ಟಿವಿ9 ಧ್ಯೇಯವಾಕ್ಯ ‘ಉತ್ತಮ ಸಮಾಜಕ್ಕಾಗಿ’ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ- ಸಿಇಒ ಬರುಣ್ ದಾಸ್
ಟಿವಿ9 ಕರ್ನಾಟಕದ ಬಗ್ಗೆ ಕನ್ನಡಿಗರ ಪ್ರೀತಿ ಮತ್ತು ಗೌರವ ಏನು ಎಂಬುದನ್ನು ನಾನು ಬಲ್ಲೆನು. ಒಂದು ಸಂಸ್ಥೆಯಾಗಿ ಅದನ್ನು ನಾವು ಚೆನ್ನಾಗಿ ಬಲ್ಲೆವು. ಈ ಜವಾಬ್ದಾರಿಯನ್ನು ಪೂರೈಸಲು ನಾವು ಪ್ರತಿ ದಿನ ಏಳುವಾಗ ಅಪಾರ ಜವಾಬ್ದಾರಿಯನ್ನು ಮನಗಂಡು ಮುಂದಿನ ಹೆಜ್ಜೆ ಹಾಕುತ್ತೇವೆ - ಟಿವಿ9 ನೆಟ್ವರ್ಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುಣ್ ದಾಸ್
ಬೆಂಗಳೂರು: ಟಿವಿ9 ಕರ್ನಾಟಕ ನವನಕ್ಷತ್ರ ಸನ್ಮಾನ 2021 ಕಾರ್ಯಕ್ರಮದಲ್ಲಿ ಟಿವಿ9 ನೆಟ್ವರ್ಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬರುಣ್ ದಾಸ್ ಅವರು ಟಿವಿ9 ನಡೆದುಬಂದ ಹಾದಿ ಮತ್ತು ಅದರ ರೂಪುರೇಷೆ ಬಗ್ಗೆ ಮಾತನಾಡಿದರು. ಟಿವಿ9 ಕನ್ನಡ ಇದೀಗತಾನೇ ತನ್ನ 15 ವಸಂತಗಳನ್ನು ಪೂರೈಸಿದೆ. ಆದರೆ ಕರ್ನಾಟಕದ ಏಳು ಕೋಟಿ ಜನತೆಯ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳು ಏನು ಎಂಬುದರ ಬಗ್ಗೆ ನಾವು ಇಂದಿಗೂ ಪ್ರಜ್ಞಾ ಪೂರ್ವಕವಾಗಿದ್ದೇವೆ. ಟಿವಿ9 ಕರ್ನಾಟಕದ ಬಗ್ಗೆ ಕನ್ನಡಿಗರ ಪ್ರೀತಿ ಮತ್ತು ಗೌರವ ಏನು ಎಂಬುದನ್ನು ನಾನು ಬಲ್ಲೆನು. ಒಂದು ಸಂಸ್ಥೆಯಾಗಿ ಅದನ್ನು ನಾವು ಚೆನ್ನಾಗಿ ಬಲ್ಲೆವು. ಈ ಜವಾಬ್ದಾರಿಯನ್ನು ಪೂರೈಸಲು ನಾವು ಪ್ರತಿ ದಿನ ಏಳುವಾಗ ಅಪಾರ ಜವಾಬ್ದಾರಿಯನ್ನು ಮನಗಂಡು ಮುಂದಿನ ಹೆಜ್ಜೆ ಹಾಕುತ್ತೇವೆ ಎಂದು ಹೇಳಿದರು.
1903ರಲ್ಲಿ ಮಹಾತ್ಮ ಗಾಂಧಿ ಅವರು ಒಂದು ನೈತಿಕ ಪಾಠ ಹೇಳಿಕೊಟ್ಟರು. ಅದು ಮಾಧ್ಯಮದ ನೈತಿಕತೆಯ ಬಗೆಗಿನ ಪಾಠವಾಗಿತ್ತು. ಪತ್ರಿಕೋದ್ಯಮದ ಏಕೈಕ ಧ್ಯೇಯೋದ್ದೇಶ ಸೇವೆಯಾಗಿಬೇಕು. ಅದರ ಅರ್ಥ, ಪತ್ರಿಕೋದ್ಯಮದ ಬಗೆಗಿನ ಅವರ ಕಾಳಜಿ ಏನು ಆಗಿತ್ತೆಂದರೆ ಸುದ್ದಿ ಮಾಧ್ಯಮದ ಧ್ಯೇಯೋದ್ದೇಶವು ನ್ಯೂಸ್ ಬ್ಯುಸಿನೆಸ್ಗಿಂತ ದೊಡ್ಡದಾಗಿರಬೇಕು; ಅದು ಸೇವೆಯಾಗಿರಬೇಕು. ಗಾಂಧೀಜಿ ಅವರ ಆಶೋತ್ತರಕ್ಕೆ ತಕ್ಕಂತೆ ಟಿವಿ9 ನೆಟ್ವರ್ಕ್ ಸಂಸ್ಥೆಯವರು ಪತ್ರಿಕೋದ್ಯಮವೆಂದರೆ ದೇಶ ಸೇವೆ ಎಂದು ಬಗೆದಿದ್ದೇವೆ. ಟಿವಿ9 ಕರ್ನಾಟಕದ ಧ್ಯೇಯವಾಕ್ಯದಲ್ಲಿದ್ದಂತೆ ಉತ್ತಮ ಸಮಾಜಕ್ಕಾಗಿ ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದೇವೆ ಎಂದು ಸಿಇಒ ಬರುಣ್ ದಾಸ್ ಹೇಳಿದರು.
