ಮ್ಯಾನ್‌ಕೈಂಡ್ ಫಾರ್ಮಾ ಮುಂದಿನ ವಾರದೊಳಗೆ ಅಗ್ಗದ ಕೊವಿಡ್ ಆಂಟಿವೈರಲ್ ಡ್ರಗ್ ಬಿಡುಗಡೆ ಮಾಡಲಿದೆ: ವರದಿ
ಐದು ದಿನಗಳವರೆಗೆ ದಿನಕ್ಕೆ ಎರಡು ಬಾರಿ ಮೊಲ್ನುಪಿರವಿರ್ 800 ಎಂಜಿ ಶಿಫಾರಸು ಮಾಡಲಾಗುತ್ತದೆ. ರೋಗಿಯು 200 ಎಂಜಿ ಔಷಧಿಗಳನ್ನು ಹೊಂದಿರುವ 40 ಕ್ಯಾಪ್ಸುಲ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮ್ಯಾನ್‌ಕೈಂಡ್ ಫಾರ್ಮಾದ (Mankind Pharma) ಕಂಪನಿಯು ಅಗ್ಗದ ಕೊವಿಡ್ -19 (Covid-19) ಆಂಟಿವೈರಲ್ ಡ್ರಗ್ ಮೊಲ್ನುಪಿರಾವಿರ್ (Molnupiravir) ಬಿಡುಗಡೆ ಮಾಡಲಿದ್ದು ಪ್ರತಿ ಕ್ಯಾಪ್ಸುಲ್ ಬೆಲೆ 35 ರೂ ಆಗಲಿದೆ ಎಂದು ಕಂಪನಿಯ ಮುಖ್ಯಸ್ಥರು ಹೇಳಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಮಾಡಿದೆ. ಮ್ಯಾನ್‌ಕೈಂಡ್ ಫಾರ್ಮಾ ಅಧ್ಯಕ್ಷ ಆರ್‌ಸಿ ಜುನೇಜಾ ಮಾತನಾಡಿ, ಮೊಲುಲೈಫ್ (Molulife ಬ್ರಾಂಡ್ ಹೆಸರು) ಸಂಪೂರ್ಣ ಚಿಕಿತ್ಸೆಗೆ 1,400 ರೂ ಆಗಲಿದೆ. ಅವರ ಪ್ರಕಾರ, ಈ ಬ್ರಾಂಡ್ ಈ ವಾರ ಮಾರುಕಟ್ಟೆಗೆ ಬರಲಿದೆ. ಐದು ದಿನಗಳವರೆಗೆ ದಿನಕ್ಕೆ ಎರಡು ಬಾರಿ ಮೊಲ್ನುಪಿರವಿರ್ 800 ಎಂಜಿ ಶಿಫಾರಸು ಮಾಡಲಾಗುತ್ತದೆ. ರೋಗಿಯು 200 ಎಂಜಿ ಔಷಧಿಗಳನ್ನು ಹೊಂದಿರುವ 40 ಕ್ಯಾಪ್ಸುಲ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಟೊರೆಂಟ್, ಸಿಪ್ಲಾ, ಸನ್ ಫಾರ್ಮಾ, ಡಾ ರೆಡ್ಡೀಸ್, ನ್ಯಾಟ್ಕೊ, ಮೈಲಾನ್ ಮತ್ತು ಹೆಟೆರೊ ಸೇರಿದಂತೆ 13 ಭಾರತೀಯ ಔಷಧೀಯ ಕಂಪನಿಗಳು ಓರಲ್ ಪಿಲ್ (ಬಾಯಿ ಮೂಲಕ ಸೇವಿಸುವ ಮಾತ್ರೆಗಳನ್ನು) ತಯಾರಿಸುತ್ತವೆ. ಕೊವಿಡ್-19 ಪ್ರಗತಿಯ ಹೆಚ್ಚಿನ ಅಪಾಯವಿರುವ ವಯಸ್ಕ ರೋಗಿಗಳ ಚಿಕಿತ್ಸೆಗಾಗಿ ತುರ್ತು ಪರಿಸ್ಥಿತಿಯಲ್ಲಿ ಸೀಮಿತ ಬಳಕೆಗಾಗಿ ಔಷಧವನ್ನು ಅನುಮೋದಿಸಲಾಗಿದೆ.
