ಸಿಎಂ ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಾಯಕರ ಗಲಾಟೆ; ವರದಿ ತರಿಸಿಕೊಂಡ ಆರಗ ಜ್ಞಾನೇಂದ್ರ
ಈ ರೀತಿಯ ಘಟನೆಗಳು ಜಿಲ್ಲೆಗೆ ಶೋಭೆ ತರಲ್ಲ. ಇದು ದುರದೃಷ್ಟಕರ. ಯಾರೆಲ್ಲ ಜವಾಬ್ದಾರಿ ಇದ್ದಾರೋ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ರಾಮನಗರ: ಇಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ವರದಿ ಕೇಳಿದ್ದಾರೆ. ರಾಮನಗರ ಜಿಲ್ಲಾ ಪೊಲೀಸರಿಂದ ಗೃಹಸಚಿವರು ವರದಿ ಕೇಳಿದ್ದಾರೆ. ರಾಮನಗರದಲ್ಲಿ ಡಿಕೆ ಸುರೇಶ್ ಹಾಗೂ ಅಶ್ವತ್ಥ್ ನಾರಾಯಣ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲಾ ಡಿಕೆ ಶಿವಕುಮಾರ್ಗೆ ಗೊತ್ತಿರುವ ವಿಚಾರ. ಈ ಸಂಬಂಧ ನಿನ್ನೆ ಒಂದು ವಾರದಿಂದ ಸಭೆ ನಡೆದಿದೆ. ಈ ಎರಡು ಪ್ರತಿಮೆ ಉದ್ಘಾಟನೆ ಆಗಬೇಕು ಅಂತಾ ಇದೆ. ಆಮಂತ್ರಣ ಕೊಟ್ಟಿಲ್ಲ ಅಂತಲ್ಲ. ಗಲಾಟೆ ಯಾರು ಪ್ರಾರಂಭ ಮಾಡಿದ್ದಾರೆ ಅಂತಾ ಮಾಧ್ಯಮವೇ ಸಾಕ್ಷಿ. ಇದಕ್ಕೆಲ್ಲ ಆರ್ಎಸ್ಎಸ್ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಇದು ನಿಜವಾಗಿಯೂ ದುರದೃಷ್ಟಕರ. ಮುಖ್ಯಮಂತ್ರಿ ಹಾಗೂ ಸಚಿವರು ಬಂದಾಗ, ಒಳ್ಳೆಯ ಕೆಲಸ ಆಗಿರುವಾಗ ಈ ರೀತಿಯ ಘಟನೆಗಳು ಜಿಲ್ಲೆಗೆ ಶೋಭೆ ತರಲ್ಲ. ಇದು ದುರದೃಷ್ಟಕರ. ಯಾರೆಲ್ಲ ಜವಾಬ್ದಾರಿ ಇದ್ದಾರೋ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಮನೆಗೆ ಭದ್ರತೆ ವೇದಿಕೆಯಲ್ಲಿ ಡಿ.ಕೆ.ಸುರೇಶ್, ಅಶ್ವತ್ಥ್ ನಾರಾಯಣ ಜಟಾಪಟಿ ಘಟನೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಂಸದ ಡಿ.ಕೆ.ಸುರೇಶ್ ಮನೆಗೆ ಭದ್ರತೆ ನೀಡಲಾಗಿದೆ. ಬೆಂಗಳೂರಿನ ಸದಾಶಿವನಗರದ ಡಿ.ಕೆ.ಸುರೇಶ್ ಮನೆಗೆ ಭದ್ರತೆ ಒದಗಿಸಲಾಗಿದೆ. ನಿವಾಸದ ಬಳಿ ಬ್ಯಾರಿಕೇಡ್ ಅಳವಡಿಸುತ್ತಿರುವ ಪೊಲೀಸರು, ಬಿಜೆಪಿ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಹಿನ್ನೆಲೆ ಭದ್ರತೆ ನೀಡಿದ್ದಾರೆ.
ಮಾಗಡಿಯನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇವೆ: ಸಿಎಂ ಬೊಮ್ಮಾಯಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದಾರೆ. ಶೀಘ್ರವೇ ನನೆಗುದಿಗೆ ಬಿದ್ದಿ ಯೋಜನೆಗಳು ಪೂರ್ಣವಾಗಲಿವೆ. ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುತ್ತೇವೆ. 150 ಐಟಿಐಗಳನ್ನ ಉನ್ನತೀಕರಣಮಾಡಲಾಗುತ್ತಿದೆ. ಉದ್ಯೋಗ ಕ್ಷೇತ್ರಕ್ಕೆ ಯುವಕರನ್ನ ತಯಾರು ಮಾಡುವ ಕೆಲಸ ಆಗಲಿದೆ ಎಂದು ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದಾರೆ.
ಮಾಗಡಿಯನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇವೆ. ಈ ಭಾಗದಲ್ಲೂ ಇಂಡಸ್ಟ್ರಿ ಬಂದು ಉದ್ಯೋಗ ಸಿಗಬೇಕು. ಆ ಕೆಲಸವನ್ನ ನಮ್ಮ ಸರ್ಕಾರ ಮಾಡಲಿದೆ. ಹೆಚ್ಚು ಉದ್ಯೋಗ ಕೊಡುವ ಕೈಗಾರಿಕಾಗಳಿಗೆ ಇನ್ಸೆಂಟಿವ್ ಕೊಡುವ ನೀತಿಯನ್ನ ನಮ್ಮ ಸರ್ಕಾರ ತಂದಿದೆ. ಇದರಿಂದ ರಾಜ್ಯದ ಜಿಡಿಪಿ ಕೂಡ ಹೆಚ್ಚಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೇಕೆದಾಟು ಯೋಜನೆಗೆ ಪಾದಯಾತ್ರೆ ರಾಜಕೀಯ ಪ್ರೇರಿತ ಮೇಕೆದಾಟು ಯೋಜನೆಗೆ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಚಿಕ್ಕಕಲ್ಯಾ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಕೇಂದ್ರದ ಪರಿಸರ ಇಲಾಖೆ ಅನುಮತಿ ಪಡೆಯಲು ಪ್ರಯತ್ನ ನಡೆಸಲಾಗಿದೆ. ನೀರಾವರಿ ಯೋಜನೆಗಳ ವಿಚಾರದಲ್ಲಿ ಪಕ್ಷಾತೀತವಾಗಿರಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ; ಚುನಾವಣೆಗೆ ತಿಂಗಳಿರುವಾಗ ರಾಜಕಾರಣ ಮಾಡೋಣ: ಸಿಎಂ ಬೊಮ್ಮಾಯಿ
ಇದನ್ನೂ ಓದಿ: ರಾಮನಗರ: ವೇದಿಕೆಯಲ್ಲೇ ಬಿಜೆಪಿ- ಕಾಂಗ್ರೆಸ್ ನಾಯಕರ ಜಟಾಪಟಿ; ಅಶ್ವತ್ಥ ನಾರಾಯಣ ಫ್ಲೆಕ್ಸ್ ಹರಿದು ಆಕ್ರೋಶ!
Published On - 7:09 pm, Mon, 3 January 22