ದೇಶದಲ್ಲಿ ನಾವು 6 ಸುದ್ದಿ ಚಾನೆಲ್ಗಳನ್ನು ಹೊಂದಿದ್ದೇವೆ. ಈ ಎಲ್ಲಾ ಚಾನೆಲ್ಗಳು ತಮ್ಮ ತಮ್ಮ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿವೆ. ಇದರ ಜೊತೆಗೆ ಡಿಜಿಟಲ್ ವೇದಿಕೆಗಳೂ ಇವೆ. ಅವು ಪ್ರತಿ ತಿಂಗಳು 100 ಮಿಲಿಯನ್ ವಿಸಿಟರ್ಸ್ ಅನ್ನು ಹೊಂದಿದೆ. ನಾನು ವ್ಯಕ್ತಿಗತವಾಗಿ ದೇಶದಾದ್ಯಂತ ಸಂಚರಿಸುತ್ತಿರುತ್ತೇನೆ. ನಾನು ನನ್ನ ಸ್ವಂತ ರಾಜ್ಯವಾದ ಪಶ್ಚಿಮ ಬಂಗಾಳದಿಂದ 35 ವರ್ಷಗಳಿಂದ ಹೊರಗುಳಿದಿದ್ದೇನೆ. ಕರ್ನಾಟಕ ಅಂದರೆ ಅದಕ್ಕೆ ನಾನು ವಿಶೇಷ ಸ್ಥಾನ ನೀಡುತ್ತೇನೆ. ಕರ್ನಾಟಕದ ಜನತೆಗೆ ಎಲ್ಲದರಲ್ಲೂ ಉತ್ಕೃಷ್ಟತೆ ಸಾಧಿಸುವುದು ಅಭ್ಯಾಸವಾಗಿಬಿಟ್ಟಿದೆ. ಅದುಬಿಟ್ಟರೆ ಅವರು ತಮ್ಮ ಪ್ರಾದೇಶಿಕತೆಯ ಹಣೆಪಟ್ಟಿಗೆ ಜೋತುಬೀಳುವುದಿಲ್ಲ. ಅವರು ದೇಶದ ಸಂಸ್ಕೃತಿ ಮತ್ತು ನೈತಿಕತೆಯ ಜೊತೆ ಹಾಸುಹೊಕ್ಕಿದ್ದಾರೆ. ಪ್ರತ್ಯೇಕತೆಯ ಭಾವದಿಂದ ಕನ್ನಡಿಗರು ದೂರ ಬಹುದೂರ. ಇದರಿಂದ ದೇಶದ ಗೌರವ ಹೆಚ್ಚಾಗಿದೆ ಎಂದು ಪ್ರಶಂಶಿಸಿದರು.
ಇಂದು ಇಲ್ಲಿ ಸೇರಿರುವ ನವನಕ್ಷತ್ರಗಳನ್ನು ಕೇವಲ ಪ್ರಶಸ್ತಿಯ ಮೌಲ್ಯಮಾಪನದಿಂದ ನೋಡಲಾಗದು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಅತಿ ದೊಡ್ಡ ನ್ಯೂಸ್ ನೆಟ್ವರ್ಕ್ ಆಗಿ ಟಿವಿ9 ಈ ನವನಕ್ಷತ್ರಗಳನ್ನು ಗುರುತಿಸಿ, ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇಂತಹ ನಕ್ಷತ್ರಗಳ ಸನ್ಮಾನದಲ್ಲಿ ಭಾಗಿಯಾಗಿರುವ ನಿಮಗೆಲ್ಲಾ ಆತ್ಮೀಯ ಸ್ವಾಗತ ಎಂದು ಸಿಇಒ ಬರುಣ್ ದಾಸ್ ಹೇಳಿದರು.
ಟಿವಿ9 ನೆಟ್ವರ್ಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುಣ್ ದಾಸ್ ಭಾಷಣದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
Also Read: ಟಿವಿ9 ಮುಂಚೂಣಿ ಸ್ಥಾನದಲ್ಲಿ ಇದೆ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬೇಕಿದೆ- ತುಮಕೂರು ಸಿದ್ದಗಂಗಾ ಶ್ರೀಗಳ ಆಶೀರ್ವಚನ
Published On - 1:17 pm, Tue, 4 January 22