AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ದೇವಾಲಯಗಳಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಇದೆ, ಖಾಸಗೀಕರಣ ಬೇಡ ಎಂದು ಸಿದ್ದರಾಮಯ್ಯಗೆ ಮೊರೆ

ರಾಜ್ಯದ ದೇವಾಲಯಗಳಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಇದೆ. ರಾಜಮಹಾರಾಜರು ಕೊಟ್ಟ ಕೋಟ್ಯಂತರ ಮೌಲ್ಯದ ಆಸ್ತಿಯಿದೆ. ಈ ಹಿನ್ನೆಲೆಯಲ್ಲಿ ಹಿಂದೂ ದೇಗುಲಗಳನ್ನು ಖಾಸಗೀಕರಣ ಮಾಡದಂತೆ ಸಂಘದ ಸದಸ್ಯರು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು.

ಹಿಂದೂ ದೇವಾಲಯಗಳಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಇದೆ, ಖಾಸಗೀಕರಣ ಬೇಡ ಎಂದು ಸಿದ್ದರಾಮಯ್ಯಗೆ ಮೊರೆ
ವಿಪಕ್ಷ ನಾಯಕ ಸಿದ್ದರಾಮಯ್ಯ
TV9 Web
| Updated By: ಸಾಧು ಶ್ರೀನಾಥ್​|

Updated on:Jan 04, 2022 | 12:48 PM

Share

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ರಾಜ್ಯದಲ್ಲಿನ ದೇವಾಲಯಗಳನ್ನ ಸರ್ಕಾರಿ ಸ್ವಾಮ್ಯದಿಂದ ಮುಕ್ತಗೊಳಿಸುವ ಬಗ್ಗೆ ಮಾತನಾಡಿದ್ದರು. ಆದರೆ ಇದಕ್ಕೆ ಹಿಂದೂ ದೇವಾಲಯಗಳ ಒಕ್ಕೂಟದಿಂದ ವಿರೋಧ ವ್ಯಕ್ತವಾಗಿದೆ. ಸರ್ಕಾರದಿಂದ ಹಿಂದೂ ದೇಗುಲಗಳ ಖಾಸಗೀಕರಣ ವಿಚಾರವನ್ನು ವಿರೋಧಿಸಿ ಹಿಂದೂ ದೇವಾಲಯಗಳ ಒಕ್ಕೂಟದ ಅರ್ಚಕ ಆಗಮಿಕ ಸಂಘದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಬೆಂಗೂಳೂರಿನಲ್ಲಿ ಭೇಟಿ ಮಾಡಿ, ಚರ್ಚೆ ನಡೆಸಿದರು. ಸರ್ಕಾರಿ ಸ್ವಾಮ್ಯದಿಂದ ಕೈಬಿಡದಂತೆ ಒತ್ತಡ ಹೇರುವಂತೆ ಸಂಘದವರು ಮನವಿ ಮಾಡಿದರು.

ರಾಜ್ಯದ ದೇವಾಲಯಗಳಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಇದೆ. ರಾಜಮಹಾರಾಜರು ಕೊಟ್ಟ ಕೋಟ್ಯಂತರ ಮೌಲ್ಯದ ಆಸ್ತಿಯಿದೆ. ಈ ಹಿನ್ನೆಲೆಯಲ್ಲಿ ಹಿಂದೂ ದೇಗುಲಗಳನ್ನು ಖಾಸಗೀಕರಣ ಮಾಡದಂತೆ ಸಂಘದ ಸದಸ್ಯರು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದರು.

ಹಿಂದೂ ದೇವಾಲಯಗಳ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿರುವುದೇನು? ಇತ್ತೀಚೆಗೆ ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಳ ಅಧಿವೇಶನ ಮುಗಿಯುತ್ತಿದ್ದಂತೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಬೇರೆ ಸಮುದಾಯದ ಪ್ರಾರ್ಥನಾ ಸ್ಥಳಕ್ಕೆ ಸ್ವತಂತ್ರವಿರುವ ರೀತಿ ಹಿಂದೂ ದೇವಾಲಯಗಳನ್ನೂ ಸ್ವತಂತ್ರ ಮಾಡುತ್ತೇವೆ. ಹಿಂದೂ ದೇಗುಲಗಳನ್ನು ಕಾನೂನಿನಿಂದ ಮುಕ್ತ ಮಾಡುತ್ತೇವೆ. ಸರ್ವ ಸ್ವತಂತ್ರವಾಗಿ ನಿರ್ವಹಣೆಗೆ ಅವಕಾಶ ಮಾಡಿಕೊಡ್ತೇವೆ. ಇವುಗಳಿಗೆ ಸರ್ಕಾರದ ನಿಯಂತ್ರಣ ಬಿಟ್ಟರೆ ಏನೂ ಇರಲ್ಲ. ಬಜೆಟ್ ಅಧಿವೇಶನದೊಳಗೆ ಇದಕ್ಕೆ ಕಾನೂನು ಸ್ವರೂಪ ನೀಡಲಾಗುತ್ತದೆ ಎಂದು ಹೇಳಿದ್ದರು.

ದೇಗುಲಗಳನ್ನು ಕಾನೂನಿನ ಕಟ್ಟುಪಾಡುಗಳಿಂದ ಮುಕ್ತಗೊಳಿಸ್ತೇವೆ. ಮಂದಿರಗಳ ವಿಚಾರ ಬಂದಾಗ ಸರ್ಕಾರ 1 ಕಾನೂನು ತಂದಿದೆ. ಇದು ನಮ್ಮ ಬದ್ಧತೆ, ತಕ್ಷಣ ಸ್ಪಂದಿಸುವುದು ಸರ್ಕಾರದ ಬದ್ಧತೆ. ದೇವಸ್ಥಾನದ ಹಣ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಕೆ ಆಗಬೇಕು. ನಮ್ಮ ಅಜೆಂಡಾ ಸ್ಪಷ್ಟವಾಗಿದೆ ಅದನ್ನು ಜಾರಿಗೆ ತರುತ್ತೇವೆ. ನಮ್ಮ ಸರ್ಕಾರ ಅಧಿಕಾರದಲ್ಲಿರುವಾಗಲೇ ಅದನ್ನು ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Hindu ದೇವಾಲಯಗಳ ಒಕ್ಕೂಟದಿಂದ ಸಿದ್ದರಾಮಯ್ಯ ಭೇಟಿ, ಮಾಧ್ಯಮದವರ ಪ್ರಶ್ನೆಗೆ ನೋ ರಿಯಾಕ್ಷನ್|Tv9kannada

ಇದನ್ನೂ ಓದಿ: ರಾಮನಗರಕ್ಕೆ ಬಂದು ಗಂಡಸ್ತನದ ಮಾತಾಡ್ತೀರಾ, ಇದು ರಾಮನಗರದ ಜನತೆಗೇ ಹಾಕಿದ ಸವಾಲು ಗೊತ್ತಾ? ಡಿಕೆ ಸುರೇಶ್ ಗುಡುಗು

Published On - 12:36 pm, Tue, 4 January 22