ರಾಮನಗರಕ್ಕೆ ಬಂದು ಗಂಡಸ್ತನದ ಮಾತಾಡ್ತೀರಾ, ಇದು ರಾಮನಗರದ ಜನತೆಗೇ ಹಾಕಿದ ಸವಾಲು ಗೊತ್ತಾ? ಡಿಕೆ ಸುರೇಶ್ ಗುಡುಗು
ರಾಮನಗರ ಜಿಲ್ಲೆಯ ಜನರ ಗೌರವ ಉಳಿಸಬೇಕಾದದ್ದು ನನ್ನ ಜವಾಬ್ದಾರಿ ಹೀಗಾಗಿ ಬಿಜೆಪಿ ಮಾತನಾಡುತ್ತಿದ್ದದನ್ನು ನಿಲ್ಲಿಸಲು ನಾನು ಪ್ರಯತ್ನಿಸಿದೆ. ಇಂದು ನನ್ನ ವಿರುದ್ಧ ಪ್ರತಿಭಟನೆ ಮಾಡ್ತಿರೋ ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದಿಸುವೆ. ಮಾದ್ಯಮಗಳ ವ್ಯಾಖ್ಯಾನ ನೋಡಿದ್ದೇನೆ.
ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದ ವೇದಿಕೆ ಮೇಲೆಯೇ ಸಂಸದ ಡಿಕೆ ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಮಧ್ಯೆ ನಡೆದ ಕಿತ್ತಾಟ ತುಂಬಿದ ವೇದಿಕೆಯಲ್ಲೇ ರಾಜಕೀಯ ರಣರಂಗ ಸೃಷ್ಟಿಸಿತ್ತು. ರಾಮನಗರದಲ್ಲಿ ನಿನ್ನೆ ನಡೆದಿದ್ದು ಗಲಾಟೆಯಲ್ಲಿ ನಮ್ಮದೇ ಸರ್ಕಾರ.. ನಾನೇ ಸಚಿವ ಅಂತಾ ಅಶ್ವತ್ಥ್ ನಾರಾಯಣ್, ಇದು ನಮ್ ಜಿಲ್ಲೆ, ನನ್ ಕೋಟೆ ಅಂತಾ ಸಂಸದ ಡಿಕೆ ಸುರೇಶ್ ಎರಗಿದ್ರು. ಸದ್ಯ ಈ ಗಲಾಟೆ ಸಂಬಂಧ ಡಿಕೆ ಸುರೇಶ್ ಮಾತನಾಡಿದ್ದು ಸ್ಪಷ್ಟನೆ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಜನರ ಗೌರವ ಉಳಿಸಬೇಕಾದದ್ದು ನನ್ನ ಜವಾಬ್ದಾರಿ ಹೀಗಾಗಿ ಬಿಜೆಪಿ ಮಾತನಾಡುತ್ತಿದ್ದದನ್ನು ನಿಲ್ಲಿಸಲು ನಾನು ಪ್ರಯತ್ನಿಸಿದೆ. ಇಂದು ನನ್ನ ವಿರುದ್ಧ ಪ್ರತಿಭಟನೆ ಮಾಡ್ತಿರೋ ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದಿಸುವೆ. ಮಾದ್ಯಮಗಳ ವ್ಯಾಖ್ಯಾನ ನೋಡಿದ್ದೇನೆ. ಸಭೆಯನ್ನು ಹೊರತು ಪಡಿಸಿ ನಾವು ಬಿಜೆಪಿಯವರು, ನಾವು ಮಾಡೋದೇ ಹೀಗೆ, ಗಂಡ್ಸಿದ್ರೆ ಬನ್ನಿ ಅಂತ ನನಗೆ ಸವಾಲ್ ಹಾಕಿದಾಗ ಅದು ನನಗೆ ಹಾಕಿದ ಸವಾಲ್ ಅಲ್ಲ, ರಾಮನಗರದ ಜನರಿಗೆ ಹಾಕಿದ ಸವಾಲ್, ಕೆಂಪೇಗೌಡರು, ಅಂಬೇಡ್ಕರ್ಗೆ ಮಾಡಿದ ಅವಮಾನ.
ಗಂಡಸ್ತನ ಬಗ್ಗೆ ಚರ್ಚೆ ಮಾಡಲು ಸಮಯ ನಿಗದಿ ಮಾಡಿ ಇಲ್ಲೇನಿದ್ದರೂ ಸಂಸದ ಡಿಕೆ ಸುರೇಶ್ ಕೇವಲ ನೆಪ ಮಾತ್ರ. ರಾಮನಗರದ ಜನರ ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ್ದಾರೆ. ನಿನ್ನೆ ಸಿಎಂ ಸಭೆಯಲ್ಲಿ ಸಚಿವ ಅಶ್ವತ್ಥ ನಾರಾಯಣಗೆ ಸ್ವತಃ ಸಿಎಂ ನೀವು ಭಾಷಣ ಮಾಡಿದ್ದು ಸರಿ ಇಲ್ಲ, ಸಾಕು ಅಂತ ಹೇಳಿದರೂ ಸಹ ಕರ್ನಾಟಕದ ಎಲ್ಲಾ ಯುವಕರಿಗೆ ಅವಮಾನ ಮಾಡೋ ಕೆಲಸ ಸಚಿವರು ಮಾಡಿದಾರೆ. ರಾಮನಗರ ಜಿಲ್ಲೆಗೆ ಬಂದು ಗಂಡಸ್ತನದ ಮಾತನಾಡಿದ್ದಾರೆ. ಗಂಡಸ್ತನ ಬಗ್ಗೆ ಚರ್ಚೆ ಮಾಡಲು ಸಮಯ ನಿಗದಿ ಮಾಡಿ ಅಂತ ಸಿಎಂ ಎದುರೇ ಹೇಳಿದ್ದೇನೆ. ಗಂಡಸ್ತನದ ಮಾತು ಏಕೆ ಬರುತ್ತೆ? ನಾನು ಪಲಾಯನ ಮಾಡಲ್ಲ. ಬಿಜೆಪಿ ರಾಜ್ಯಾಧ್ಯಕ್ಷರೇ ಹೀಗೆ ಮಾತಾಡೋದು ಸಂಸ್ಕೃತಿಯೇ ಅಶ್ವತ್ಥ ನಾರಾಯಣ ಅವರ ಸ್ಟೈಲು ಧಿಮಾಕನ್ನ ಅಶೋಕ್ ಅವರಿಗೆ ತೋರಿಸಿ.
