Video: ಉತ್ತರ ಪ್ರದೇಶದ ಕಾಂಗ್ರೆಸ್ ಮ್ಯಾರಥಾನ್‌ನಲ್ಲಿ ಕಾಲ್ತುಳಿತದಂತಹ ದೃಶ್ಯ; ಮಾಸ್ಕ್ ಇಲ್ಲದೆ ರಸ್ತೆಗಿಳಿದರು ನೂರಾರು ಮಹಿಳೆಯರು

Congress Marathon ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾಂಗ್ರೆಸ್ ನಾಯಕಿ ಮತ್ತು ಬರೇಲಿ ಮಾಜಿ ಮೇಯರ್ ಸುಪ್ರಿಯಾ ಅರೋನ್, ಆತಂಕಪಡುವ ಅಗತ್ಯವಿಲ್ಲ. "ಸಾವಿರಾರು ಜನಸಂದಣಿಯಲ್ಲಿ ವೈಷ್ಣೋದೇವಿಯ ಬಳಿಗೆ ಹೋದರು. ಅದರ ಬಗ್ಗೆ ಏನಂತೀರಿ? ನೋಡಿ, ಇದು ತುಂಬಾ ಮಾನವೀಯ ವಿಷಯ ಎಂದಿದ್ದಾರೆ.

Video: ಉತ್ತರ ಪ್ರದೇಶದ ಕಾಂಗ್ರೆಸ್ ಮ್ಯಾರಥಾನ್‌ನಲ್ಲಿ ಕಾಲ್ತುಳಿತದಂತಹ ದೃಶ್ಯ; ಮಾಸ್ಕ್ ಇಲ್ಲದೆ ರಸ್ತೆಗಿಳಿದರು ನೂರಾರು ಮಹಿಳೆಯರು
ಉತ್ತರಪ್ರದೇಶದಲ್ಲಿ ಮ್ಯಾರಥಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 04, 2022 | 1:31 PM

ಲಖನೌ: ಕಾಂಗ್ರೆಸ್ ಪಕ್ಷದ (Congress) “ಲಡ್ಕಿ ಹೂಂ, ಲಡ್ ಸಕ್ತೀ ಹೂಂ (ನಾನು ಹುಡುಗಿ, ಹೋರಾಡಬಲ್ಲೆ)” ಚುನಾವಣಾ ಪ್ರಚಾರದ ಭಾಗವಾಗಿ ಉತ್ತರ ಪ್ರದೇಶದಲ್ಲಿ(Uttar pradesh) ಕಾಂಗ್ರೆಸ್ ನಾಯಕರೊಬ್ಬರು ಆಯೋಜಿಸಿದ್ದ ಮ್ಯಾರಥಾನ್​​ನಲ್ಲಿ(Marathon) ಕಾಲ್ತುಳಿತವಾಗುವಂತ ಸನ್ನಿವೇಶ ಕಾಣಿಸಿತ್ತು. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ನೂರಾರು ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರು ಮಾಸ್ಕ್ ಗಳಿಲ್ಲದೆ ಕಾಣಿಸಿಕೊಂಡಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಹೆಚ್ಚುತ್ತಿರುವ ಕೊವಿಡ್-19 (Covid-19) ಪ್ರಕರಣಗಳ ಮಧ್ಯೆ ಮ್ಯಾರಥಾನ್ ಭಾಗವಹಿಸುವವರ ಬೃಹತ್ ಗುಂಪು ಕಂಡುಬಂದಿದ್ದು ಹೆಚ್ಚಿನವರು ಮಾಸ್ಕ್ ಧರಿಸದೆ ರಸ್ತೆಗಿಳಿದಿದ್ದರು. ಮ್ಯಾರಥಾನ್ ಪ್ರಾರಂಭಿಸಿದಾಗ, ಮುಂಭಾಗದಲ್ಲಿದ್ದ ಕೆಲವು ಮಹಿಳೆಯರು ಮುಗ್ಗರಿಸಿ ನೆಲಕ್ಕೆ ಬಿದ್ದರು. ಹಿಂದಿನಿಂದ ಹೆಚ್ಚಿನ ಜನಸಂದಣಿಯು ಮುಂಭಾಗದಲ್ಲಿದ್ದವರನ್ನು ತಳ್ಳಿದ್ದರಿಂದ ಅನಾಹುತ ಸಂಭವಿಸುವಂತೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾಂಗ್ರೆಸ್ ನಾಯಕಿ ಮತ್ತು ಬರೇಲಿ ಮಾಜಿ ಮೇಯರ್ ಸುಪ್ರಿಯಾ ಅರೋನ್, ಆತಂಕಪಡುವ ಅಗತ್ಯವಿಲ್ಲ. “ಸಾವಿರಾರು ಜನಸಂದಣಿಯಲ್ಲಿ ವೈಷ್ಣೋದೇವಿಯ ಬಳಿಗೆ ಹೋದರು. ಅದರ ಬಗ್ಗೆ ಏನಂತೀರಿ? ನೋಡಿ, ಇದು ತುಂಬಾ ಮಾನವೀಯ ವಿಷಯ. ಇವರು ಶಾಲಾಮಕ್ಕಳು ಮತ್ತು ಅವರು ಸ್ವಲ್ಪ ಸಮಯದವರೆಗೆ ಹೊರಬರಲು ಬಯಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಯಾರಿಗಾದರೂ ನೋವಾಗಿದ್ದರೆ  ಕಾಂಗ್ರೆಸ್ ಪರವಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಆರೋನ್ ಹೇಳಿದರು.

