ರಾಮನಗರ: ಸಿಎಂ ಸಮ್ಮುಖದಲ್ಲೇ ಅಶ್ವತ್ಥ ನಾರಾಯಣ, ಡಿಕೆ ಸುರೇಶ್ ವಾಕ್ಸಮರ; ವೇದಿಕೆಯಲ್ಲೇ ಧರಣಿ ನಡೆಸಿದ ಕಾಂಗ್ರೆಸ್!
ಜಿಲ್ಲೆಯನ್ನು ಅಭಿವೃದ್ಧಿಯಿಂದ ಕೈಬಿಟ್ಟಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಸಚಿವ ಅಶ್ವತ್ಥ್ ಭಾಷಣ ವಿರೋಧಿಸಿ ವೇದಿಕೆಯಲ್ಲೇ ಧರಣಿ ನಡೆಸಲಾಗಿದೆ. ವೇದಿಕೆಯಲ್ಲೇ ಕುಳಿತು ಕೈ ಸಂಸದ ಡಿ.ಕೆ.ಸುರೇಶ್ ಧರಣಿ ಮಾಡಿದ್ದಾರೆ.
ರಾಮನಗರ: ರಾಮನಗರದಲ್ಲಿ ಕಾರ್ಯಕ್ರಮ ವೇಳೆ ಸಚಿವ, ಸಂಸದರ ಗಲಾಟೆ ನಡೆದಿದೆ. ಡಾ.ಅಶ್ವತ್ಥ್ ನಾರಾಯಣ, ಸಂಸದ ಡಿ.ಕೆ.ಸುರೇಶ್ ಮಧ್ಯೆ ಗಲಾಟೆ ಉಂಟಾಗಿದೆ. ಸಚಿವ ಡಾ.ಅಶ್ವತ್ಥ್ ಭಾಷಣಕ್ಕೆ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ನಮ್ಮ ಕಾಲದಲ್ಲೇ ಅಡಿಗಲ್ಲು, ನಮ್ಮ ಕಾಲದಲ್ಲೇ ಉದ್ಘಾಟನೆ’ ‘ನಮ್ಮ ಸರ್ಕಾರದಲ್ಲಿ ಬೇರೆ ಸರ್ಕಾರದ ರೀತಿ ಅಲ್ಲ’ ಎಂದು ಅಶ್ವತ್ಥ್ ನಾರಾಯಣ ಭಾಷನ ಮಾಡಿದ್ದಾರೆ. ನೀರಾವರಿ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಮ್ಮ ಅಭಿವೃದ್ಧಿ ಮಾಡಿಕೊಳ್ಳುವುದನ್ನು ಮಾತ್ರ ಮಾಡಿಕೊಳ್ಳಲ್ಲ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣ ಜತೆ ಡಿ.ಕೆ.ಸುರೇಶ್ ವಾಕ್ಸಮರ ನಡೆದಿದೆ.
ಅಶ್ವತ್ಥ್ ಬಳಿಯಿದ್ದ ಮೈಕ್ ಎಂಎಲ್ಸಿ ರವಿ ಹಿಡಿದು ಎಳೆದಾಡಿದ್ದಾರೆ. ಏನು ತಪ್ಪಾಗಿದೆ ಎಂದು ಕೂಗೋದು, ಕೆಲಸದಲ್ಲಿ ತೋರಿಸಿ. ಕಾರ್ಯಕ್ರಮದಲ್ಲಿ ಗಲಾಟೆ ಮಾಡೋದಾ? ಎಂದು ಡಾ.ಅಶ್ವತ್ಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ. ನಾವು ಏನು ಮಾಡಿದ್ದೇವೆ ಎಂಬುದನ್ನು ತೋರಿಸುತ್ತೇವೆ. ಜಿಲ್ಲೆಗೆ ವಂಚನೆ ಮಾಡಲು ಬಂದಿಲ್ಲ. ಸಿಎಂ ಬಂದಾಗ ಅವರಿಗೆ ಅಗೌರವ ತೋರಿಸುತ್ತೀರಾ? ಸಿಎಂ ಸಹಕಾರ ಕೊಡಲು ಬಂದಿದ್ದಾರೆ, ರಾಜಕಾರಣಕ್ಕೆ ಅಲ್ಲ. ರಾಮನಗರ ಜಿಲ್ಲೆಯಲ್ಲಿ ನಮ್ಮ ಪ್ರತಿನಿಧಿ ಇಲ್ಲದಿದ್ದರೂ ಕೈಬಿಟ್ಟಿಲ್ಲ. ಜಿಲ್ಲೆಯನ್ನು ಅಭಿವೃದ್ಧಿಯಿಂದ ಕೈಬಿಟ್ಟಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಸಚಿವ ಅಶ್ವತ್ಥ್ ಭಾಷಣ ವಿರೋಧಿಸಿ ವೇದಿಕೆಯಲ್ಲೇ ಧರಣಿ ನಡೆಸಲಾಗಿದೆ. ವೇದಿಕೆಯಲ್ಲೇ ಕುಳಿತು ಕೈ ಸಂಸದ ಡಿ.ಕೆ.ಸುರೇಶ್ ಧರಣಿ ಮಾಡಿದ್ದಾರೆ.