ಎಂಎಸ್ ಡಿ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್ ಅಭಿವೃದ್ಧಿಪಡಿಸಿದ ಮೊಲ್ನುಪಿರಾವಿರ್, ತೀವ್ರ ರೋಗವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವಿರುವ ಸೌಮ್ಯದಿಂದ ಮಧ್ಯಮ ಕೊವಿಡ್-19 ರೋಗಿಗಳ ಚಿಕಿತ್ಸೆಗಾಗಿ ಯುಕೆ ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (MHRA) ಮತ್ತು ಯುಎಸ್ ಆಹಾರ ಮತ್ತು ಔಷಧ ಆಡಳಿತ (FDA) ನಿಂದ ಅನುಮೋದಿಸಲಾಗಿದೆ.
ಸಿಪ್ಲಾ, ಸನ್ ಫಾರ್ಮಾ ಮತ್ತು ಡಾ ರೆಡ್ಡೀಸ್ ಲ್ಯಾಬೋರೇಟರೀಸ್ ಕೂಡ ಮುಂಬರುವ ವಾರಗಳಲ್ಲಿ ಮೊಲ್ನುಪಿರವಿರ್ ಕ್ಯಾಪ್ಸುಲ್‌ಗಳನ್ನು ಬಿಡುಗಡೆ ಮಾಡಲಿದೆ. ಇತರ ಕಂಪನಿಗಳ ಔಷಧದ ಸಂಪೂರ್ಣ ಚಿಕಿತ್ಸೆಗೆ ರೂ 2,000 ಮತ್ತು ರೂ 3,000 ವೆಚ್ಚವಾಗಲಿದೆ ಎಂದು ವರದಿಗಳು ತಿಳಿಸಿವೆ. ಬಹುಪಾಲು ಕಂಪನಿಗಳು ಭಾರತದಲ್ಲಿ ಮತ್ತು 100 ಕ್ಕೂ ಹೆಚ್ಚು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ (LMICs) ಮೊಲ್ನುಪಿರವಿರ್ ಅನ್ನು ತಯಾರಿಸಲು ಮತ್ತು ಪೂರೈಸಲು ಮೆರ್ಕ್ ಶಾರ್ಪ್ ಡೋಹ್ಮ್ (MSD) ನೊಂದಿಗೆ ಸ್ವಯಂಪ್ರೇರಿತ ಪರವಾನಗಿ ಒಪ್ಪಂದವನ್ನು ಮಾಡಿಕೊಂಡಿವೆ.
ಸಿಪ್ಲಾ ಮೊಲ್ನುಪಿರವಿರ್ ಅನ್ನು ಸಿಪ್ಮೋಲ್ನು ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲು ಉದ್ದೇಶಿಸಿದೆ. Cipmolnu 200mg ಕ್ಯಾಪ್ಸುಲ್‌ಗಳು ಮುಂದಿನ ದಿನಗಳಲ್ಲಿ ದೇಶಾದ್ಯಂತದ ಪ್ರಮುಖ ಔಷಧಾಲಯಗಳು ಮತ್ತು ಕೊವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಮೊಲ್‌ಫ್ಲು ಎಂಬ ಬ್ರಾಂಡ್‌ನಡಿಯಲ್ಲಿ ಮೊಲ್ನುಪಿರವಿರ್ 200mg ಕ್ಯಾಪ್ಸುಲ್‌ಗಳನ್ನು ಶೀಘ್ರದಲ್ಲೇ ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಡಾ. ರೆಡ್ಡೀಸ್ ಹೇಳಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ! ಇಂದು ಸಿಎಂ ಸಭೆ ಬಳಿಗೆ ಕಠಿಣ ನಿಯಮ ಜಾರಿ ಸಾಧ್ಯತೆ