ಕೊವಿಡ್-19 ಮತ್ತು ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ರೂಪಾಂತರವು ಪಂಜಾಬ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ ಚುನಾವಣೆಗಳ ಮೇಲೆ ಪರಿಣಾಮದ ಮೋಡ ಆವರಿಸುವಂತೆ ಮಾಡಿದೆ. ಅಲ್ಲಿ ರಾಜಕೀಯ ಪಕ್ಷಗಳು ರ್ಯಾಲಿಗಳನ್ನು ನಡೆಸುವುದನ್ನು ಮುಂದುವರೆಸಿವೆ. ಕಟ್ಟುನಿಟ್ಟಾದ ಕೊವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಚುನಾವಣೆಗಳನ್ನು ನಡೆಸಬೇಕೆಂದು ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಆಯೋಗ ಹೇಳಿದೆ.

ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ದೃಷ್ಟಿಯಿಂದ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಲಿಂಗ ಸಮಾನತೆಯತ್ತ ಗಮನ ಹರಿಸುತ್ತಿದೆ. ಈ ಕೆಲವು ಪ್ರಕರಣಗಳು ಹಥಾರಸ್ ನಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಮತ್ತು ಉನ್ನಾವ್‌ನಲ್ಲಿನ ಪ್ರಕರಣಗಳು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು . ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳೆದ ತಿಂಗಳು “ಲಡ್ಕಿ ಹೂಂ, ಲಡ್ ಸಕ್ತಿ ಹೂಂ ಎಂಬ ಚುನಾವಣಾ ಘೋಷಣೆಯನ್ನು ನೀಡಿದ್ದರು

ರಾಜಕೀಯವಾಗಿ ನಿರ್ಣಾಯಕವಾಗಿರುವ ರಾಜ್ಯದಲ್ಲಿ ಬಿಜೆಪಿ ಕೂಡ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು 16 ಲಕ್ಷಕ್ಕೂ ಅಧಿಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ₹ 1,000 ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸುವ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ.  ಸಮಾಜವಾದಿ ಪಕ್ಷವು ಅಖಿಲೇಶ್ ಯಾದವ್ ಮತ್ತು ಅವರ ತಂದೆ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಪಕ್ಷದ ಸರ್ಕಾರಗಳ ಅವಧಿಯಲ್ಲಿ ಮಹಿಳೆಯರಿಗಾಗಿ ಕೈಗೊಂಡ ಉಪಕ್ರಮಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸಿದೆ.

ಇದನ್ನೂ ಓದಿ: ಮ್ಯಾನ್‌ಕೈಂಡ್ ಫಾರ್ಮಾ ಮುಂದಿನ ವಾರದೊಳಗೆ ಅಗ್ಗದ ಕೊವಿಡ್ ಆಂಟಿವೈರಲ್ ಡ್ರಗ್ ಬಿಡುಗಡೆ ಮಾಡಲಿದೆ: ವರದಿ

Published On - 1:20 pm, Tue, 4 January 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್