ಅಶೋಕರನ್ನ ಅದೇನೋ ಸಾಮ್ರಾಟ್ ಅಂತ ಕರೀತಾರಂತೆ, ನಾನ್ ಯಾವತ್ತೂ ಹಾಗೇ ಕರೆದಿಲ್ಲ. ಪ್ರಚೋದನೆ ಮತ್ತು ಭಾವನಾತ್ಮಕ ವಿಚಾರಗಳು ಬಿಜೆಪಿ ಅಜೆಂಡಾ. ಧರ್ಮ ಸಂಸ್ಕೃತಿ ಇದ್ಯಾವುದೂ ಅವರಲ್ಲಿ ಇಲ್ಲ. ಪ್ರಚೋದನೆ ಮತ್ತು ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ದೇಶವನ್ನು ಒಡೆದು ಆಳುವ ಕೆಲಸ ಮಾಡ್ತಿದ್ದಾರೆ. ಯುವಕರನ್ನು ಕೆರಳಿಸುವ ಕೆಲಸ ಮಾಡ್ತಿದ್ದಾರೆ. ಇದಕ್ಕೆ ಅಂತ್ಯ ಅತೀ ಶೀಘ್ರದಲ್ಲೇ ಆಗುತ್ತೆ. ಕುಮಾರಸ್ವಾಮಿ ಮಾಜಿ ಸಿಎಂ, ಅವರ ಬಗ್ಗೆ ಮಾತಾಡಬೇಕಿಲ್ಲ. ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ ಎಂದು ಡಿಕೆ ಸುರೇಶ್ ಆಕ್ರೋಶ ಹೊರ ಹಾಕಿದ್ದಾರೆ.
ಸುರೇಶ್ ವಿರುದ್ದ ಅಲ್ಲ, ಅಶ್ವಥ್ ನಾರಾಯಣ ವಿರುದ್ದ ಪ್ರತಿಭಟನೆ ಮಾಡಬೇಕು ಇನ್ನು ಡಿಕೆ ಸುರೇಶ್ ವಿರುದ್ದ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಮಾತನಾಡಿದ್ದಾರೆ. ಒಬ್ಬ ಮಂತ್ರಿ ಆಡೋ ಮಾತಾ ಇದು. ಸಿಎಂ ಹಾಗೂ ಇತರ ಮಂತ್ರಿಗಳು ವೇದಿಕೆ ಮೇಲೆ ಇದ್ರು. ಸಿಎಂ ಬೊಮ್ಮಾಯಿ ಇಂತವರನ್ನ ಕಿತ್ತು ಬಿಸಾಡ ಬೇಕು. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ? ಎಲ್ಲಾ ಗೂಂಡಾಗಳೇ ಇರುವುದು ಬಿಜೆಪಿಯಲ್ಲಿ. ಬೊಮ್ಮಾಯಿಗೆ ಅಶ್ವಥ್ ನಾರಾಯಣ್ ವಿರುದ್ದ ಮಾತನಾಡಿದ್ದು ಸರಿ ಅನಿಸುತ್ತಾ. ಸುರೇಶ್ ವಿರುದ್ದ ಅಲ್ಲ, ಅಶ್ವಥ್ ನಾರಾಯಣ ವಿರುದ್ದ ಪ್ರತಿಭಟನೆ ಮಾಡಬೇಕು. ಅಶ್ವಥ್ ನಾರಾಯಣ ಏಕವಚನದಲ್ಲಿ ಮಾತನಾಡಿದ್ರು. ಏಕೆ ಅವರು ಮಾತನಾಡಬೇಕಾಗಿತ್ತು. ಹಾಗೇ ಮಾತನಾಡಿದರೆ ಸುಮ್ಮನೆ ಇರ್ತರಾ. ಚುನಾವಣೆಯಲ್ಲಿ ಅವರಿಗೆ ಮಂಗಳಾರತಿ ಆಯ್ತಲ್ಲ. 2023ರ ಚುನಾವಣೆಯಲ್ಲಿ ಎಲ್ಲಾ ಗೊತ್ತಾಗುತ್ತೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: ರಾಮನಗರ: ಸಿಎಂ ಸಮ್ಮುಖದಲ್ಲೇ ಅಶ್ವತ್ಥ ನಾರಾಯಣ, ಡಿಕೆ ಸುರೇಶ್ ವಾಕ್ಸಮರ; ವೇದಿಕೆಯಲ್ಲೇ ಧರಣಿ ನಡೆಸಿದ ಕಾಂಗ್ರೆಸ್!
Published On - 12:40 pm, Tue, 4 January 22