಕಾಗುತ್ತದೆ ಎಂದು ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ. ಮುಂಬೈನಲ್ಲಿ ಒಂದು ದಿನದಲ್ಲಿ 20,000 ಪ್ರಕರಣಗಳು ಪತ್ತೆಯಾದರೆ ಕೊವಿಡ್-19 ಮಾರ್ಗಸೂಚಿಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ. ಮುಂದಿನ 2ರಿಂದ 3 ದಿನಗಳಲ್ಲಿ ರಾಜ್ಯದ ಕೋವಿಡ್ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡುವ ಸಾಧ್ಯತೆಯಿದೆ ಎಂದು ಪೆಡ್ನೇಕರ್ ಹೇಳಿದ್ದಾರೆ.
ಸಾರ್ವಜನಿಕ ಸ್ಥಳಗಳಾದ ಥಿಯೇಟರ್‌ಗಳು, ಉದ್ಯಾನಗಳು ಮತ್ತು ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ಮುಂದುವರೆಸಿದರೆ ಮುಂಬೈನಲ್ಲಿ ಮಿನಿ ಲಾಕ್‌ಡೌನ್ ಅನ್ನು ವಿಧಿಸಬಹುದು ಎಂದು ಮೇಯರ್ ಎಚ್ಚರಿಸಿದ್ದಾರೆ.
ಮುಂಬೈ ನಗರದಲ್ಲಿ 8,082 COVID-19 ಪ್ರಕರಣಗಳು ವರದಿಯಾದ ಬೆನ್ನಲ್ಲೇ ಮೇಯರ್ ಈ ಹೇಳಿಕೆ ನೀಡಿದ್ದಾರೆ. ಹೊಸ ಪ್ರಕರಣಗಳಲ್ಲಿ 40 ಒಮಿಕ್ರಾನ್ ರೂಪಾಂತರವಾಗಿದ್ದು, ಇದು ಆತಂಕವನ್ನು ಹೆಚ್ಚು ಮಾಡಿದೆ. ಮುಂಬೈ ಈಗ ಒಟ್ಟು 368 ಓಮಿಕ್ರಾನ್ ರೂಪಾಂತರ ಪ್ರಕರಣಗಳನ್ನು ಹೊಂದಿದೆ.
ಮುಂಬೈನ ಕರೋನವೈರಸ್ ಸಂಖ್ಯೆ ಈಗ 8,07,602 ಆಗಿದ್ದು, ಸಾವಿನ ಸಂಖ್ಯೆ 16,379ಕ್ಕೆ ಏರಿದೆ ಎಂದು ಬಿಎಂಸಿ ತಿಳಿಸಿದೆ. COVID-19 ಪ್ರಕರಣಗಳ ಉಲ್ಬಣದ ಮಧ್ಯೆ 1ರಿಂದ 9ನೇ ತರಗತಿ ಮತ್ತು 11ನೇ ತರಗತಿಯ ಶಾಲೆಗಳನ್ನು ಜನವರಿ 31ರವರೆಗೆ ಮುಚ್ಚಲಾಗುವುದು ಎಂದು BMC ನಿನ್ನೆ ಘೋಷಿಸಿತ್ತು. 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಶಾಲೆಗೆ ಹಾಜರಾಗಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Health Tips; ಒಮಿಕ್ರಾನ್ ವಿರುದ್ಧ ಹೋರಾಡಲು ಈ ಸರಳ ಮಾರ್ಗಗಳನ್ನು ಅನುಸರಿಸಿ
Mumbai Covid Cases: ಮುಂಬೈನಲ್ಲಿ ಕೊರೊನಾ ಕೇಸ್ ಹೆಚ್ಚಳ; ಜ. 31ರವರೆಗೆ ಶಾಲೆಗಳು ಬಂದ್
Published On - 2:35 pm, Tue, 4 January 22