AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಗಮನಿಸಿ: ಬಿಬಿಎಂಪಿ ಎಂಟು ವಲಯಗಳ ಕೊವಿಡ್ ಸಹಾಯವಾಣಿ ಸಂಖ್ಯೆ ಹೀಗಿದೆ

ನಗರದ ಎಲ್ಲಾ ನಾಗರೀಕರು ಕೊವಿಡ್​ಗೆ ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲು, ಲಸಿಕೆ ಪಡೆಯುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು.

ಇಲ್ಲಿ ಗಮನಿಸಿ: ಬಿಬಿಎಂಪಿ ಎಂಟು ವಲಯಗಳ ಕೊವಿಡ್ ಸಹಾಯವಾಣಿ ಸಂಖ್ಯೆ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on:Jan 04, 2022 | 1:20 PM

Share

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ಆತಂಕ ಹಿನ್ನೆಲೆ ಇಂದು (ಜ.4) ಸರ್ಕಾರ ಮಹತ್ವದ ಸಭೆ ನಡೆಸುತ್ತದೆ. ಸಭೆಯಲ್ಲಿ ಕಠಿಣ ನಿಯಮಗಳ ಜಾರಿ ಬಗ್ಗೆ ಚರ್ಚಿಸಲಾಗುವುದು. ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಕೊವಿಡ್ಗೆ ಸಂಬಂಧಿಸಿದ ಮಾಹಿತಿಗಾಗಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದೆ. ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದ್ದು, ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಹೆಲ್ಪ್​ಲೈನ್​ ನಂಬರ್​ಗಳನ್ನ ತಿಳಿಸಿದೆ.

ನಗರದ ಎಲ್ಲಾ ನಾಗರೀಕರು ಕೊವಿಡ್​ಗೆ ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲು, ಲಸಿಕೆ ಪಡೆಯುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು. ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಅಂತ ಬಿಬಿಎಂಪಿ ತಿಳಿಸಿದೆ.

ಎಂಟು ವಲಗಳ ಕೊವಿಡ್ ಸಹಾಯವಾಣಿ ಬೊಮ್ಮನಹಳ್ಳಿ- 8884666670 ದಾಸರಹಳ್ಳಿ- 94806 83132 ಪೂರ್ವ- 9480685163 ಮಹದೇವಪುರ- 08023010102 ಆರ್.ಆರ್.ನಗರ- 08028601050. ದಕ್ಷಿಣ- 8431816718 ಪಶ್ಚಿಮ- 08068248454 ಯಲಹಂಕ- 9480685961

ಸಭೆಯಲ್ಲಿ ಬಿಬಿಎಂಪಿ ಪ್ರಸ್ತಾವನೆ ಸಾಧ್ಯತೆ ಸಭೆಯಲ್ಲಿ ಕೆಲವು ಷರತ್ತುಗಳ ಜಾರಿ ಬಗ್ಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ. ಸಭೆ, ಸಮಾರಂಭ, ಱಲಿಗಳಿಗೆ ಜನರ ಸೀಮಿತಕ್ಕೆ ಸಲಹೆ ನೀಡಲಾಗುತ್ತದೆ. ರೆಸ್ಟೋರೆಂಟ್, ಪಬ್, ಬಾರ್, ಥಿಯೇಟರ್‌ಗೆ 50:50 ನಿಯಮ ಜಾರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇನ್ನು ಜನವರಿ 7ರ ಬಳಿಕವೂ ನೈಟ್‌ ಕರ್ಫ್ಯೂ ವಿಸ್ತರಣೆಗೆ ಮನವಿ ಮಾಡಬಹುದು. ದೇವಸ್ಥಾನ, ಬಸ್, ಮೆಟ್ರೋ, ಆಟೋ, ಓಲಾ, ಉಬರ್, ಸೂಪರ್ ಮಾರ್ಕೆಟ್‌ ಎಂಟ್ರಿಗೆ ಲಸಿಕೆ ಕಡ್ಡಾಯಗೊಳಿಸಲು ಸಲಹೆ ನೀಡುವ ಮೂಲಕ ಬಿಬಿಎಂಪಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲಿದೆ.

ಪತ್ರಿಕಾ ಪ್ರಕಟಣೆ

ಇದನ್ನೂ ಓದಿ

Apple Inc Market Cap: 3 ಟ್ರಿಲಿಯನ್ ಯುಎಸ್​ಡಿ ಮಾರುಕಟ್ಟೆ ಬಂಡವಾಳ ಮೌಲ್ಯ ಮುಟ್ಟಿದ ಮೊದಲ ಕಂಪೆನಿ ಆಪಲ್

Health Tips; ಒಮಿಕ್ರಾನ್ ವಿರುದ್ಧ ಹೋರಾಡಲು ಈ ಸರಳ ಮಾರ್ಗಗಳನ್ನು ಅನುಸರಿಸಿ

Published On - 1:16 pm, Tue, 4 January 22