ಘಟನೆ ಬಗ್ಗೆ ಡಿ.ಕೆ. ಸುರೇಶ್ ಕಿಡಿ ಬಿಜೆಪಿ ಬಂದ ಮೇಲೆ ರೇಷ್ಮೆಗೆ ಬೆಲೆ ಬರಲಿಲ್ಲ. ಜನಪ್ರತಿನಿಧಿಗಳ ಸಭೆ ಕರೆದಿಲ್ಲ. ಸಂಸ್ಕೃತ ಯಾವುದು? RSSನವರು ಹೇಳಿಕೊಟ್ಟರಾ? ನಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡುವುದು ಬೇಡ. ಆರೋಗ್ಯ ವಿವಿಗೆ ವಿರೋಧ ವ್ಯಕ್ತಪಡಿಸಿದ್ದು ಸಚಿವ ಅಶ್ವತ್ಥ್ ನಾರಾಯಣ. ಸಿಂಡಿಕೇಟ್‌ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಸಚಿವ ಅಶ್ವತ್ಥ್ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂತ್ರಿಗಳು ಮಂತ್ರಿಗಳ ರೀತಿ ನಡೆದುಕೊಳ್ಳಲಿಲ್ಲ. ಸಚಿವರು ಸವಾಲೆಸೆದು ಕರೆದಾದ ಸುಮ್ಮನೆ ಕೂರಲು ಆಗಲಿಲ್ಲ. ಇದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಆದರೆ, ಇದು ಬಿಜೆಪಿ ಕಾರ್ಯಕ್ರಮದಂತೆ ಕಾಣುತ್ತಿತ್ತು. ರಾಮನಗರ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಪಡೆದಿದ್ದಾರೆ. ಇಲ್ಲಿ ಹಾಕಿರುವ ಎಲ್ಲಾ ಕಲ್ಲುಗಳನ್ನು ನಾವು ತಂದಿದ್ದೆವು. ಸಚಿವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ವೀರಾವೇಷ ಪ್ರದರ್ಶಿಸಿದಾಗ ಸುಮ್ಮನಿರಲಾಗಲಿಲ್ಲ. ಸಿಎಂ ಸಮ್ಮುಖದಲ್ಲಿ ವೇದಿಕೆಯಲ್ಲೇ ಅವರಿಗೆ ಉತ್ತರ ಕೊಟ್ಟಿದ್ದೇವೆ ಎಂದು ಘಟನೆ ಬಳಿಕ ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.
ವೇದಿಕೆಯಲ್ಲಿ ನಡೆದ ಘಟನೆಗೆ ಸಿಎಂರಲ್ಲಿ ಕ್ಷಮೆಯಾಚಿಸುವೆ: ಡಿ.ಕೆ. ಸುರೇಶ್ ವೇದಿಕೆಯಲ್ಲಿ ನಡೆದ ಘಟನೆಗೆ ಸಿಎಂರಲ್ಲಿ ಕ್ಷಮೆಯಾಚಿಸುವೆ. ಸಿಎಂ ಬಸವರಾಜ ಬೊಮ್ಮಾಯಿಗೆ ಮಾತ್ರ ಕ್ಷಮೆಯಾಚಿಸುವೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಕ್ಷಮೆಯಾಚನೆ ಮಾಡಿದ್ದಾರೆ. ನಾವು ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ರಾಮನಗರ ಜಿಲ್ಲೆಯ ಜನ ಯಾರಿಗೂ ಹೆದರಿಕೊಳ್ಳುವ ಜನರಲ್ಲ ಎಂದು ರಾಮನಗರದ ವೇದಿಕೆ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡುವೆ: ಡಿ.ಕೆ. ಸುರೇಶ್ ಹೇಳಿಕೆ ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡುವೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಚಾಲನೆ ಕೊಡಿ. ನಮ್ಮ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಬರುತ್ತಿದ್ದಾರೆಂದು ಅಂದು ಕೊಂಡಿದ್ದೆ. ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಹಣಕಾಸಿನ ಅವಶ್ಯಕತೆಯಿದೆ. ರಾಮನಗರದಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸಿಎಂ ಬಂದಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಸಂದರ್ಭವಿದು. ಅಂಬೇಡ್ಕರ್ ಪ್ರತಿಮೆ ನಿರ್ಮಾಣ ರಾಮನಗರ ಜನರ ಕೊಡುಗೆ. ಪ್ರತಿಮೆ ಅನಾವರಣ ಕಾರ್ಯಕ್ರಮ ಹಬ್ಬದಂತೆ ಆಗಬೇಕಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಬಂದಿದ್ದಕ್ಕೆ ಗೌರವವಿದೆ. ರಾಜಕೀಯ ಭಿನ್ನಾಭಿಪ್ರಾಯವಿದ್ದರೂ ಒಂದಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಿದ್ದೇವೆ. ಬಿಜೆಪಿಯವರು ರಾಮನಗರಕ್ಕೆ ಏನು ಕೊಟ್ಟಿದ್ದಾರೆಂಬ ಪಟ್ಟಿಯಿದೆ ಎಂದು ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಜಲಾಶಯ ನಿರ್ಮಾಣ ವಿವಾದ; ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
Published On - 2:30 pm, Mon, 3 January 22